ರೈತರ ಪ್ರತಿಭಟನೆ ಹೈಜಾಕ್?: ಪೊಲೀಸರ ಮೇಲೆ ತಲ್ವಾರ್ ಬೀಸಿದ ವಿಡಿಯೋ ವೈರಲ್
ಕೇಂದ್ರ ಸರ್ಕಾರದ ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ವಿರೋಧಿಸಿ ರೈತರು 61 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಜ.26 ರಂದು ತೀವ್ರ ಸ್ವರೂಪ ಪಡೆದುಕೊಂಡಿದ್ದು ಹಿಂಸಾಚಾರಕ್ಕೆ ತಿರುಗಿದೆ.
Published: 26th January 2021 04:20 PM | Last Updated: 26th January 2021 04:20 PM | A+A A-

ರೈತರ ಪ್ರತಿಭಟನೆ ಹೈಜಾಕ್?: ಪೊಲೀಸರ ಮೇಲೆ ತಲ್ವಾರ್ ಬೀಸಿದ ವಿಡಿಯೋ ವೈರಲ್
ನವದೆಹಲಿ: ಕೇಂದ್ರ ಸರ್ಕಾರದ ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ವಿರೋಧಿಸಿ ರೈತರು 61 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಜ.26 ರಂದು ತೀವ್ರ ಸ್ವರೂಪ ಪಡೆದುಕೊಂಡಿದ್ದು ಹಿಂಸಾಚಾರಕ್ಕೆ ತಿರುಗಿದೆ.
ಜ.26 ರಂದು ಶಾಂತಿಯುತವಾಗಿ ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತೇವೆ ಎಂದು ಹೇಳಿದ್ದ ರೈತರ ಪ್ರತಿಭಟನಾ ಮೆರವಣಿಗೆಯಲ್ಲಿ ಕೆಲವು ಕಿಡಿಗೇಡಿಗಳು ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ.
Ek talwar mughlo par uthi thi. Ek apne Police par. Speaks lot about mentality of these people. pic.twitter.com/TwN7LFIifk
— BALA (@erbmjha) January 26, 2021
ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಥ ಬದಲಿಸಿದ ಟ್ರ್ಯಾಕ್ಟರ್ ಗಳು ಪೊಲೀಸರತ್ತ ನುಗ್ಗಿ ಬಂದವು. ಅಷ್ಟೇ ಅಲ್ಲದೇ ಪ್ರತಿಭಟನೆಯನ್ನು ಹೈಜಾಕ್ ಮಾಡಿದ ಕೆಲವು ಕಿಡಿಗೇಡಿಗಳು ಪೊಲೀಸರತ್ತ ತಲ್ವಾರ್ ಬೀಸಿ ಹಿಂಸಾಚಾರವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ರೈತರ ಸೋಗಿನಲ್ಲಿ ಪೊಲೀಸರ ಮೇಲೆ ತಲ್ವಾರ್ ಬೀಸಿರುವ ವಿಡಿಯೋಗಳು ವೈರಲ್ ಆಗತೊಡಗಿವೆ.
ಇನ್ನು ಇದೇ ವೇಳೆ ಕೆಂಪು ಕೋಟೆಯಲ್ಲಿ ತಿರಂಗಾವನ್ನು ಇಳಿಸಿ ರೈತರ ಸೋಗಿನಲ್ಲಿದ್ದವರು ಹಾರಿಸಿದ್ದು ಕೇಸರಿ ಬಣ್ಣದ ನಿಶಾನ್ ಸಾಹಿಬ್ ನ್ನು ಹಾರಿಸಿದ್ದಾರೆ. ಕೆಲವರು ಇದನ್ನು ಖಲಿಸ್ತಾನ ಧ್ವಜ ಎಂದು ಹೇಳುತ್ತಿದ್ದಾರಾದರೂ ಅದು ಖಲಿಸ್ತಾನದ ಧ್ವಜವಲ್ಲ ಬದಲಾಗಿ ಅದು ಸಿಖ್ ಧರ್ಮವನ್ನು ಪ್ರತಿನಿಧಿಸುವ ನಿಶಾನ್ ಸಾಹಿಬ್ ಎನ್ನಲಾಗುತ್ತಿದೆ.