ದೆಹಲಿಯಲ್ಲಿ ಇಂದು ರೈತರ ಶಕ್ತಿ ಪ್ರದರ್ಶನ: 'ಕಿಸಾನ್ ಗಣತಂತ್ರ ಪರೇಡ್' ಗೆ ನೂರಾರು ಮಹಿಳೆಯರು ಸಾಥ್
ದೇಶದ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಗಣರಾಜ್ಯೋತ್ಸವ ದಿನ ಶಕ್ತಿ ಪ್ರದರ್ಶನಕ್ಕೆ ರೈತರು ಸಜ್ಜಾಗಿದ್ದಾರೆ. ಇಂದು ಸಾವಿರಾರು ಮಂದಿ ರೈತರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಿಸಾನ್ ಗಣತಂತ್ರ ಪರೇಡ್ ಹಮ್ಮಿಕೊಂಡಿದ್ದು, ಇಷ್ಟು ದಿನ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಇಂದು ದೆಹಲಿಯೊಳಗೆ ತೀವ್ರ ಭದ್ರತೆ ನಡುವೆ ಪ್ರವೇಶಿಸಲಿದ್
Published: 26th January 2021 07:24 AM | Last Updated: 26th January 2021 07:37 AM | A+A A-

ನಿನ್ನೆ ದೆಹಲಿಯ ಗಡಿಭಾಗದಲ್ಲಿ ಟ್ರ್ಯಾಕ್ಟರ್ ರ್ಯಾಲಿಗೆ ನಡೆಸಿದ್ದ ಪೂರ್ವ ಸಿದ್ದತೆಯಲ್ಲಿ ಮಹಿಳೆಯರು
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಗಣರಾಜ್ಯೋತ್ಸವ ದಿನ ಶಕ್ತಿ ಪ್ರದರ್ಶನಕ್ಕೆ ರೈತರು ಸಜ್ಜಾಗಿದ್ದಾರೆ.
ಇಂದು ಸಾವಿರಾರು ಮಂದಿ ರೈತರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಿಸಾನ್ ಗಣತಂತ್ರ ಪರೇಡ್ ಹಮ್ಮಿಕೊಂಡಿದ್ದು, ಇಷ್ಟು ದಿನ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಇಂದು ದೆಹಲಿಯೊಳಗೆ ತೀವ್ರ ಭದ್ರತೆ ನಡುವೆ ಪ್ರವೇಶಿಸಲಿದ್ದಾರೆ.
ಪುರುಷ ರೈತರ ಜೊತೆಗೆ ಇಂದು ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಮಹಿಳೆಯರು ಕೂಡ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಝೆಬಾ ಖಾನ್ ತಿಳಿಸಿದ್ದಾರೆ.
ಇಂದು ಸುಮಾರು 500 ಮಂದಿ ಮಹಿಳೆಯರು ಭಾಗವಹಿಸುತ್ತಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಮಹಿಳೆಯರ ಕೊಡುಗೆ ಅಪಾರವಾಗಿತ್ತು. ಮಹಿಳೆಯರ ಶಕ್ತಿ, ಸಾಮರ್ಥ್ಯಗಳನ್ನು ತಳ್ಳಿಹಾಕುವಂತಿಲ್ಲ. ಇಂದಿನ ರೈತ ಚಳವಳಿಗೂ ಮಹಿಳೆಯರು ಸಾಥ್ ನೀಡಲಿದ್ದೇವೆ ಎಂದರು.
ಜಾರ್ಖಂಡ್ ನ ರೈತ ಕುಟುಂಬದಿಂದ ಬಂದಿರುವ ಝೆಬಾ ಖಾನ್, ರೈತರ ಪ್ರತಿಭಟನೆಯಲ್ಲಿ ಇಂದಿನ ಟ್ರ್ಯಾಕ್ಟರ್ ರ್ಯಾಲಿ ಅತ್ಯಂತ ಮಹತ್ವದ್ದಾಗಿದ್ದು, ಇದು ಸ್ವಾತಂತ್ರ್ಯ ಚಳವಳಿಗಿಂತ ಕಡಿಮೆಯಲ್ಲ. ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳು ಸ್ವಾತಂತ್ರ್ಯ ಸಿಗುವ ಮುನ್ನ ಭಾರತೀಯರಿಗಿದ್ದ ಗುಲಾಮಗಿರಿ ಪರಿಸ್ಥಿತಿಯನ್ನೇ ರೈತರಿಗೆ ತಂದೊಡ್ಡುತ್ತದೆ. ಹೀಗಾಗಿ ಇದನ್ನು ಸರ್ಕಾರ ಹಿಂಪಡೆಯಲೇಬೇಕು. ಇದಕ್ಕಾಗಿ ನಮ್ಮ ಹಕ್ಕುಗಳಿಗಾಗಿ ಇಂದಿನ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದೇವೆ ಎಂದರು.
ಇಂದಿನ ಟ್ರ್ಯಾಕ್ಟರ್ ಪರೇಡ್ ದೆಹಲಿಯ ಮುಖ್ಯ ನಗರದೊಳಗೆ ಪ್ರವೇಶಿಸುವುದಿಲ್ಲ. ಇಂದು ಸರ್ಕಾರದ ಗಣರಾಜ್ಯೋತ್ಸವ ಸಮಾರಂಭ ಮುಗಿದ ಬಳಿಕವಷ್ಟೇ ಆರಂಭವಾಗಲಿದೆ. ಇಂದಿನ ಪರೇಡ್ ನಲ್ಲಿ ಸುಮಾರು 2 ಲಕ್ಷ ಟ್ರ್ಯಾಕ್ಟರ್ ಗಳು ರಸ್ತೆಗಿಳಿಯಲಿವೆ ಎಂದು ಹೇಳಲಾಗುತ್ತಿದ್ದು, ದೆಹಲಿಯ ಗಡಿಭಾಗಗಳಾದ ಸಿಂಘು, ಟೆಕ್ರಿ ಮತ್ತು ಗಾಜಿಪುರ್ ನಿಂದ ಹೊರಡಲಿವೆ.
ಹರ್ಯಾಣದ ಜಿಂದ್ ಜಿಲ್ಲೆಯ ಹಲವು ಗ್ರಾಮೀಣ ಮಹಿಳೆಯರಿಗೆ ಈ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಟ್ರ್ಯಾಕ್ಟರ್ ಗಳನ್ನು ಚಲಾಯಿಸಲು ಕಳೆದ ಒಂದು ತಿಂಗಳಿನಿಂದ ತರಬೇತಿ ನೀಡಲಾಗುತ್ತಿತ್ತು.