ಐಐಟಿ-ಎಂ ಪ್ರಾಧ್ಯಾಪಕರ ವಿರುದ್ಧ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ; ಹಿಂಬಡ್ತಿ 

ಐಐಟಿ ಮದ್ರಾಸ್ ಪ್ರಾಧ್ಯಾಪಕರ ವಿರುದ್ಧ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತಾಗಿದ್ದು ಲೈಂಗಿಕ ಕಿರುಕುಳದ ವಿರುದ್ಧ ದೂರುಗಳ ಸಮಿತಿ (ಸಿಸಿಎಎಸ್ಎಚ್) ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ. 

Published: 26th January 2021 11:30 AM  |   Last Updated: 26th January 2021 11:30 AM   |  A+A-


IIT-M professor accused of sexually harassing PhD scholar; demoted

ಐಐಟಿ-ಎಂ ಪ್ರಾಧ್ಯಾಪಕರ ವಿರುದ್ಧ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ; ಹಿಂಬಡ್ತಿ

Posted By : Srinivas Rao BV
Source : The New Indian Express

ಚೆನ್ನೈ: ಐಐಟಿ ಮದ್ರಾಸ್ ಪ್ರಾಧ್ಯಾಪಕರ ವಿರುದ್ಧ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತಾಗಿದ್ದು ಲೈಂಗಿಕ ಕಿರುಕುಳದ ವಿರುದ್ಧ ದೂರುಗಳ ಸಮಿತಿ (ಸಿಸಿಎಎಸ್ಎಚ್) ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ. 

ಅಪರಾಧಿ ಸಿವಿಲ್ ಇಂಜಿನಿಯಂಗ್ ವಿಭಾಗದ  ಪ್ರಾಧ್ಯಾಪಕರಾಗಿದ್ದಾರೆ. ಮಾಧವ ಕುಮಾರ್ ಎಂಬ ಪ್ರಾಧ್ಯಾಪಕರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪಿಹೆಚ್ ವಿದ್ಯಾರ್ಥಿನಿಯೊಬ್ಬರು ಪ್ರಾಧ್ಯಾಪಕಿ ಹೇಮಾ ಎ ಮೂರ್ತಿ ನೇತೃತ್ವದ ಪಂಚ ಸದಸ್ಯ ಸಮಿತಿಗೆ ದೂರು ನೀಡಿದ್ದರು. 

ವಾಟ್ಸ್ ಆಪ್ ಚಾಟ್ ಗಳು ಸೇರಿದಂತೆ ಇನ್ನೂ ಹಲವು ಸಾಕ್ಷ್ಯಗಳಿಂದ ಮಾಧವ ಕುಮಾರ್ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು ಸಾಬೀತಾಗಿದೆ. 

"ಮಾಧವ ಕುಮಾರ್ ಗೈಡ್ ನ ಸ್ಥಾನವನ್ನು ಹಾಗೂ ದೂರು ನೀಡಿರುವ ಮಹಿಳೆ ಒಬ್ಬಂಟಿ ಪೋಷಕಿ (ಸಿಂಗಲ್ ಪೇರೆಂಟ್)ಯಾಗಿದ್ದದ್ದನ್ನು ದುರುಪಯೋಗಪಡಿಸಿಕೊಂಡು ಲೈಂಗಿಕ ಕಿರುಕುಳಾ ನೀಡಿರುವುದು ಸಾಬೀತಾಗಿದೆ ಎಂದು ಸಮಿತಿ ತಿಳಿಸಿದೆ. 

ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಐಐಟಿ ಮದ್ರಾಸ್ ಮಾಧವ ಕುಮಾರ್ ಅವರನ್ನು POSH  ತರಬೇತಿಗೆ ಕಳಿಸಬೇಕು ಹಾಗೂ 2 ವರ್ಷಗಳ ಕಾಲ ಪಿಹೆಚ್ ಡಿ ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳದಂತೆ, ವಿದ್ಯಾರ್ಥಿನಿಯರಿಗೆ 5 ವರ್ಷಗಳ ಕಾಲ ತರಗತಿಗಳನ್ನು ತೆಗೆದುಕೊಳ್ಳದಂತೆ ನಿರ್ಬಂಧ ವಿಧಿಸಿ, ಸಹಾಯಕ ಪ್ರಾಧ್ಯಾಪಕರಾಗಿ ಹಿಂಬಡ್ತಿ ನೀಡಬೇಕೆಂದು' ಸಮಿತಿ ಶಿಫಾರಸು ಮಾಡಿದೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp