ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಮೊದಲ ಮಹಿಳಾ ಪೈಲಟ್!

ದೇಶದ ಮೂವರು ಮಹಿಳಾ ಯುದ್ಧ ಪೈಲಟ್ ಗಳಲ್ಲಿ ಒಬ್ಬರಾದ ಲೆಫ್ಟಿನೆಂಟ್ ಭಾವನಾ ಕಾಂತ್ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜಪಥ್ ನಲ್ಲಿ ನಡೆದ ಭಾರತೀಯ ವಾಯುಪಡೆಯ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಾಕ್ಷಿಯಾದರು.

Published: 26th January 2021 11:17 AM  |   Last Updated: 26th January 2021 11:17 AM   |  A+A-


Flt Lt Bhawna Kanth, one of the first three female fighter pilots of the country

ರಾಜಪಥ್ ನಲ್ಲಿ ನಡೆದ ಪಥಸಂಚಲನ, ಬಲಚಿತ್ರದಲ್ಲಿ ಲೆಫ್ಟಿನೆಂಟ್ ಭಾವನಾ ಕಾಂತ್

Posted By : Sumana Upadhyaya
Source : ANI

ನವದೆಹಲಿ: ದೇಶದ ಮೂವರು ಮಹಿಳಾ ಯುದ್ಧ ಪೈಲಟ್ ಗಳಲ್ಲಿ ಒಬ್ಬರಾದ ಲೆಫ್ಟಿನೆಂಟ್ ಭಾವನಾ ಕಾಂತ್ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜಪಥ್ ನಲ್ಲಿ ನಡೆದ ಭಾರತೀಯ ವಾಯುಪಡೆಯ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಾಕ್ಷಿಯಾದರು.

ಭಾರತೀಯ ವಾಯುಪಡೆ ಹಗುರ ಯುದ್ಧವಿಮಾನ, ಹಗುರ ಯುದ್ಧ ಹೆಲಿಕಾಪ್ಟರ್ ಮತ್ತು ಸುಕೊಯ್-30 ಯುದ್ಧ ವಿಮಾನಗಳ ಪ್ರದರ್ಶನವನ್ನು ಏರ್ಪಡಿಸಿತ್ತು.

ಬಿಹಾರದ ದರ್ಬಾಂಗ್ ನವರಾದ ಭಾವನಾ ಕಾಂತ್, ಬೆಗುಸರೈಯಲ್ಲಿ ಬೆಳೆದಿದ್ದರು. ಅಲ್ಲಿ ಅವರ ತಂದೆ ಐಒಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬಾರೌನಿ ರಿಫೈನರಿ ಡಿಎವಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ವೈದ್ಯಕೀಯ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.
ವಿಮಾನ ಹಾರಾಟ ನಡೆಸುವುದು ಮಾತ್ರವಲ್ಲದೆ ಬ್ಯಾಡ್ಮಿಂಟನ್ ಆಡುವುದು, ವಾಲಿಬಾಲ್, ಸಾಹಸ ಕ್ರೀಡೆಗಳು, ಫೋಟೋಗ್ರಫಿ, ಅಡುಗೆ ಮಾಡುವುದು, ಈಜು ಮತ್ತು ಪ್ರವಾಸ ಹೋಗುವ ಹವ್ಯಾಸವನ್ನು ಭಾವನ ಕಾಂತ್ ಹೊಂದಿದ್ದಾರೆ.

ಇನ್ನು 140 ವಾಯು ರಕ್ಷಣಾ ರೆಜಿಮೆಂಟ್ ನ ಸುಧಾರಿತ ಸ್ಚಿಲ್ಕ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಕ್ಯಾಪ್ಟನ್ ಪ್ರೀತಿ ಚೌಧರಿ ಮುನ್ನಡೆಸಿದ್ದಾರೆ.ಇಂದು ಪಥಸಂಚಲನದಲ್ಲಿ ಭಾಗವಹಿಸಿದ ಏಕೈಕ ಮಹಿಳಾ ರೆಜಿಮೆಂಟ್ ಕಮಾಂಡರ್ ಕ್ಯಾಪ್ಟನ್ ಪ್ರೀತಿ ಚೌಧರಿ ಆಗಿದ್ದಾರೆ. 

ಸ್ಚಿಲ್ಕ ಶಸ್ತ್ರಾಸ್ತ್ರ ವ್ಯವಸ್ಥೆ ಆಧುನಿಕ ರಾಡಾರ್ ಮತ್ತು ಡಿಜಿಟಲ್ ಅಗ್ನಿ ನಿಯಂತ್ರಣ ಕಂಪ್ಯೂಟರ್ ನ್ನು ಹೊಂದಿದೆ.

ಇಂದು ಮಹಿಳೆಯರು ಕೂಡ ದೇಶದ ಮಿಲಿಟರಿಯ ಮೂರೂ ಪಡೆಗಳಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ, ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ರಾಜಪಥ್ ನಲ್ಲಿ ನಡೆದ ಪರೇಡ್ ನಲ್ಲಿ ಎನ್ ಸಿಸಿ ಹೆಣ್ಣುಮಕ್ಕಳು ಮಹಾರಾಷ್ಟ್ರದ ಎನ್ ಸಿಸಿ ನಿರ್ದೇಶನಾಲಯದ ಹಿರಿಯ ಅಧೀನ ಅಧಿಕಾರಿ ಸಮೃದ್ಧಿ ಹರ್ಷಲ್ ಸಂತ್ ನೇತೃತ್ವದಲ್ಲಿ ಪಥ ಸಂಚಲನ ಸಾಗಿದರು. 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp