ರೈತರ ಹೆಸರಿನಲ್ಲಿ ದೆಹಲಿಯಲ್ಲಿ ಗೂಂಡಾಗಿರಿ: ನಳಿನ್ಕುಮಾರ್ ಕಟೀಲ್ ಖಂಡನೆ
ಜನವರಿ 26 ನಮ್ಮೆಲ್ಲ ದೇಶವಾಸಿಗಳಿಗೆ ಅತ್ಯಂತ ಪವಿತ್ರವಾದ ದಿನ. ನಾವೆಲ್ಲರೂ ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯಾಗಿರುವ ಪವಿತ್ರವಾದ ಸಂವಿಧಾನವನ್ನು ಅಳವಡಿಸಿಕೊಂಡಿರುವ ದಿನ. ಇದೊಂದು ರಾಷ್ಟ್ರೀಯ ಉತ್ಸವ.
Published: 26th January 2021 08:00 PM | Last Updated: 26th January 2021 08:22 PM | A+A A-

ನಳಿನ್ ಕುಮಾರ್ ಕಟೀಲ್
ಬೆಂಗಳೂರು: ಜನವರಿ 26 ನಮ್ಮೆಲ್ಲ ದೇಶವಾಸಿಗಳಿಗೆ ಅತ್ಯಂತ ಪವಿತ್ರವಾದ ದಿನ. ನಾವೆಲ್ಲರೂ ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯಾಗಿರುವ ಪವಿತ್ರವಾದ ಸಂವಿಧಾನವನ್ನು ಅಳವಡಿಸಿಕೊಂಡಿರುವ ದಿನ. ಇದೊಂದು ರಾಷ್ಟ್ರೀಯ ಉತ್ಸವ. ಇಂತಹ ದಿನದಂದು ರೈತರ ಹೆಸರಿನಲ್ಲಿ ದೆಹಲಿಯಲ್ಲಿ ಗೂಂಡಾಗಿರಿ ಮಾಡಿರುವ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಾವೆಲ್ಲರೂ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಅತ್ಯಂತ ಸಂಭ್ರಮದಿಂದ ಭಾಗವಹಿಸುತ್ತ, ಸಂವಿಧಾನವನ್ನು ಗೌರವಿಸಿ ನಮ್ಮ ಬದ್ಧತೆಯ ನ್ನು ಮತ್ತೊಮ್ಮೆ ಪ್ರದರ್ಶಿಸಬೇಕಾದ ದಿನ.
ಈ ಪವಿತ್ರ ದಿನದಂದು ಪ್ರಜಾಪ್ರಭುತ್ವವನ್ನು ಧಿಕ್ಕರಿಸಿ ಸಂವಿಧಾನದ ಆಶಯವನ್ನು ಅಗೌರವಿಸಿ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜವನ್ನು ಗೌರವಿಸುವ ಪವಿತ್ರ ನೆಲೆಯಾದ ದೆಹಲಿಯ ಐತಿಹಾಸಕ ಕೆಂಪುಕೋಟೆಯಲ್ಲಿ ಗೂಂಡಾಗಿರಿ ಪ್ರದ ರ್ಶನ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿ ದೇಶವಿರೋಧಿ ಶಕ್ತಿಗಳಾದ ಖಲಿಸ್ತಾನ್ ಧ್ವಜವನ್ನು ಹಾರಿಸಿರುವು ದು ಅಕ್ಷಮ್ಯ ಅಪರಾಧ.
ಭಾರತೀಯ ಜನತಾ ಪಾರ್ಟಿ ಈ ಗೂಂಡಾಗಿರಿ ಪ್ರವೃತ್ತಿಯನ್ನು, ವ್ಯವಸ್ಥೆಯ ಮೇಲೆ ಮಾಡಿರುವ ಹಲ್ಲೆಯನ್ನು, ಪೊಲೀಸರ ಮೇಲೆ ನಡೆಸಿರುವ ದೌರ್ಜನ್ಯವನ್ನು ಹಾಗೂ ಸಂವಿಧಾನವನ್ನು ಧಿಕ್ಕರಿಸುವ ದೇಶವಿರೋಧಿ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ನಳಿನ್ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.