ದೆಹಲಿ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ ರೈತರು, ವಿಡಿಯೋ!

ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು ಧ್ವಜಸ್ತಂಭ ಮತ್ತು ಕೆಂಪುಕೋಟೆಯ ಗುಂಬಜ್ ಮೇಲೆ ಕಿಸಾನ್ ಮತ್ತು ಸಿಖ್ ಬಾವುಟವನ್ನು ಹಾರಿಸಲಾಗಿದೆ.

Published: 26th January 2021 03:51 PM  |   Last Updated: 26th January 2021 03:54 PM   |  A+A-


Incident Photo

ಪ್ರತ್ಯಕ್ಷ ದೃಶ್ಯ

Posted By : Vishwanath S
Source : Online Desk

ನವದೆಹಲಿ: ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು ಧ್ವಜಸ್ತಂಭ ಮತ್ತು ಕೆಂಪುಕೋಟೆಯ ಗುಂಬಜ್ ಮೇಲೆ ಕಿಸಾನ್ ಮತ್ತು ಸಿಖ್ ಬಾವುಟವನ್ನು ಹಾರಿಸಲಾಗಿದೆ. 

ಕೆಂಪುಕೋಟೆಗೆ ನುಗ್ಗಿದ ರೈತರು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜ ಹಾರಿಸುವ ಧ್ವಜಸ್ಥಂಭದ ಮೇಲೆ ಕಿಸಾನ್ ಮತ್ತು ಸಿಖ್ ಧ್ವಜವನ್ನು ಹಾರಿಸಿದ್ದಾರೆ. ಇನ್ನು ಕೆಲ ರೈತರು ಗುಂಜಬ್ ಮೇಲೆ ಸಿಖ್ ಧ್ವಜವನ್ನು ಹಾರಿಸಿದ್ದಾರೆ. 

ಈ ವೇಳೆ ಪೊಲೀಸರು ಹರಸಾಹಸ ಪಟ್ಟು ರೈತರನ್ನು ಚದುರಿಸಬೇಕಾಯಿತು. ಲಾಠಿ ಚಾರ್ಜ್ ಮತ್ತು ಟಿಯರ್ ಗ್ಯಾಸ್ ಪ್ರಯೋಗಿಸುತ್ತಾ ಪೊಲೀಸರು ರೈತರನ್ನು ಕೆಂಪುಕೋಟೆ ಆವರಣದಿಂದ ಚದುರಿಸುತ್ತಿದ್ದಾರೆ. 

ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕೆಲ ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಇಂದು ಕೆಂಪುಕೋಟೆಗೆ ಮುತ್ತಿಗೆ ಹಾಕಿದರು. ಇನ್ನು ಇತಿಹಾಸದಲ್ಲಿ ಮೊದಲ ಬಾರಿಗೆ ಕೆಂಪುಕೋಟೆಗೆ ರೈತರು ಮುತ್ತಿಗೆ ಹಾಕಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp