72ನೇ ಗಣರಾಜ್ಯೋತ್ಸವ ಸಂಭ್ರಮ: ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮ ವೀರ ಯೋಧರಿಗೆ ಪ್ರಧಾನಿ ಮೋದಿ ನಮನ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 72ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಡಿಯಾಗೇಟ್ ಬಳಿಯಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮ ವೀರ ಯೋಧರಿಗೆ ನಮನ ಸಲ್ಲಿಸಿದರು.
Published: 26th January 2021 10:09 AM | Last Updated: 26th January 2021 10:24 AM | A+A A-

ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮ ವೀರ ಯೋಧರಿಗೆ ಪ್ರಧಾನಿ ಮೋದಿ ನಮನ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 72ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಡಿಯಾಗೇಟ್ ಬಳಿಯಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮ ವೀರ ಯೋಧರಿಗೆ ನಮನ ಸಲ್ಲಿಸಿದರು.
ರಾಷ್ಟ್ರಗೀತೆ ಹಾಡಿದ ನಂತರ ಬಂದೂಕು ಗೌರವ ವಂದನೆ ಸಲ್ಲಿಸಲಾಯಿತು. ಯುದ್ಧ ಸ್ಮಾರಕದ ಸಂದರ್ಶಕರ ಪುಸ್ತಕದಲ್ಲಿ ಮೋದಿ ತಮ್ಮ ಚಿಂತನೆಗಳನ್ನು ಬರೆದಿದ್ದಾರೆ.
ಮೋದಿಯವರು ಅಮರ ಜವಾನ್ ಜ್ಯೋತಿಗೆ ನಮನ ಸಲ್ಲಿಸಿದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿದ್ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂದ್, ಮೂರು ಪಡೆಗಳ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತೀಯ ಸೇನಾಪಡೆ ಮುಖ್ಯಸ್ಥ ಎಂಎಂ ನರವಾಣೆ, ನೌಕಾಪಡೆಯ ಮುಖ್ಯಸ್ಥ ಕರಂಬೀರ್ ಸಿಂಗ್ ಹಾಗೂ ಭಾರತೀಯ ವಾಯುಪಡೆಯ ಮಾರ್ಷಲ್ ಆರ್'ಕೆಎಸ್ ಭದೌರಿಯಾ ಅವರು ಹಾಜರಿದ್ದರು.
ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದೇಶಿ ಅತಿಥಿ ಭಾಗಿಯಾಗ್ತಿಲ್ಲ. ಜೊತೆಗೆ ಬಾಂಗ್ಲಾದೇಶ ವಿಮೋಚನೆಯ 50ನೇ ವರ್ಷದ ನೆನಪಿಗಾಗಿ ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಬಾಂಗ್ಲಾದೇಶದ ಸೇನಾ ತುಕಡಿ ಭಾಗಿಯಾಗಲಿದೆ.
ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆ ಮಾಡುವಾಗ ದೈಹಿಕ ಅಂತರ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗಿದ್ದು, ಇದೇ ಕಾರಣಕ್ಕೆ ಪರೇಡ್ ವೀಕ್ಷಣೆಗೆ 1 ಲಕ್ಷ 25 ಸಾವಿರ ಜನರ ಬದಲು 25 ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಿದ್ದಾರೆ.
ಎಲ್ಲಕ್ಕಿಂತಾ ಮುಖ್ಯವಾಗಿ, ಈ ಬಾರಿ 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಪರೇಡ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ರಾಜಪಥದಲ್ಲಿ ವಿವಿಧ ರಾಜ್ಯಗಳ 17 ಸ್ತಬ್ದಚಿತ್ರಗಳು ಸೇರಿ ಒಟ್ಟು 31 ಸ್ತಬ್ದಚಿತ್ರಗಳು ಪ್ರದರ್ಶನವಾಗಲಿದ್ದು, ಸ್ತಬ್ದಚಿತ್ರಗಳ ಜೊತೆ ಸಂಚರಿಸುವ ಕಲಾವಿದರ ಸಂಖ್ಯೆಯನ್ನೂ ಕಡಿಮೆ ಮಾಡಿದ್ದಾರೆ.
ಪರೇಡ್ ವೀಕ್ಷಣೆ ವೇಳೆ ಕೊರೊನಾ ಲಕ್ಷಣ ಕಂಡು ಬಂದರೆ, ಅಂತೋರು ವಿಶ್ರಾಂತಿ ಪಡೆಯೋಕೆ 8 ವಿಶ್ರಾಂತಿ ಬೂತ್ಗಳ ವ್ಯವಸ್ಥೆ ಮಾಡಲಾಗಿದೆ. ಗಣರಾಜ್ಯೋತ್ಸವದ ಏರ್ಶೋನಲ್ಲಿ ರಫೇಲ್ ಫೈಟರ್ ಜೆಟ್ಗಳು ಭಾಗಿಯಾಗಲಿವೆ.