ಟಿಕ್ ಟಾಕ್ ಸೇರಿದಂತೆ ಚೀನಾದ 59 ಆ್ಯಪ್ ಗಳ ಮೇಲೆ ಭಾರತದಲ್ಲಿ ಶಾಶ್ವತ ನಿಷೇಧ?

ಚೀನಾ ಜೊತೆಗಿನ ಗಡಿ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಆ್ಯಪ್ ಗಳ ಮೇಲೆ ಶಾಶ್ವತ ನಿಷೇಧ ಹೇರಲು ಮುಂದಾಗಿದೆ ಎಂದು ಹೇಳಲಾಗಿದೆ.

Published: 26th January 2021 09:11 PM  |   Last Updated: 26th January 2021 09:11 PM   |  A+A-


TikTok

ಟಿಕ್‌ಟಾಕ್

Posted By : Srinivasamurthy VN
Source : Online Desk

ನವದೆಹಲಿ: ಚೀನಾ ಜೊತೆಗಿನ ಗಡಿ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಆ್ಯಪ್ ಗಳ ಮೇಲೆ ಶಾಶ್ವತ ನಿಷೇಧ ಹೇರಲು ಮುಂದಾಗಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಈ ಹಿಂದೆ ಭಾರತ ಸರ್ಕಾರ ಸುಮಾರು 59 ಚೀನಾ ಅಪ್ಲಿಕೇಷನ್​ಗಳಿಗೆ ಭಾರತ ಶೋ ಕಾಸ್ ನೋಟೀಸ್ ನೀಡಿತ್ತು. ಇದಾದ ಏಳು ತಿಂಗಳ ನಂತರ, ಈಗ ಭಾರತ ಸರ್ಕಾರ ಚೀನಾದ ಅಪ್ಲಿಕೇಷನ್​ಗಳನ್ನು ಶಾಶ್ವತವಾಗಿ ನಿರ್ಬಂಧಿಸುವ ಬಗ್ಗೆ ಹೊಸ ನೋಟೀಸು ಜಾರಿಗೊಳಿಸಿದೆ. ಈ ಮೂಲಕ ಟಿಕ್​ಟಾಕ್ ಸಹಿತ 59 ಚೀನಾ ಆಪ್​ಗಳು ಶಾಶ್ವತವಾಗಿ ಬ್ಯಾನ್ ಆಗಲಿವೆ ಎಂದು ಹೇಳಲಾಗಿದೆ.

ಅಪ್ಲಿಕೇಷನ್​ಗಳನ್ನು ನಿರ್ಬಂಧಿಸುವ ಬಗ್ಗೆ ಚೀನಾ ಆಪ್​ಗಳು ನೀಡಿದ ಉತ್ತರ ಮತ್ತು ಸ್ಪಷ್ಟೀಕರಣಗಳು ಅಸಮರ್ಪಕ,  ಅಪೂರ್ಣವಾಗಿವೆ. ಹಾಗಾಗಿ, 59 ಚೀನಾ ಅಪ್ಲಿಕೇಷನ್​ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು ನೋಟೀಸ್ ನೀಡಲಾಗಿದೆ ಎಂದು ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ 59 ಚೀನಾ ಅಪ್ಲಿಕೇಷನ್​ಗಳ ಮೇಲೆ ಭಾರತ ಸರ್ಕಾರ ತಾತ್ಕಾಲಿಕ ನಿರ್ಬಂಧ ಹೇರಿತ್ತು. ಅವುಗಳು ಭಾರತದ ಸಾರ್ವಭೌಮತ್ವ, ಏಕತೆ ಹಾಗೂ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಪೂರ್ವಾಗ್ರಹ ಹೊಂದಿವೆ ಎಂದು ಆರೋಪಿಸಲಾಗಿತ್ತು. ಟಿಕ್​ಟಾಕ್, ಹೆಲೋ, ವಿ ಚಾಟ್, ಅಲಿಬಾಬಾ ಕಂಪೆನಿಯ ಯುಸಿ ಬ್ರೌಸರ್, ಯುಸಿ ನ್ಯೂಸ್, ಶೈನ್, ಕಲ್ಬ್ ಫ್ಯಾಕ್ಟರಿ, ಲೈಕೀ, ಬಿಗೊ ಲೈವ್, ಕ್ವಾಯ್, ಕ್ಲಾಷ್ ಆಫ್ ಕಿಂಗ್ಸ್ ಹಾಗೂ ಕ್ಯಾಮ್ ಸ್ಕಾನರ್ ಸಹಿತ 59 ಆಪ್​ಗಳ ಮೇಲೆ ಭಾರತ ನಿರ್ಬಂಧ ಹೇರಿತ್ತು.
 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp