ಕೆಂಪುಕೋಟೆಗೆ ರೈತರ ಪ್ರವೇಶ ಖಂಡನೀಯ- ಕೇಂದ್ರ ಪ್ರವಾಸೋದ್ಯಮ ಸಚಿವ
ಐತಿಹಾಸಿಕ ಕೆಂಪು ಕೋಟೆಗೆ ಪ್ರವೇಶಿಸಿ ರೈತರು ಧ್ವಜ ಹಾರಿಸಿರುವುದನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರಲ್ಹಾದ್ ಪಟೇಲ್ ಖಂಡಿಸಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವದ ಘನತೆಗೆ ಮಾಡಿದ ಅಗೌರವ ಎಂದು ಅವರು ಹೇಳಿದ್ದಾರೆ.
Published: 26th January 2021 04:20 PM | Last Updated: 26th January 2021 04:21 PM | A+A A-

ಕೆಂಪು ಕೋಟೆ ಬಳಿ ರೈತರು
ನವದೆಹಲಿ: ಐತಿಹಾಸಿಕ ಕೆಂಪು ಕೋಟೆಗೆ ಪ್ರವೇಶಿಸಿ ರೈತರು ಧ್ವಜ ಹಾರಿಸಿರುವುದನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರಲ್ಹಾದ್ ಪಟೇಲ್ ಖಂಡಿಸಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವದ ಘನತೆಗೆ ಮಾಡಿದ ಅಗೌರವ ಎಂದು ಅವರು ಹೇಳಿದ್ದಾರೆ.
ಉದ್ದೇಶಿತ ಟ್ರ್ಯಾಕ್ಟರ್ ಪರೇಡ್ಗಾಗಿ ಗೊತ್ತುಪಡಿಸಿದ ಮಾರ್ಗದಿಂದ ವಿಮುಖರಾಗಿ ಪೊಲೀಸರಿಂದ ಹಿಂದಕ್ಕೆ ಕಳುಹಿಸಲಾದ ಪ್ರತಿಭಟನಾಕಾರರ ಗುಂಪೊಂದು ಕೆಂಪು ಕೋಟೆಯ ಕಡೆಗೆ ನುಗ್ಗಿದೆ. ಕೆಲ ರೈತರು ಹಾಗೂ ನಿಹಾಂಗ್ ( ಸಾಂಪ್ರದಾಯಿಕ ಸಿಖ್ ಯೋಧರು) ಕೆಂಪು ಕೋಟೆ ಪ್ರವೇಶಿಸಿದ್ದು, ಧ್ವಂಜಸ್ತಂಭವನ್ನೇರಿ ಬಾವುಟ ಹಾರಿಸಿದ್ದಾರೆ.
ಕೆಂಪುಕೋಟೆ ನಮ್ಮ ಪ್ರಜಾಪ್ರಭುತ್ವದ ಘನತೆಯ ಸಂಕೇತವಾಗಿದೆ. ರೈತರು ಅದರಿಂದ ದೂರ ಇರಬೇಕು.ಈ ಘನತೆಯನ್ನು ಉಲ್ಲಂಘಿಸಿರುವುದನ್ನು ಖಂಡಿಸುತ್ತೇನೆ. ಇದು ದುರದೃಷ್ಟಕರ ಮತ್ತು ವಿಷಾದದ ಘಟನೆಯಾಗಿದೆ ಎಂದು ಪಟೇಲ್ ಟ್ವೀಟ್ ಮಾಡಿದ್ದಾರೆ.
लालकिला हमारे लोकतंत्र की मर्यादा का प्रतीक है,आन्दोलनकारियों को लालक़िले से दूर रहना चाहिए था।इसकी मर्यादा उलंघन की मै निंदा करता हूँ ।यह दुखद और दुर्भाग्यपूर्ण है @PMOIndia @JPNadda @incredibleindia @ASIGoI @MinOfCultureGoI @tourismgoi @BJP4India @BJP4MP
— Prahlad Singh Patel (@prahladspatel) January 26, 2021