ಘರ್ಷಣೆ, ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್: ಪೊಲೀಸರಿಂದ ಅಶ್ರುವಾಯು, ಲಾಠಿಚಾರ್ಜ್ ಪ್ರಯೋಗ, ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ 

ರಾಜಧಾನಿ ದೆಹಲಿಯೊಳಗೆ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಹೋದ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ. ರೈತರು ರಾಜಧಾನಿಯ ಐಟಿಒಗೆ ತಲುಪಿದ ನಂತರ ದೆಹಲಿಯ ಲುಟ್ಯನ್ ಕಡೆಗೆ ಹೋಗಲು ಮುಂದಾಗಿದ್ದ ವೇಳೆ ಪೊಲೀಸರು ಗುಂಪನ್ನು ಚದುರಿಸಲು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದರು.

Published: 26th January 2021 02:02 PM  |   Last Updated: 26th January 2021 02:02 PM   |  A+A-


Protest farmers reach Red fort Delhi

ದೆಹಲಿಯ ಕೆಂಪುಕೋಟೆ ತಲುಪಿದ ಮೆರವಣಿಗೆ, ಘರ್ಷಣೆಯಲ್ಲಿ ಗಾಯಗೊಂಡ ರೈತ ಮತ್ತು ಪೊಲೀಸರಿಂದ ಅಶ್ರುವಾಯು ಪ್ರಯೋಗ

Posted By : Sumana Upadhyaya
Source : PTI

ನವದೆಹಲಿ: ರಾಜಧಾನಿ ದೆಹಲಿಯೊಳಗೆ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಹೋದ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ. ರೈತರು ರಾಜಧಾನಿಯ ಐಟಿಒಗೆ ತಲುಪಿದ ನಂತರ ದೆಹಲಿಯ ಲುಟ್ಯನ್ ಕಡೆಗೆ ಹೋಗಲು ಮುಂದಾಗಿದ್ದ ವೇಳೆ ಪೊಲೀಸರು ಗುಂಪನ್ನು ಚದುರಿಸಲು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದರು.

ದೆಹಲಿಯ ಗಡಿಯ ವಿವಿಧ ಭಾಗಗಳಿಂದ ರೈತರು ಇಂದು ಬೆಳಗ್ಗೆ ಮೆರವಣಿಗೆ ಆರಂಭಿಸಿದರು. ಪೊಲೀಸರು ಟ್ರ್ಯಾಕ್ಟರ್ ರ್ಯಾಲಿ ಆರಂಭಕ್ಕೆ ಅನುಮತಿ ನೀಡಿದ ಸಮಯಕ್ಕೆ ಮೊದಲೇ ಆರಂಭಿಸಿದ್ದರಿಂದ ಪೊಲೀಸರು ತಡೆಯಲು ಮುಂದಾದರು. ಪ್ರತಿಭಟನಾಕಾರರನ್ನು ಲಾಠಿ ಹಿಡಿದು ಪೊಲೀಸರು ಅಟ್ಟಾಡಿಸಿದ ಪ್ರಸಂಗ ನಡೆಯಿತು.

ದೆಹಲಿಯ ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಬ್ಯಾರಿಕೇಡ್ ಗಳನ್ನು ಮುರಿದು ಕಾಶ್ಮೀರಿ ದ್ವಾರವನ್ನು ತಲುಪಿದ ನೂರಾರು ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಅಶ್ರುವಾಯು ಪ್ರಯೋಗಿಸಿದ್ದಾರೆ.

ದೆಹಲಿಯ ಮುಕರ್ಬಾ ಚೌಕ್ ನಲ್ಲಿ ಘರ್ಷಣೆಗಳು ವರದಿಯಾಗಿದ್ದು, ಅಲ್ಲಿ ರೈತರು ಸಿಮೆಂಟೆಡ್ ಬ್ಯಾರಿಕೇಡ್ ಗಳನ್ನು ಮುರಿದಿದ್ದಾರೆ. ನಂಗ್ಲಾಯ್ ನಲ್ಲಿರುವ ಅಡೆತಡೆಗಳನ್ನು ಉಲ್ಲಂಘಿಸಿದ್ದಾರೆ.

ದೆಹಲಿ ಪೊಲೀಸರ ಪ್ರಕಾರ, ರೈತರು ತಮ್ಮ ಟ್ರ್ಯಾಕ್ಟರ್ ರ್ಯಾಲಿಯೊಂದಿಗೆ ನಜಫ್ ಗಡದ ಕಡೆಗೆ ಮುಂದುವರಿಯಬೇಕಿತ್ತು. ಆದಾಗ್ಯೂ, ಒಂದು ನಿರ್ದಿಷ್ಟ ಭಾಗದ ಪ್ರತಿಭಟನಾಕಾರರು ಮಧ್ಯೆ ದೆಹಲಿಯ ಕಡೆಗೆ ಮೆರವಣಿಗೆ ನಡೆಸಲು ನಿರ್ಧರಿಸಿದರು. ಮೆರವಣಿಗೆಗಾಗಿ ಮಧ್ಯೆ ದೆಹಲಿಯ ಐತಿಹಾಸಿಕ ರಾಜ್ ಪಾತ್ ಗೆ ತಲುಪುವ ಪ್ರಯತ್ನದಲ್ಲಿ ನೂರಾರು ರೈತರು ಕಾಲ್ನಡಿಗೆಯಲ್ಲಿ ಮತ್ತು ಟ್ರ್ಯಾಕ್ಟರ್ ಮೂಲಕ ದೆಹಲಿ ಅಕ್ಷರ್ ದಾಮ ದೇವಸ್ಥಾನವನ್ನು ತಲುಪಿದ್ದಾರೆ. ಆದರೆ, ಅವರನ್ನು ಪೊಲೀಸರು ತಡೆದಿದ್ದಾರೆ.

ವರದಿ ಪ್ರಕಾರ, ದೇವಾಲಯ ರಸ್ತೆಯಲ್ಲಿ ರೈತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ. ಐಟಿಒ ಪ್ರದೇಶದಲ್ಲಿ ಪೊಲೀಸರು ಮತ್ತು ರೈತರ ಮಧ್ಯೆ ಘರ್ಷಣೆ ನಡೆದು ಗಾಯಗೊಂಡ ಘಟನೆ ನಡೆದಿದೆ.

ಸದ್ಯ ದೆಹಲಿಯ ಕೆಂಪು ಕೋಟೆಯತ್ತ ರೈತರ ಟ್ರ್ಯಾಕ್ಟರ್ ಮೆರವಣಿಗೆ ಆಗಮಿಸಿದೆ. ದೆಹಲಿ ಸಾರಿಗೆ ಬಸ್ಸನ್ನು ಕೇಂದ್ರ ದೆಹಲಿಯ ಐಟಿಒನಲ್ಲಿ ಪ್ರತಿಭಟನಾ ನಿರತ ರೈತರು ಧ್ವಂಸ ಮಾಡಿರುವ ಘಟನೆ ನಡೆದಿದೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp