ವಿಡಿಯೋ: ಕೆಂಪು ಕೋಟೆಯಲ್ಲಿ ಹೈಡ್ರಾಮಾ, ಪೊಲೀಸರನ್ನೇ ಹೊಡೆದು ಅಟ್ಟಾಡಿಸಿದ ಪ್ರತಿಭಟನಾಕಾರರು!
ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆಯೇ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ಹೊಡದು ಅಟ್ಟಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.
Published: 26th January 2021 10:48 PM | Last Updated: 26th January 2021 10:50 PM | A+A A-

ಪೊಲೀಸರನ್ನೇ ಹೊಡೆದು ಅಟ್ಟಾಡಿಸಿದ ಪ್ರತಿಭಟನಾಕಾರರು
ನವದೆಹಲಿ: ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆಯೇ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ಹೊಡದು ಅಟ್ಟಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.
#WATCH | Delhi: Protestors attacked Police at Red Fort, earlier today. #FarmersProtest pic.twitter.com/LRut8z5KSC
— ANI (@ANI) January 26, 2021
ಕೆಂಪುಕೋಟೆಯಲ್ಲಿ ಪ್ರತಿಭಟನಾ ನಿರತ ರೈತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಒಳಗೆ ನುಗ್ಗಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ಬಂದ ಪೊಲೀಸರು ಮತ್ತು ಅರೆ ಸೇನಾ ಪಡೆ ಸಿಬ್ಬಂದಿಗಳ ಮೇಲೆಯೇ ಆಕ್ರೋಶಿತರು ಟ್ರಾಕ್ಟರ್ ಗಳನ್ನು ನುಗ್ಗಿಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ ಪ್ರತಿಭಟನಾಕಾರರು ತಾವು ತಂದಿದ್ದ ದೊಣ್ಣೆ, ಕೋಲು ಇತರೆ ಆಯುಧಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಈ ವೇಳೆ ಹಲವು ಆಕ್ರೋಶಿತರು ಸಿಖ್ ಸಾಂಪ್ರದಾಯಿತ ಕತ್ತಿ ಗುರಾಣಿಗಳನ್ನು ಹಿಡಿದು ಪೊಲೀಸರ ಮೇಲೆ ಹಲ್ಲೆಗೆ ಮುಂದಾದರು. ಆಕ್ರೋಶಿತರ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಕೋಟೆಯಿಂದ ಕೆಳಗೆ ಧುಮುಕಲು ಯತ್ನಸಿದ್ದಾರೆ. ಈ ವೇಳೆ ಹಲವು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಆ ಬಳಿಕ ಪ್ರತಿಭಟನಾಕಾರರು ಕೆಂಪುಕೋಟೆಯೊಳಗೆ ನುಗ್ಗಿ ಸಿಖ್ ಮತ್ತು ರೈತರ ಧ್ವಜ ಹಾರಿಸಿದ್ದಾರೆ.