ಛತ್ತೀಸಗಢದಲ್ಲಿ 12 ಮಹಿಳೆಯರು ಸೇರಿದಂತೆ 24 ನಕ್ಸಲರು ಪೊಲೀಸರಿಗೆ ಶರಣು!

ಛತ್ತೀಸಗಢದ ನಕ್ಸಲ್ ಪೀಡಿತ ದಂತೇವಾಡ ಜಿಲ್ಲೆಯಲ್ಲಿ 12 ಮಹಿಳೆಯರು ಸೇರಿದಂತೆ ಒಟ್ಟು 24 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Published: 27th January 2021 03:43 PM  |   Last Updated: 27th January 2021 03:43 PM   |  A+A-


Naxals

ನಕ್ಸಲ್

Posted By : Vishwanath S
Source : PTI

ದಾಂತೇವಾಡಾ: ಛತ್ತೀಸಗಢದ ನಕ್ಸಲ್ ಪೀಡಿತ ದಂತೇವಾಡ ಜಿಲ್ಲೆಯಲ್ಲಿ 12 ಮಹಿಳೆಯರು ಸೇರಿದಂತೆ ಒಟ್ಟು 24 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ದಕ್ಷಿಣ ಬಸ್ತಾರ್ ಪ್ರದೇಶದಲ್ಲಿ ಸಕ್ರಿಯರಾಗಿದ್ದ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

ಮೂವರು ನಕ್ಸಲರ ತಲೆಗೆ ತಲಾ ಒಂದು ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಮಾವೋವಾದಿ ಸಿದ್ಧಾಂತದ ಬಗ್ಗೆ ನಕ್ಸಲರು ನಿರಾಶೆ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದರು. 

ಜಿಲ್ಲಾ ಪೊಲೀಸರು (ನಿಮ್ಮ ಮನೆ/ಗ್ರಾಮಕ್ಕೆ ಹಿಂತಿರುಗಿ) ಪುನರ್ವಸತಿ ಅಭಿಯಾನದಿಂದ ನಕ್ಸಲರು ಪ್ರಭಾವಿತರಾಗಿ, ಹಿಂಸಾಚಾರವನ್ನು ತೊರೆದು ಶರಣಾಗಿದ್ದಾರೆ ಎಂದು ಅಭಿಷೇಕ್ ತಿಳಿಸಿದ್ದಾರೆ. 

ಶರಣಾದವರ ಪೈಕಿ ಚಿಕ್ಪಾಲ್-ಜಂಗ್ಲೆಪರಾ ದಂಡಕರಣ್ಯದ ಮುಖ್ಯಸ್ಥ ಆಯಿತು ಮುಚಾಕಿ(31) ಬಕ್ಮನ್ ಡೆಂಗಾ ಸೋಧಿ(40) ಮತ್ತು ಚಿಕ್ಪಾಲ್-ಸ್ಕೂಲ್ಪರಾ ಡಿಎಕೆಎಂಎಸ್(32) ತಲೆಯ ಮೇಲೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಶರಣಾಗತರಿಗೆ ತಲಾ 10,000 ರೂ.ಗಳ ತಕ್ಷಣದ ನೆರವು ನೀಡಲಾಗಿದ್ದು, ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಪ್ರಕಾರ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp