ತಾಯಿ, ಮಗನ ಹತ್ಯೆ ಮಾಡಿ, 16 ಕೆಜಿ ಚಿನ್ನ ಲೂಟಿ: ಪೊಲೀಸರ ಗುಂಡೇಟಿಗೆ ಒಬ್ಬ ದರೋಡೆಕೋರ ಬಲಿ

ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ ಸಶಸ್ತ್ರ ದರೋಡೆಕೋರರು ಮಹಿಳೆ ಮತ್ತು ಆಕೆಯ ಮಗನನ್ನು ಹತ್ಯೆ ಮಾಡಿ ಅವರ ಮನೆಯಿಂದ 16 ಕೆ ಜಿ ಚಿನ್ನ ದೋಚಿರುವ ಘಟನೆ ತಮಿಳುನಾಡಿನ ಮೈಲಾದುತುರೈ ಜಿಲ್ಲೆಯ ಶಿರ್ಕಾಳಿಯಲ್ಲಿ ಬುಧವಾರ ನಡೆದಿದೆ. 

Published: 27th January 2021 03:34 PM  |   Last Updated: 27th January 2021 03:34 PM   |  A+A-


An Indian Oil Petrol Pump Supervisor Who Was Carrying 9 Lakhs in Cash Was Looted

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಮೈಲಾದುತುರೈ: ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ ಸಶಸ್ತ್ರ ದರೋಡೆಕೋರರು ಮಹಿಳೆ ಮತ್ತು ಆಕೆಯ ಮಗನನ್ನು ಹತ್ಯೆ ಮಾಡಿ ಅವರ ಮನೆಯಿಂದ 16 ಕೆ ಜಿ ಚಿನ್ನ ದೋಚಿರುವ ಘಟನೆ ತಮಿಳುನಾಡಿನ ಮೈಲಾದುತುರೈ ಜಿಲ್ಲೆಯ ಶಿರ್ಕಾಳಿಯಲ್ಲಿ ಬುಧವಾರ ನಡೆದಿದೆ. 

ಘಟನೆ ನಂತರ ಪೊಲೀಸರು ಓರ್ವ ದರೋಡೆಕೋರನನ್ನು ಎನ್‍ಕೌಂಟರ್‍ ನಲ್ಲಿ ಗುಂಡಿಕ್ಕಿ ಸಾಯಿಸಿದ್ದಾರೆ.

ಶಿರ್ಕಾಳಿ ಪಟ್ಟಣದಲ್ಲಿ ಚಿನ್ನಾಭರಣ ಮತ್ತು ಗಿರವಿ ಅಂಗಡಿ ನಡೆಸುತ್ತಿರುವ ಧನರಾಜ್ ಚೌಧರಿ ಅವರ ಮನೆಗೆ ದರೋಡೆಕೋರರು ನುಗ್ಗಿ ಅವರ ಕುಟುಂಬ ಸದಸ್ಯರ ಮೇಲೆ ದಾಳಿ ಮಾಡಿದ್ದಾರೆ. ಮಾರಣಾಂತಿಕ ದಾಳಿಯಲ್ಲಿ ಧನರಾಜ್ ಅವರ ಪತ್ನಿ ಆಶಾ(48) ಮತ್ತು ಮಗ ಅಕಿಲ್(25) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಧನರಾಜ್ ಮತ್ತು ಅವರ ಸೊಸೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

ದರೋಡೆಕೋರರ ತಂಡ ಮನೆಯಿಂದ 16 ಕೆಜಿ ಚಿನ್ನದ ಆಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದೆ. ಮಾಹಿತಿಯ ಮೇರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮನೆಗೆ ನುಗ್ಗಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಜೋಡಿ ಕೊಲೆಯ ನಂತರ, ಪೊಲೀಸರು ರೆಡ್ ಅಲರ್ಟ್ ಘೋಷಿಸಿದ ನಂತರ ದರೋಡೆಕೋರರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. 
ತಕ್ಷಣವೇ ಕಾರ್ಯಪ್ರವೃತ್ತವಾದ ತಂಡ, ಸ್ಥಳೀಯರ ನೀಡಿದ ಮಾಹಿತಿಯಂತೆ ಎರುಕ್ಕೂರ್ ನಲ್ಲಿ ಮೂರು ದರೋಡೆಕೋರರನ್ನು ಪತ್ತೆ ಮಾಡಿದ್ದಾರೆ.

ದರೋಡೆಕೋರರು ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದು, ಈ ವೇಳೆ ಮಣಿಪಾಲ್ ಎಂಬ ಒಬ್ಬ ದರೋಡೆಕೋರ ಸಾವನ್ನಪ್ಪಿದ್ದಾನೆ. ಈ ವೇಳೆ ತಂಡದ ಇತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಮನೀಶ್ ಮತ್ತು ರಮೇಶ್ ನಿಂದ ಎರಡು ಬಂದೂಕು, 16 ಕೆಜಿ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಹಿರಿಯ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ದರೋಡೆಕೋರರು ರಾಜಸ್ಥಾನ ಮೂಲದವರೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ತನಿಖೆ ಮುಂದುವರೆದಿದೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp