ಕೋಲ್ಕತ್ತಾ: ಸೌರವ್ ಗಂಗೂಲಿ ಮತ್ತೆ ಅಸ್ವಸ್ಥ; ಅಪೋಲೋ ಆಸ್ಪತ್ರೆಗೆ ದಾಖಲು

ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಅಸ್ವಸ್ಥಗೊಂಡಿದ್ದು ಮತ್ತೆ ಅವರನ್ನು ಬುಧವಾರ ಕೋಲ್ಕತಾದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. 

Published: 27th January 2021 03:08 PM  |   Last Updated: 27th January 2021 05:04 PM   |  A+A-


Ganguly1

ಸೌರವ್ ಗಂಗೂಲಿ

Posted By : Srinivas Rao BV
Source : Online Desk

ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಅಸ್ವಸ್ಥಗೊಂಡಿದ್ದು ಮತ್ತೆ ಅವರನ್ನು ಬುಧವಾರ ಕೋಲ್ಕತಾದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗಂಗೂಲಿ ಅವರಿಗೆ ಮತ್ತೊಮ್ಮೆ ಎದೆನೋವು ಕಾಣಿಸಿಕೊಂಡಿರುವ ವರದಿಗಳು ಬಂದಿವೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇತ್ತೀಚೆಗೆ ಲಘು ಹೃದಯಾಘಾತಕ್ಕೊಳಗಾಗಿದ್ದ ಗಂಗೂಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಆಂಜಿಯೋಪ್ಲಾಸ್ಟಿ ಹಾಗೂ ಇನ್ನಿತರ ಚಿಕಿತ್ಸೆ ನೀಡಲಾಗಿತ್ತು. ಸೌರವ್ ಗಂಗೂಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಕಾರಣ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳಿಸಲಾಗಿತ್ತು.

ಗಂಗೂಲಿ ಅವರಿಗೆ ಕೋಲ್ಕತ್ತಾದ ವುಡ್ಲ್ಯಾಂಡ್ ಆಸ್ಪತ್ರೆಯಲ್ಲಿ ಎರಡನೆಯ ಆಂಜಿಯೋಪ್ಲಾಸ್ಟಿ ಮಾಡಬೇಕಾಗಿತ್ತು. ಆದರೆ, ನಂತರದ ಹಂತದಲ್ಲಿ ಮಾಡಬಹುದು ಎಂದು ವೈದ್ಯರ ತಂಡ ನಿರ್ಣಯ ತೆಗೆದುಕೊಂಡಿತ್ತು. ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ಅವರು ದೆಹಲಿಗೆ ತೆರಳಿ, ಗಂಗೂಲಿ ಅವರ ಮುಂದಿನ ಚಿಕಿತ್ಸೆಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚನೆ ಮಾಡಿದ್ದರು. 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp