ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಗೊಂದಲ, ಗದ್ದಲ ಉಂಟುಮಾಡಲು ದೀಪ್ ಸಿಧು ಕಳಿಸಿದ್ದೇ ಬಿಜೆಪಿ: ಆಪ್ ಆರೋಪ

ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಗದ್ದಲ, ಗೊಂದಲ ಉಂಟು ಮಾಡುವುದಕ್ಕಾಗಿ ಬಿಜೆಪಿ ತನ್ನ ವ್ಯಕ್ತಿ ದೀಪ್ ಸಿಧು ಎಂಬಾತನನ್ನು ನೇಮಕ ಮಾಡಿತ್ತು ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.

Published: 27th January 2021 07:15 PM  |   Last Updated: 27th January 2021 07:36 PM   |  A+A-


BJP planted stooge Deep Sidhu to create chaos in tractor rally: AAP

ದೀಪ್ ಸಿಧು

Posted By : Srinivas Rao BV
Source : Online Desk

ನವದೆಹಲಿ: ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಗದ್ದಲ, ಗೊಂದಲ ಉಂಟು ಮಾಡುವುದಕ್ಕಾಗಿ ಬಿಜೆಪಿ ತನ್ನ ವ್ಯಕ್ತಿ ದೀಪ್ ಸಿಧು ಎಂಬಾತನನ್ನು ನೇಮಕ ಮಾಡಿತ್ತು ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.

ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ತಮ್ಮ ಬೇಡಿಕೆಗಳೆಡೆಗೆ ಗಮನ ಸೆಳೆಯುವುದಕ್ಕಾಗಿ ರೈತ ಸಂಘಟನೆಗಳು ಜ.26 ರಂದು ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದರು. ಈ ವೇಳೆ ಹಿಂಸಾಚಾರ ನಡೆದಿದೆ.

ಇದೇ ವೇಳೆ ರೈತ ಒಕ್ಕೂಟಗಳು ಹಾಗೂ ರಾಜಕಾರಣಿಗಳು ಪಂಜಾಬ್ ನ ದೀಪ್ ಸಿಧು ಅವರೇ ಟ್ರ್ಯಾಕ್ಟರ್ ರ್ಯಾಲಿ ವೇಳೆ ಈ ಹಿಂಸಾಚಾರಕ್ಕೆ ಕಿಚ್ಚು ಹಚ್ಚಿದ್ದಾರೆಂದು ಆರೋಪಿಸಿದ್ದಾರೆ.

ಈ ಬಗ್ಗೆ ಜ.27 ರಂದು ಸುದ್ದಿಗೋಷ್ಠಿ ನಡೆಸಿದ ಆಮ್ ಆದ್ಮಿ ಪಕ್ಷದ ವಕ್ತಾರ ರಾಘವ್ ಚಢಾ ಸಿಧು ಹಾಗೂ ಬಿಜೆಪಿಗೆ ಇರುವ ನಂಟನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಸಿಧು ಹಲವು ಬಿಜೆಪಿ ನಾಯಕರೊಂದಿಗೆ ಇರುವ ಫೋಟೋಗಳನ್ನೂ ಬಿಡುಗಡೆ ಮಾಡಿದ್ದಾರೆ.

ಟ್ರ್ಯಾಕ್ಟರ್ ಪರೇಡ್ ನಲ್ಲಿ ಹಿಂಸಾಚಾರ ನಡೆಸಲು ಬಿಜೆಪಿ ತನ್ನ ಚೇಲಾ ದೀಪ್ ಸಿಧುವನ್ನು ಕಳಿಸಿತ್ತು ಎಂದು ರಾಘವ್ ಆರೋಪಿಸಿದ್ದಾರೆ. ಕೆಂಪು ಕೋಟೆಯಲ್ಲಿ ಸಿಖ್ ಧರ್ಮದ ಧ್ವಜಾರೋಹಣ ಮಾಡಿದ ಪ್ರತಿಭಟನಾ ನಿರತರ ಪೈಕಿ ಸಿಧು ಕೂಡ ಒಬ್ಬರಾಗಿದ್ದರು 

2019 ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ ನ ಗುರ್ದಾಸ್ ಪುರದಿಂದ ಸ್ಪರ್ಧಿಸಿ ಸಂಸದರಾಗಿರುವ ಡಿಯೋಲ್ ಅವರ ಸಹಾಯಕರಾಗಿ ಸಿಧು ಕಾರ್ಯನಿರ್ವಹಿಸಿದ್ದಾರೆ. ಆದರೆ ಈಗ ಸಂಸದ ಡಿಯೋಲ್,  ಸಿಧು ಡಿಸೆಂಬರ್ ನಲ್ಲಿ ರೈತರ ಪ್ರತಿಭಟನೆಗೆ ಕೈ ಜೋಡಿಸಿದಾಗಿನಿಂದ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೆಂಪು ಕೋಟೆಯಲ್ಲಿ ಸಿಖ್ ಧ್ವಜಾರೋಹಣ ಮಾಡಿರುವುದನ್ನೂ ಸಹ ಸಿಧು ಸಮರ್ಥಿಸಿಕೊಂಡಿದ್ದು ಪ್ರತಿಭಟನಾ ನಿರತರು ರಾಷ್ಟ್ರಧ್ವಜವನ್ನು ತೆಗೆದುಹಾಕಿಲ್ಲ ಎಂದು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp