ಕೆಂಪು ಕೋಟೆ ಹಿಂಸಾಚಾರ ಆರೋಪ ಹೊತ್ತ ದೀಪ್ ಸಿದು ಬಿಜೆಪಿ ಸಂಸದ ಸನ್ನಿ ಡಿಯೊಲ್ ಪ್ರಚಾರ ಮ್ಯಾನೇಜರ್ ಆಗಿದ್ದ!

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಕೆರಳಿಸಿ ಯುವಕರನ್ನು ಉದ್ರೇಕಗೊಳಿಸಿ ದೆಹಲಿಯ ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಸಿಖ್ ಧರ್ಮೀಯರ ಧ್ವಜವಾದ ನಿಶನ್ ಸಾಹಿಬ್ ನ್ನು ಹಾರಿಸಿದ್ದಾರೆ ಎಂದು ಪಂಜಾಬಿ ಗಾಯಕ ಹಾಗೂ ನಟ ದೀಪ್ ಸಿದುವನ್ನು ರೈತ ಸಂಘಟನೆಗಳು ಆರೋಪಿಸಿವೆ.

Published: 27th January 2021 09:35 AM  |   Last Updated: 27th January 2021 09:58 PM   |  A+A-


Deep Sidhu

ದೀಪ್ ಸಿದು

Posted By : Sumana Upadhyaya
Source : The New Indian Express

ನವದೆಹಲಿ: ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಕೆರಳಿಸಿ ಯುವಕರನ್ನು ಉದ್ರೇಕಗೊಳಿಸಿ ದೆಹಲಿಯ ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಸಿಖ್ ಧರ್ಮೀಯರ ಧ್ವಜವಾದ ನಿಶನ್ ಸಾಹಿಬ್ ನ್ನು ಹಾರಿಸಿದ್ದಾರೆ ಎಂದು ಪಂಜಾಬಿ ಗಾಯಕ ಹಾಗೂ ನಟ ದೀಪ್ ಸಿದುವನ್ನು ರೈತ ಸಂಘಟನೆಗಳು ಆರೋಪಿಸಿವೆ.

ದೀಪ್ ಸಿದು ಯುವಕರನ್ನು ಪ್ರಚೋದನೆಗೊಳಿಸಿ ಪ್ರತಿಭಟನಾಕಾರರನ್ನು ಹಾದಿತಪ್ಪಿಸಿದರು. ನಮ್ಮ ಪ್ರತಿಭಟನೆಯನ್ನು ಹಾಳುಮಾಡಿದ್ದೇ ಅವರು, ಅವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಯಾರ ಪರವಾಗಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಭಾರತೀಯ ಕಿಸಾನ್ ಸಂಘದ ಜೊಗಿಂದರ್ ಸಿಂಗ್ ಉಗ್ರಹಣ್ ಆರೋಪಿಸಿದ್ದಾರೆ. 

ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಸಾಕಷ್ಟು ಹರಿದಾಡುತ್ತಿದ್ದು ಸಿದು ಖಲ್ಸ ಧ್ವಜವನ್ನು ಹಿಡಿದು ಮಜ್ದೂರ್ ಏಕತಾ ಪರ ಘೋಷಣೆಗಳನ್ನು ಕೂಗುತ್ತಿದ್ದುದನ್ನು ಕಾಣಬಹುದು. ಕೆಂಪು ಕೋಟೆಯ ಮೇಲಿನ ಹಿಂಸಾಚಾರಕ್ಕೆ ದೇಶಾದ್ಯಂತ ಸಾಕಷ್ಟು ಖಂಡನೆ, ವಿರೋಧ ವ್ಯಕ್ತವಾಗುತ್ತಿದ್ದಂತೆ ರೈತ ಸಂಘಟನೆಗಳು ಸಿದುವನ್ನು ದೂರವಿರಿಸಿದ್ದಾರೆ. ಈತ ಖಲಿಸ್ತಾನ ಚಳವಳಿಯನ್ನು ಬೆಂಬಲಿಸಿದ್ದಾನೆ ಎಂಬ ಆರೋಪವಿದೆ.

36 ವರ್ಷದ ಕಲಾವಿದ ಸಿದು ಜರ್ನೈಲ್ ಸಿಂಗ್ ಬಿಂದ್ರನ್ವಾಲೆಯ ಮಾತುಗಳನ್ನು ಆಗಾಗ ಉಲ್ಲೇಖಿಸುತ್ತಾನೆ. ನಂತರ ನಿನ್ನೆ ರಾತ್ರಿಯ ಹೊತ್ತಿಗೆ ಸಿದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮತ್ತು ಬಿಜೆಪಿಯ ಗುರುದಾಸ್ಪುರ ಸಂಸದ ನಟ ಸನ್ನಿ ಡಿಯೋಲ್ ಅವರೊಂದಿಗಿರುವ ಫೋಟೋ ವೈರಲ್ ಆಯಿತು. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಸನ್ನಿ ಡಿಯೋಲ್ ಪರ ಸಿದು ಪ್ರಚಾರ ನಡೆಸಿದ್ದನಂತೆ. ಆದರೆ ಕಳೆದ ಡಿಸೆಂಬರ್ ನಲ್ಲಿ ಸಿದು ರೈತರ ಪ್ರತಿಭಟನೆಗೆ ಸೇರಿಕೊಂಡ ನಂತರ ಸನ್ನಿ ಡಿಯೋಲ್ ಆತನನ್ನು ದೂರವಿಟ್ಟರು ಎಂದು ಹೇಳಲಾಗುತ್ತಿದೆ.

ನಿನ್ನೆ ಘಟನೆ ಬಳಿಕ ಫೇಸ್ ಬುಕ್ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಸಿದು, ನಾವು ಮಹಾನ್ ಸಾಹಿಬ್ ಧ್ವಜವನ್ನು ಕೆಂಪು ಕೋಟೆ ಮೇಲೆ ಹಾರಿಸಿದ್ದೇವೆ, ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ನಮ್ಮ ಧ್ವಜವನ್ನು ಹಾರಿಸುವ ಪ್ರಜಾಪ್ರಭುತ್ವ ಹಕ್ಕು ನಮಗಿದೆ. ಇಂತಹ ಪ್ರತಿಭಟನೆ ವೇಳೆ, ಜನರ ಸಿಟ್ಟು, ಆಕ್ರೋಶ ಹೊರಬರುವುದು ಸಾಮಾನ್ಯ, ಇಲ್ಲಿ ನೀವು ಒಬ್ಬ ವ್ಯಕ್ತಿಯ ಮೇಲೆ ಆರೋಪ ಮಾಡಲು ಸಾಧ್ಯವಾಗುವುದಿಲ್ಲ, ಸಿಖ್ ಧ್ವಜವನ್ನು ಹಾರಿಸಿದಾಗ ಕೆಂಪು ಕೋಟೆಯಲ್ಲಿನ ರಾಷ್ಟ್ರಧ್ವಜವನ್ನು ತೆಗೆದಿರಲಿಲ್ಲ ಎಂದು ಸಮರ್ಥನೆ ನೀಡಿದ್ದಾನೆ. 

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp