ಆನ್‌ಲೈನ್ ರಮ್ಮಿ: ವಿರಾಟ್ ಕೊಹ್ಲಿ, ತಮನ್ನಾ ಇತರ ಬ್ರಾಂಡ್ ರಾಯಭಾರಿಗಳಿಗೆ ಕೇರಳ ಹೈಕೋರ್ಟ್ ನೋಟೀಸ್

ಆನ್‌ಲೈನ್ ರಮ್ಮಿ ಆಟಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಮತ್ತು ಮಲಯಾಳಂ ನಟ ಅಜು ವರ್ಗೀಸ್ ಅವರಿಗೆ ಕೇರಳ ಹೈಕೋರ್ಟ್ ನೋಟೀಸ್ ನೀಡಿದೆ

Published: 27th January 2021 03:32 PM  |   Last Updated: 27th January 2021 03:32 PM   |  A+A-


ವಿರಾಟ್ ಕೊಹ್ಲಿ ಹಾಗೂ ತಮನ್ನಾ ಭಾಟಿಯಾ

Posted By : Raghavendra Adiga
Source : ANI

ತಿರುವನಂತಪುರಂ: ಆನ್‌ಲೈನ್ ರಮ್ಮಿ ಆಟಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಮತ್ತು ಮಲಯಾಳಂ ನಟ ಅಜು ವರ್ಗೀಸ್ ಅವರಿಗೆ ಕೇರಳ ಹೈಕೋರ್ಟ್ ನೋಟೀಸ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್ ಎಂ.ಕುಮಾರ್, ನ್ಯಾಯಮೂರ್ತಿ ಎಲ್ ಕೆ ನರೇಂದ್ರನ್ ಅವರನ್ನೊಳಗೊಂಡ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ಆನ್‌ಲೈನ್ ರಮ್ಮಿ ಆಟಗಳನ್ನು ತಡೆಯಲು ಕೋರಿ ಸಲ್ಲಿಸಿದ್ದ ಅರ್ಜಿವಿಚಾರಣೆ ನಡೆಸಿ ನೋಟೀಸ್ ಕಳುಹಿಸಿದೆ. ಅಲ್ಲದೆ ಈ ಸಂಬಂಧ ಕೇರಳ ಸರ್ಕಾರದಿಂದ ಉತ್ತರ ಕೇಳಿದೆ.

"ಆನ್‌ಲೈನ್ ರಮ್ಮಿ ಆಟಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇದನ್ನು ಕಾನೂನುಬದ್ಧವಾಗಿ ನಿಷೇಧಿಸಬೇಕು. ಇತರ ರಾಜ್ಯಗಳು ಇದಾಗಲೇ ನಿಷೇಧ ಮಾಡಿದ್ದು ಕೇರಳದಲ್ಲಿಯೂ ಸಹ ಈ ಕ್ರಮಕ್ಕೆ ಮುಂದಾಗಬೇಕು ಕೇರಳದಲ್ಲಿ 1960 ರ ಕಾನೂನು ಇದೆ, ಆದರೆ ಬೇರಾವ ಕ್ರ್ಮ ತೆಗೆದುಕೊಂಡಿಲ್ಲ " ಎಂದು ಆರೋಪಿಸಿ ತ್ರಿಶೂರ್ ಮೂಲದ ಪೌಲಿ ವಡಕ್ಕನ್ ಎನ್ನುವವರು ಅರ್ಜಿಯನ್ನು ಸಲ್ಲಿಸಿದ್ದರು. ಇದು ಆನ್‌ಲೈನ್ ರಮ್ಮಿ ವಿಷಯವನ್ನು ಮಾತ್ರ ಒಳಗೊಂಡಿಲ್ಲ, ಬ್ರಾಂಡ್ ರಾಯಭಾರಿಗಳಾಗಿರುವ ಸ್ಟಾರ್ ಗಳು ಪ್ರೇಕ್ಷಕರನ್ನು ಆಕರ್ಷಿಸಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ಇಂತಹಾ ಆಟಗಳು ಜೂಜಾಟದಂತೆಯೇ ಇದೆ ಎಂದು ಅರ್ಜಿಯಲ್ಲಿ ಹೇಳಿದೆ.

ಅರ್ಜಿದಾರರು ಬ್ರಾಂಡ್ ರಾಯಭಾರಿಗಳು, ರಾಜ್ಯ ಸರ್ಕಾರ, ರಾಜ್ಯ ಐಟಿ ಇಲಾಖೆ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್)ಮತ್ತು ಆನ್‌ಲೈನ್ ರಮ್ಮಿ ಆಟಗಳನ್ನು ನಡೆಸುವ ಎರಡು ಖಾಸಗಿ ಸಂಸ್ಥೆಗಳನ್ನು ಪಟ್ಟಿ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp