ಹೊಸ ಕೃಷಿ ಕಾಯ್ದೆಗಳ ಕುರಿತು ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಏನೆನ್ನುತ್ತಾರೆ?
ಭಾರತ ಸರ್ಕಾರ ಜಾರಿಗೊಳಿಸಿದ ನೂತನ ಕೃಷಿ ಮಸೂದೆಗಳಿಗೆ ರೈತರಿಂದ, ಪ್ರಮುಖವಾಗಿ ಪಂಜಾಭ್-ಹರ್ಯಾಣ ಭಾಗದ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
Published: 27th January 2021 02:39 PM | Last Updated: 27th January 2021 02:41 PM | A+A A-

ಐಎಂಎಫ್ ನ ಮುಖ್ಯ ಆರ್ಥಿಕ ಅರ್ಥಶಾಸ್ತ್ರಜ್ಞರಾದ ಗೀತಾ ಗೋಪಿನಾಥ್, ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)
ವಾಷಿಂಗ್ ಟನ್: ಭಾರತ ಸರ್ಕಾರ ಜಾರಿಗೊಳಿಸಿದ ನೂತನ ಕೃಷಿ ಮಸೂದೆಗಳಿಗೆ ರೈತರಿಂದ, ಪ್ರಮುಖವಾಗಿ ಪಂಜಾಭ್-ಹರ್ಯಾಣ ಭಾಗದ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಆದರೆ ಸರ್ಕಾರ ಹೊಸ ಕೃಷಿ ಕಾಯ್ದೆಗಳಿಂದ ರೈತರಿಗೆ ದಲ್ಲಾಳಿಗಳ ಹಾವಳಿ ತಪ್ಪಿ ಮುಕ್ತಮಾರುಕಟ್ಟೆ ಲಭ್ಯವಾಗುತ್ತದೆ, ಇದರಿಂದ ರೈತರ ಆದಾಯವೂ ಹೆಚ್ಚಾಗಲಿದೆ ಎಂದು ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಸರ್ಕಾರದ ಈ ಸಮರ್ಥನೆಯ ಬಗ್ಗೆ ಐಎಂಎಫ್ ನ ಮುಖ್ಯ ಆರ್ಥಿಕ ಅರ್ಥಶಾಸ್ತ್ರಜ್ಞರಾದ ಗೀತಾ ಗೋಪಿನಾಥ್ ಅವರಿಗೆ ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದ್ದು, ಹೊಸ ಕಾಯ್ದೆಗಳು ರೈತರ ಆದಾಯವನ್ನು ಹೆಚ್ಚಿಸಲು ಸಮರ್ಥವಾಗಿವೆ. ಆದರೆ ದುರ್ಬಲ ಕೃಷಿಕರಿಗೆ ಸಾಜಿಕ ಭದ್ರತೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಭಾರತೀಯ ಕೃಷಿ ಕ್ಷೇತ್ರಕ್ಕೆ ಸುಧಾರಣೆಗಳ ಅಗತ್ಯವಿದೆ. ಮೂಲಸೌಕರ್ಯವೂ ಸೇರಿದಂತೆ ವಿವಿಧ ಅಂಶಗಳಲ್ಲಿ ಸುಧಾರಣೆಗಳ ಅಗತ್ಯವಿದೆ. ಈಗ ಭಾರತ ಸರ್ಕಾರ ಜಾರಿಗೊಳಿಸಿರುವ ಕಾಯ್ದೆಗಳು ಮಾರುಕಟ್ಟೆಗೆ ಸಂಬಂಧಿಸಿದ್ದಾಗಿವೆ. ಈ ಕಾಯ್ದೆಗಳಿಗೆ ರೈತರಿಗೆ ಮಾರುಕಟ್ಟೆಗಳು ಆಯ್ಕೆಗಳು ತೆರೆದುಕೊಳ್ಳುತ್ತವೆ. ಮಂಡಿಗಳ ಹೊರತಾಗಿಯೂ ಬೇರೆಡೆಗೆ ತೆರಿಗೆ ಇಲ್ಲದೇ ಮಾರಾಟ ಮಾಡಬಹುದಾದ ಆಯ್ಕೆಗಳನ್ನು ಒದಗಿಸುತ್ತವೆ. ಹಾಗೆಯೇ ನಮ್ಮ ಪ್ರಕಾರ ಅವುಗಳು ರೈತರ ಆದಾಯವನ್ನೂ ಹೆಚ್ಚು ಮಾಡುವ ಸಾಮರ್ಥ್ಯವನ್ನು ಹೊಂದಿವೆ" ಎಂದು ಗೀತಾ ಗೋಪಿನಾಥ್ ತಿಳಿಸಿದ್ದಾರೆ.
"ಪ್ರತಿ ಬಾರಿ ಸುಧಾರಣೆಗಳಿಗೆ ಕೈಹಾಕಿದಾಗ ಕೆಲವು ಪರಿವರ್ತನೆಗಳಿಗೆ ಬೆರೆ ತೆರಬೇಕಾಗುತ್ತದೆ. ಇಂತಹ ಸುಧಾರಣೆಗಳಿಂದ ದುರ್ಬಲ ರೈತರಿಗೆ ಸಮಸ್ಯೆ, ಹಾನಿಯಾಗದಂತೆ ಎಚ್ಚರವಹಿಸಿ ಸಾಮಾಜಿಕ ಭದ್ರತೆಯನ್ನು ನೀಡುವುದರ ಬಗ್ಗೆಯೂ ಗಮನಹರಿಸಬೇಕಾಗುತ್ತದೆ, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಿಂದ ಏನು ಹೊರಬರಲಿದೆ ಕಾದುನೋಡೋಣ" ಎನ್ನುತ್ತಾರೆ ಗೀತಾ ಗೋಪಿನಾಥ್