ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರ: ಷರತ್ತುಗಳನ್ನು ಮೀರಿ, ನಿಗದಿತ ಮಾರ್ಗಗಳನ್ನು ಬದಲಿಸಿ ಹೋಗಿದ್ದ ಪ್ರತಿಭಟನಾಕಾರರು!

ಯಾವುದೇ ಆಯುಧಗಳನ್ನು ಕೊಂಡೊಯ್ಯುವಂತಿಲ್ಲ, ನಿಶ್ಚಿತ ಮಾರ್ಗದಲ್ಲಿ ಸಾಗಬೇಕು, ಟ್ರ್ಯಾಕ್ಟರ್ಸ್ ಸಾನ್ಸ್ ಟ್ರಾಲಿಯೊಂದಿಗೆ ದೆಹಲಿಗೆ ಪ್ರವೇಶಿಸುವುದು, ಮದ್ಯ ಸೇವಿಸುವಂತಿಲ್ಲ, ಬ್ಯಾನರ್ ಗಳನ್ನು ಹೊತ್ತೊಯ್ಯುವಂತಿಲ್ಲ ಮೊದಲಾದ ಷರತ್ತುಗಳು ಆರಂಭದಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವಿಚಾರದಲ್ಲಿ ಪೊಲೀಸರು  ಮತ್ತು ರೈತ ಮುಖಂಡರ ಮಧ್ಯೆ ಒಪ್ಪಂದಗಳಾಗಿದ್ದವು.

Published: 27th January 2021 08:20 AM  |   Last Updated: 27th January 2021 01:15 PM   |  A+A-


Farmers gathered in front of Red Fort after their tractor parade on Republic Day.

ದೆಹಲಿಯ ಕೆಂಪುಕೋಟೆ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು

Posted By : Sumana Upadhyaya
Source : The New Indian Express

ನವದೆಹಲಿ: ಯಾವುದೇ ಆಯುಧಗಳನ್ನು ಕೊಂಡೊಯ್ಯುವಂತಿಲ್ಲ, ನಿಶ್ಚಿತ ಮಾರ್ಗದಲ್ಲಿ ಸಾಗಬೇಕು, ಟ್ರ್ಯಾಕ್ಟರ್ಸ್ ಸಾನ್ಸ್ ಟ್ರಾಲಿಯೊಂದಿಗೆ ದೆಹಲಿಗೆ ಪ್ರವೇಶಿಸುವುದು, ಮದ್ಯ ಸೇವಿಸುವಂತಿಲ್ಲ, ಬ್ಯಾನರ್ ಗಳನ್ನು ಹೊತ್ತೊಯ್ಯುವಂತಿಲ್ಲ, ಯಾವುದೇ ಪ್ರಚೋದನಾಕಾರಿ ಸಂದೇಶಗಳನ್ನು ಕೂಡ ಹೊತ್ತು ಸಾಗುವಂತಿಲ್ಲ ಮೊದಲಾದ ಷರತ್ತುಗಳು ಆರಂಭದಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವಿಚಾರದಲ್ಲಿ ಪೊಲೀಸರು ಮತ್ತು ರೈತ ಮುಖಂಡರ ಮಧ್ಯೆ ಒಪ್ಪಂದಗಳಾಗಿದ್ದವು.

ಆದರೆ ನಿನ್ನೆ ಗಣರಾಜ್ಯೋತ್ಸವದ ದಿನ ರೈತರು ಟ್ರ್ಯಾಕ್ಟರ್ ಪರೇಡ್ ನಲ್ಲಿ ಈ ಎಲ್ಲಾ ನಿಯಮಗಳನ್ನು ಮುರಿದಿದ್ದಾರೆ. ಶಾಂತಿಯುತವಾಗಿ ಸಾಗಬೇಕಿದ್ದ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತು. ಐದು ಜನಕ್ಕಿಂತ ಹೆಚ್ಚು ಮಂದಿ ಟ್ರ್ಯಾಕ್ಟರ್ ನಲ್ಲಿ ಕುಳಿತುಕೊಳ್ಳಬಾರದು ಎಂಬ ಷರತ್ತನ್ನು ಕೂಡ ಉಲ್ಲಂಘಿಸಲಾಯಿತು. ಹಲವು ಕಡೆಗಳಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆದು 86 ಮಂದಿ ಪೊಲೀಸರು ಗಾಯಗೊಂಡರು.

ಪ್ರತಿಭಟನಾಕಾರರು ಸಿಂಘು, ಟಿಕ್ರಿ ಮತ್ತು ಗಾಜಿಪುರ್ ಗಡಿಭಾಗಗಳಿಂದ ದೆಹಲಿಗೆ ಪ್ರವೇಶಿಸುವಂತೆ ಮಾರ್ಗಗಳು ನಿಗದಿಯಾಗಿತ್ತು. ದೆಹಲಿ ಪೊಲೀಸರೊಂದಿಗೆ ನಡೆದ ಸಭೆಯಲ್ಲಿ ರೈತ ಮುಖಂಡರು ಇದಕ್ಕೆ ಒಪ್ಪಿದ್ದರು ಕೂಡ. ದೆಹಲಿಯ ರಾಜಪಥ್ ನಲ್ಲಿ ಗಣರಾಜ್ಯೋತ್ಸವ ಸಮಾರಂಭ ಬಳಿಕ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ ರೈತರ ಒಂದು ಗುಂಪು ಅವಧಿಗಿಂತ ಮೊದಲೇ ಹೊರಟರು. ಸಿಂಘು ಮತ್ತು ಗಾಜಿಪುರ್ ಗಡಿಗಳಿಂದ ಕೆಲವು ರೈತರು ನಿಗದಿತ ಮಾರ್ಗವನ್ನು ಬದಲಾಯಿಸಿ ದೆಹಲಿಯತ್ತ ಹೊರಟರು.

ನಂತರ ಟ್ರ್ಯಾಕ್ಟರ್ ನಲ್ಲಿ ಸಾಗುತ್ತಿದ್ದಂತೆ ಬ್ಯಾರಿಕೇಡ್ ಗಳನ್ನು ತಳ್ಳಿ ಮುಂದೆ ಸಾಗಿಸಲು ಆಗ ಪೊಲೀಸರೊಂದಿಗೆ ಘರ್ಷಣೆ ಆರಂಭವಾಯಿತು. ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ನೋಡಿದರು. ಹಲವು ಭಾಗಗಳಲ್ಲಿ ರೈತರು ಕೋಲುಗಳು, ಖಡ್ಗ ಮತ್ತು ಇತರ ಹರಿತ ಆಯುಧಗಳನ್ನು ಹೊತ್ತು ಸಾಗಿ ಪೊಲೀಸರೊಂದಿಗೆ ವಾಗ್ವಾದ, ಘರ್ಷಣೆಗೇ ಇಳಿದರು.

ಗಾಜಿಪುರ್ ಭಾಗದಿಂದ ಐಟಿಒ ಕಡೆಗೆ ಹೊರಟಿದ್ದ ರೈತರು ನಂತರ ನೇರವಾಗಿ ಹೋಗಿದ್ದು ದೆಹಲಿಯ ಕೆಂಪು ಕೋಟೆಗೆ ಅಲ್ಲಿ ಪೊಲೀಸರಿಗೆ ಕೋಲಿನಲ್ಲಿ ಬಡಿಯಲು ಆರಂಭಿಸಿದರು. ಕೆಲವು ರೈತರು ಅಕ್ಷರಧಾಮ ದೇವಸ್ಥಾನದ ಹತ್ತಿರ ಖಡ್ಗವನ್ನು ಹಿಡಿದುಕೊಂಡು ಸಾಗಿ ಪೊಲೀಸರೊಂದಿಗೆ ಹಿಂಚಾಚಾರಕ್ಕೆ ಇಳಿದರು.

ಪೊಲೀಸರು ಗುಂಪನ್ನು ನಿಯಂತ್ರಿಸಲು ಅಶ್ರುವಾಯು, ಸಿಡಿಮದ್ದು ಪ್ರಯೋಗ ಮಾಡಬೇಕಾಗಿ ಬಂತು. ಪ್ರತಿಭಟನಾಕಾರರು ಕೆಲವು ಕಡೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಜಖಂಗೊಳಿಸಿದರು. ಸಾರ್ವಜನಿಕ ಬಸ್ಸುಗಳು, ಪೊಲೀಸ್ ವಾಹನಗಳಿಗೆ ಹಾನಿಯಾದವು. 

ಪರಿಸ್ಥಿತಿ ಕೈಮೀರುತ್ತಿದ್ದಂತೆ ಸಂಯುಕ್ತ ಕಿಸಾನ್ ಮೋರ್ಚಾ ಟ್ರ್ಯಾಕ್ಟರ್ ರ್ಯಾಲಿಯನ್ನು ಹಿಂಪಡೆದು ರೈತರು ಪ್ರತಿಭಟನಾ ಸ್ಥಳಕ್ಕೆ ಹಿಂತಿರುಗುವಂತೆ ಮನವಿ ಮಾಡಿತು. ಇದೇ ಸಂಘಟನೆ ಟ್ರ್ಯಾಕ್ಟರ್ ರ್ಯಾಲಿಯ ಮುಂಚೂಣಿ ವಹಿಸಿತ್ತು. ಹಿಂಸಾಚಾರದಲ್ಲಿ ತಮ್ಮ ಪಾತ್ರವೇನೂ ಇಲ್ಲ, ಸಮಾಜಘಾತುಕ ವಿಧ್ವಂಸಕ ಶಕ್ತಿಗಳು ಕೆಲಸ ಮಾಡಿವೆ ಎಂದು ಕಿಸಾನ್ ಮೋರ್ಚಾ ಹೇಳಿಕೆಯಲ್ಲಿ ತಿಳಿಸಿದೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp