ಬಲವಂತದ ಮತಾಂತರ ಆರೋಪ: ಯುವತಿ ಪೋಷಕರು ಸೇರಿದಂತೆ ಹಲವರ ಬಂಧನ

ಯುವತಿಯನ್ನು ಮೋಸದ ಮೂಲಕ ಮತಾಂತರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶದಲ್ಲಿ ಪೋಷಕರು ಮತ್ತು ಹಲವರನ್ನು ಬಂಧಿಸಲಾಗಿದೆ.

Published: 27th January 2021 11:01 PM  |   Last Updated: 27th January 2021 11:01 PM   |  A+A-


arrested

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : PTI

ಇಂದೋರ್: ಯುವತಿಯನ್ನು ಮೋಸದ ಮೂಲಕ ಮತಾಂತರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶದಲ್ಲಿ ಪೋಷಕರು ಮತ್ತು ಹಲವರನ್ನು ಬಂಧಿಸಲಾಗಿದೆ.

ಮೋಸ ಮಾಡಿ ಯುವತಿಯನ್ನು ಬಲವಂತವಾಗಿ ಮತಾಂತರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶದಲ್ಲಿ ಯುವತಿಯ ಪೋಷಕರು ಮತ್ತು ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.  

ಈ ಹಿಂದೆ ಇಂದೋರ್ ನ ಭನ್ವರ್ಕುವಾನ್ ನಲ್ಲಿ ಭಜರಂಗದಳದ ಕಾರ್ಯಕರ್ತರು ಮತ್ತು ಕೆಲ ಕ್ರಿಶ್ಚಿಯನ್ ಸಮುದಾಯದವರೊಂದಿಗೆ ಕೈಕೈ ಮಿಲಾಯಿಸಿದ್ದರು. ಈ ವೇಳೆ ಯುವತಿಯ ಬಲವಂತದ ಮತಾಂತರ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ಮಾಹಿತಿ ನೀಡಿದ್ದ ಸಂತ್ರಸ್ಥ ಯುವತಿ ನಾನು ಹಿಂದೂ ಕುಟುಂಬದಲ್ಲಿ ಜನಿಸಿದ್ದು, ಅದನ್ನೇ ಪಾಲಿನೆ ಮಾಡಿಕೊಂಡು ಬಂದಿದ್ದೇನೆ. ಆದರೆ ಇತ್ತೀಚೆಗೆ ನನ್ನ ಪೋಷಕರು ಮತ್ತು ಇತರರು ನನ್ನನ್ನು ಅಜ್ಜಿಯ ಮನೆಗೆ ಕರೆದೊಯ್ಯುವುದಾಗಿ ಹೇಳಿ ಭನ್ವರ್ಕುವಾನ್ ನಲ್ಲಿನ ಚರ್ಚ್ ಗೆ ಕರೆದೊಯ್ದು ಬಲವಂತವಾಗಿ ಮತಾಂತರ ಮಾಡಿದ್ದರು. ಅಲ್ಲದೆ ಅವರ ಮಾತು ಕೇಳದ್ದಕ್ಕೆ ಕೆಲವು ಮಹಿಳೆಯರು ನನ್ನ ಕೈ ಕಾಲುಗಳನ್ನು ಎಳೆದು ಅಲ್ಲಿಗೆ (ಮರ್ಮಾಂಗಕ್ಕೆ) ಹೊಡೆದರು. ನನ್ನನ್ನು ಸಭಾಂಗಣದಲ್ಲಿ ಕುಳಿತುಕೊಳ್ಳಲು ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದರು. ಇದೇ ವಿಚಾರವಾಗಿ ಭಜರಂಗದಳದ ಕಾರ್ಯಕರ್ತರು ಗಲಾಟೆ ಮಾಡಿದ್ದರು.

ಇದೀಗ ಇದೇ ವಿಚಾರವಾಗಿ ಮಧ್ಯ ಪ್ರವೇಶಿಸಿದ ಪೊಲೀಸರು ಇತ್ತೀಚೆಗೆ ಮಧ್ಯ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದ ಧಾರ್ಮಿಕ ಸ್ವಾತಂತ್ರ್ದದ ಹಕ್ಕು 2020ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಯುವತಿಯ ಪೋಷಕರು ಮತ್ತು ಆಕೆಯನ್ನು ಮತಾಂತರ ಮಾಡಿದ್ದ ಇತರೆ 7 ಮಂದಿಯನ್ನು ಬಂಧಿಸಿದ್ದಾರೆ.  ಮಧ್ಯ ಪ್ರದೇಶದ ಈ ಕಾನೂನಿನ ಅನ್ವಯ ಬಲವಂತದ ಮತಾಂತರಕ್ಕೆ ಗರಿಷ್ಠ 10 ವರ್ಷ ಜೈಲು ಶಿಕ್ಷಿ ವಿಧಿಸುವ ಅವಕಾಶವಿದೆ. 

ಈ ಹಿಂದೆ ಇದೇ ಹೊಸ ಕಾನೂನಿನಡಿಯಲ್ಲಿ ಮಧ್ಯ ಪ್ರದೇಶ ಪೊಲೀಸರು ಕಳೆದ ವಾರ ಬಾರ್ವಾನಿ ಯಲ್ಲಿ ವಿವಾಹಿತ ವ್ಯಕ್ತಿಯನ್ನು ಮತ್ತು ಭೋಪಾಲ್‌ನಲ್ಲಿ ಮೆಕ್ಯಾನಿಕ್‌ನನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಚರ್ಚ್ ನ ಫಾದರ್ ಫಾದರ್ ಬಾಬು ಜೋಸೆಫ್ ಅವರು, ಪ್ರಾರ್ಥನೆ ಮತ್ತು ಸಭೆಗಾಗಿ ಕ್ರಿಶ್ಚಿಯನ್ ಸಮುದಾಯದ ಗುಂಪಿಗೆ ಸಭಾಂಗಣವನ್ನು ನೀಡಲಾಗಿದೆ. ಆದರೆ, ಕೆಲವು ಸಾಮಾಜ ವಿದ್ರೋಹಿಗಳು ಅಲ್ಲಿ ಧಾರ್ಮಿಕ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಬಲವಂತವಾಗಿ ಸಭಾಂಗಣಕ್ಕೆ ಪ್ರವೇಶಿಸಿದರು. ಮೈಕ್ ಸೆಟ್ ಮತ್ತು ಗೋಡೆಯ ಮೇಲೆ ಜೋಡಿಸಲಾದ ಫೋಟೋವನ್ನು ಎಸೆದು ಗಲಾಟೆ ಮಾಡಿದರು ಎಂದು ಅವರು ಆರೋಪಿಸಿದ್ದಾರೆ.   
 

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp