ಕೆಂಪುಕೋಟೆ ಮೇಲೆ 'ಖಲಿಸ್ತಾನ್' ಬಾವುಟ ಹಾರಾಟಕ್ಕೆ ಬಹುಮಾನ! 20 ದಿನಗಳ ಹಿಂದೆಯೇ ಗೊತ್ತಿದ್ದರೂ ಭದ್ರತಾ ವೈಫಲ್ಯ!
ಕೆಂಪುಕೋಟೆಯಲ್ಲಿ ಖಲಿಸ್ತಾನಿ ಧ್ವಜ ಹಾರಾಟದ ಯೋಜನೆ ಬಗ್ಗೆ 20 ದಿನಗಳ ಹಿಂದೆಯೇ ಗುಪ್ತಚರ ಇಲಾಖೆಯ ವಿಶೇಷ ನಿರ್ದೇಶಕರ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆಸಲಾಗಿತ್ತು ಎಂಬುದು ಮೂಲಗಳಿಂದ ತಿಳಿದುಬಂದಿದೆ.
Published: 28th January 2021 12:09 PM | Last Updated: 28th January 2021 12:54 PM | A+A A-

ಕೆಂಪುಕೋಟೆಯಲ್ಲಿ ಖಲಿಸ್ತಾನ್ ಬಾವುಟ
ನವದೆಹಲಿ: ಜ.26 ಗಣರಾಜ್ಯೋತ್ಸವ ದಿನದಂದು ಗುಪ್ತಚರ ಇಲಾಖೆಯ ವೈಫಲ್ಯದ ಬಗ್ಗೆ ರಾಜಕೀಯ ಮುಖಂಡರು ಧ್ವನಿ ಎತ್ತುತ್ತಿರುವಂತೆಯೇ, ಕೆಂಪುಕೋಟೆಯಲ್ಲಿ ಖಲಿಸ್ತಾನಿ ಧ್ವಜ ಹಾರಾಟದ ಯೋಜನೆ ಬಗ್ಗೆ 20 ದಿನಗಳ ಹಿಂದೆಯೇ ಗುಪ್ತಚರ ಇಲಾಖೆಯ ವಿಶೇಷ ನಿರ್ದೇಶಕರ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆಸಲಾಗಿತ್ತು ಎಂಬುದು ಮೂಲಗಳಿಂದ ತಿಳಿದುಬಂದಿದೆ.
ರಾ, ಎಸ್ ಪಿಜಿ, ಹರಿಯಾಣ ಪೊಲೀಸರನ್ನು ಹೊರತುಪಡಿಸದಂತೆ, ದೆಹಲಿಯ 8 ಉನ್ನತ ಪೊಲೀಸ್ ಅಧಿಕಾರಿಗಳು, 12 ಐಬಿಯ ಉನ್ನತಾಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದು, ಕೆಂಪುಕೋಟೆಯಲ್ಲಿ ಸಿಖ್ ಪ್ರತ್ಯೇಕತಾ ಸಂಘಟನೆಯ ಧ್ವಜ ಹಾರಾಟದ ವ್ಯವಸ್ಥೆ ಹಾಗೂ ಅದಕ್ಕೆ ಪ್ರತಿಯಾಗಿ ಮಾಡಬೇಕಾದ ತಂತ್ರಗಳ ಕುರಿತಂತೆ ಚರ್ಚೆ ನಡೆಸಲಾಗಿತ್ತು ಎನ್ನಲಾಗಿದೆ.
ಸಿಖ್ಖರಿಗಾಗಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಅಮೆರಿಕ ಮೂಲದ ಎಸ್ ಎಫ್ ಜೆ ಗುಂಪೊಂದು 2007ರಲ್ಲಿ ಸ್ಥಾಪನೆಯಾಗಿದ್ದು, ಗಣರಾಜ್ಯೋತ್ಸವ ದಿನದಿಂದ ಕೆಂಪುಕೋಟೆಯಲ್ಲಿ ಖಲಿಸ್ತಾನ್ ಧ್ವಜ ಹಾರಾಟ ನಡೆಸಿದರೆ 2,50, 000 ಹಾಗೂ ಫೆಬ್ರವರಿ 1 ರಂದು ಭಾರತದ ಸಂಸತ್ ಮೇಲೆ ಖಲಿಸ್ತಾನ್ ಧ್ವಜ ಹಾರಾಟ ನಡೆಸಿದರೆ 3,50,000 ಬಹುಮಾನದ ಘೋಷಣೆ ಮಾಡಿತ್ತು.
ಆದಾಗ್ಯೂ, ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭದಲ್ಲಿ ದೆಹಲಿಯಲ್ಲಿ ಹಿಂಸಾಚಾರ ಸಂಭವಿಸಿದ ಬಳಿಕ ರೈತ ಸಂಘಟನೆಗಳು ಪ್ರಸ್ತಾವಿತ ಸಂಸತ್ ವರೆಗಿನ ಮೆರವಣಿಗೆಯನ್ನು ಮುಂದೂಡಿವೆ.
ಪ್ರತಿಯೊಂದು ವರ್ಷವೂ ಗಣರಾಜ್ಯೋತ್ಸವವನ್ನು ಕಪ್ಪು ದಿನವನ್ನಾಗಿಯೇ ನೋಡುತ್ತಾ ಬಂದಿದ್ದು, ಈ ಸಂಘಟನೆಯ ಅನೇಕ ಮುಖಂಡರು ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಇಂತಹ ರೈತರಿಗೆ ಮತಾಂಧ ಸಿಖ್ಖರಿಂದ ಹಣಕಾಸಿನ ನೆರವನ್ನು ಒದಗಿಸಲಾಗುತಿತ್ತು ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.