ರೈತರ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಪ್ರಚೋದನೆ: ಶಿವಸೇನೆ ಆರೋಪ

ಕೃಷಿ ಕಾನೂನುಗಳ ವಿರುದ್ಧ ನಿರಂತರ ರೈತರ ಆಂದೋಲನವನ್ನು ಅಪಖ್ಯಾತಿಗೊಳಿಸುವ ಸಲುವಾಗಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದೆ ಎಂದು ಶಿವಸೇನೆ ಗುರುವಾರ ಆರೋಪಿಸಿದೆ. 

Published: 28th January 2021 10:09 AM  |   Last Updated: 28th January 2021 12:51 PM   |  A+A-


Farmer_Protest1

ಕೆಪುಕೋಟೆಗೆ ರೈತರ ಮುತ್ತಿಗೆ ಚಿತ್ರ

Posted By : Nagaraja AB
Source : The New Indian Express

ಮುಂಬೈ: ಕೃಷಿ ಕಾನೂನುಗಳ ವಿರುದ್ಧ ನಿರಂತರ ರೈತರ ಆಂದೋಲನವನ್ನು ಅಪಖ್ಯಾತಿಗೊಳಿಸುವ ಸಲುವಾಗಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದೆ ಎಂದು ಶಿವಸೇನೆ ಗುರುವಾರ ಆರೋಪಿಸಿದೆ. 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದ ಎರಡು ದಿನಗಳ ಬಳಿಕ ಶಿವಸೇನಾ ಈ ರೀತಿಯ ಹೇಳಿಕೆ ನೀಡಿದ್ದು, ಗಣರಾಜ್ಯೋತ್ಸವ ಸಂದರ್ಭದಲ್ಲಿ ನವದೆಹಲಿಯಲ್ಲಿ ಏನು ಸಂಭವಿಸಿತೋ ಅದಕ್ಕೆ ಯಾರೂ ಕೂಡಾ ಬೆಂಬಲ ನೀಡುವುದಿಲ್ಲ ಎಂದಿದೆ.

ಸಿಂಘು ಗಡಿಯಲ್ಲಿ ಕಳೆದ 60 ದಿನಗಳಿಂದ ಸಹಸ್ರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಗಣರಾಜ್ಯೋತ್ಸವ ದಿನದಿಂದ ಶಾಂತಯುತವಾಗಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವುದಾಗಿ ರೈತ ಮುಖಂಡರು ಹೇಳಿದ್ದರು. ಆದರೆ, ಬ್ಯಾರಿಕೇಡ್ ಮುರಿದು ಕೆಂಪು ಕೋಟೆಗೆ ನುಗ್ಗಲಾಗಿದೆ. ಈ ಘಟನೆಯಿಂದ ಇಡೀ ದೇಶ ಭೀತಿಗೊಂಡಿತ್ತು. ಕಾನೂನು ಮತ್ತುಸುವ್ಯವಸ್ಥೆ ಹಾಳಾಗಿ, ಗಣ್ಯರಾಜ್ಯೋತ್ಸವ ಸಂದರ್ಭದಲ್ಲಿ  ಇಂತಹ ಘಟನೆಯಿಂದ ಎಲ್ಲಾರಿಗೂ ನೋವುಂಟು ಮಾಡಲಾಗಿದೆ ಎಂದು ಸಾಮ್ನಾ ಮುಖವಾಣಿಯಲ್ಲಿ ಉಲ್ಲೇಖಿಸಲಾಗಿದೆ. 

ಹಿಂಸಾಚಾರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನಾ, ದೆಹಲಿ ಮುತ್ತಿಗೆ ಕಾರ್ಯಕ್ರಮ ಪೂರ್ವನಿಯೋಜಿತ. ಬಿಜೆಪಿ ಗುಪ್ತಚರ ವ್ಯವಸ್ಥೆ ಪ್ರಕಾರ, ರೈತರ ಆಂದೋಲನದಲ್ಲಿ ಉಗ್ರರ ಕೈವಾಡವಿದೆ. ಕೆಂಪು ಕೋಟೆಗೆ ನುಗ್ಗಿದ ಗಲಭೆಕೋರರ ಗುಂಪಿನ ನಾಯಕ ದೀಪ್ ಸಿಧು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಗುಂಪಿಗೆ ಸೇರಿದ್ದಾನೆ. ಪಂಜಾಬಿನ ಬಿಜೆಪಿ ಸಂಸದ ಸನ್ನಿ ಡಿಯೋ ಜೊತೆಗೆ ಹತ್ತಿರದ ಸಂಬಂಧ ಹೊಂದಿದ್ದಾನೆ. ಹಿಂಸಾಚಾರ ನಡೆಸಿ ರೈತರ ಪ್ರತಿಭಟನೆ ಒಡೆಯುವುದಾಗಿ ಸಿಧು ಹೇಳಿಕೆ ನೀಡಿದನ್ನು ರಾಜೇಶ್ ಟಿಕೈಟ್ ನಂತಹ ರೈತ ಮುಖಂಡರು ಬಹಿರಂಗಪಡಿಸಿರುವುದಾಗಿ ಶಿವಸೇನೆ ಹೇಳಿದೆ. 

ಕಳೆದ 6 ದಿನಗಳಿಂದ ರೈತರ ಹೋರಾಟ ಶಾಂತಿಯುತವಾಗಿ ಮುಂದುವರೆದಿದೆ. ಅವರ ವಿರೋಧಕ್ಕೆ ಕಾರಣವಾಗಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದನ್ನು ಬಿಟ್ಟು, ರೈತರ ಆಂದೋಲವನ್ನು ಒಡೆಯಲು ಆಗಲಿಲ್ಲ ಮತ್ತು ಅವರು ತಾಳ್ಮೆಯನ್ನು ಸಹ ಕಳೆದುಕೊಳ್ಳಲಿಲ್ಲ. ಇದೇ ಕಾರಣದಿಂದ ಕೇಂದ್ರ ಸರ್ಕಾರ ಹಿಂಸಾಚಾರದಲ್ಲಿ ಕೈ ಜೋಡಿಸಿದೆ. ರೈತರ ಆಂದೋಲನ ಖಲಿಸ್ತಾನಿ ಎಂದೂ ಹೇಳಲಾಗಿತ್ತು. ಆದರೆ ಇನ್ನೂ, ರೈತರು ಶಾಂತವಾಗಿದ್ದಾರೆ ಎಂದು ಹೇಳಿರುವ ಶಿವಸೇನೆ, ಪಂಜಾಬ್ ಮತ್ತೆ ಸಿಡಿದೆದ್ದರೆ ದೇಶಕ್ಕೆ ಒಳ್ಳೆಯದಲ್ಲಾ ಎಂದು ಎಚ್ಚರಿಕೆ ನೀಡಿದೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp