ಸಂಸತ್ತಿನ ಬಜೆಟ್ ಅಧಿವೇಶನ: ರಾಷ್ಟ್ರಪತಿ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್ ಸೇರಿ 16 ವಿಪಕ್ಷ ನಾಯಕರ ತೀರ್ಮಾನ!
ಶುಕ್ರವಾರದಿಂದ ಸಂಸತ್ತಿನ ಬಜೆಟ್ ಆರಂಭವಾಗಲಿದ್ದು, ರಾಷ್ಟ್ರಪತಿ ಜಂಟಿ ಭಾಷಣದ ಕಲಾಪ ಬಹಿಷ್ಕರಿಸಲು 16 ವಿಪಕ್ಷಗಳು ನಿರ್ಧರಿಸಿವೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
Published: 28th January 2021 03:27 PM | Last Updated: 29th January 2021 06:05 PM | A+A A-

ರಾಷ್ಟ್ರಪತಿ ರಾಮನಾಥ ಕೋವಿಂದ್
ನವದೆಹಲಿ: ಶುಕ್ರವಾರದಿಂದ ಸಂಸತ್ತಿನ ಬಜೆಟ್ ಆರಂಭವಾಗಲಿದ್ದು, ರಾಷ್ಟ್ರಪತಿ ಜಂಟಿ ಭಾಷಣದ ಕಲಾಪ ಬಹಿಷ್ಕರಿಸಲು 16 ವಿಪಕ್ಷಗಳು ನಿರ್ಧರಿಸಿವೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಕೇಂದ್ರದ ನೂತನ ಕೃಷಿ ಸುಧಾರಣಾ ಕಾಯ್ದೆ ವಿರೋಧಿಸಿ ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.
ಇದಕ್ಕೆ ಕಾಂಗ್ರೆಸ್ ಸೇರಿದಂತೆ 16 ವಿಪಕ್ಷಗಳ ಬೆಂಬಲವಿದೆ ಎಂದು ತಿಳಿಸಿದ್ದಾರೆ. ಇನ್ನು ವಿವಾದಿತ ಕೃಷಿ ಕಾನೂನುಗಳಲ್ಲದೆ, ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಭಾರತ ಮತ್ತು ಚೀನಾ ನಡುವಿನ ಸೇನಾ ಘರ್ಷಣೆ ವಿಷಯ ಕಾರಣ ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಲು ತೀರ್ಮಾನಿಸಲಾಗಿದ್ದು ಇನ್ನು ವಿರೋಧ ವ್ಯಕ್ತ ಪಡಿಸುವ 16 ಪಕ್ಷಗಳ ನಾಯಕರ ಜಂಟಿ ಹೇಳಿಕೆಯ ಪಟ್ಟಿಯನ್ನು ಅಜಾದ್ ಬಿಡುಗಡೆ ಮಾಡಿದ್ದಾರೆ.
ಇದಕ್ಕೆ ಡಿಎಂಕೆ, ಎಡಪಕ್ಷಗಳು, ಟಿಎಂಸಿ ಸೇರಿದಂತೆ ಅನೇಕ ಪಕ್ಷಗಳ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ.