
ಚೀನಾ-ಭಾರತ ಸಂಬಂಧ ಸುಧಾರಣೆಗೆ ವಿದೇಶಾಂಗ ಸಚಿವ ಜೈಶಂಕರ್ 8 ಸೂತ್ರಗಳು
ನವದೆಹಲಿ: ಲಡಾಖ್ ಘರ್ಷಣೆ ಬಳಿಕ ಚೀನಾ-ಭಾರತ ಸಂಬಂಧಗಳ ಸುಧಾರಣೆಗೆ ವಿದೇಶಾಂಗ ಸಚಿವ ಜೈಶಂಕರ್ ಅಷ್ಟ ತತ್ವಗಳನ್ನು ಸಿದ್ಧಪಡಿಸಿದ್ದಾರೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆ ನಿರ್ವಹಣೆ, ಪರಸ್ಪರ ಗೌರವ ಹಾಗೂ ಸೂಕ್ಷ್ಮತೆ ಹಾಗೂ ಏಷ್ಯಾದ ಶಕ್ತಿಗಳಾಗಿ ಹೊರಹೊಮ್ಮುವುದಕ್ಕೆ ಪರಸ್ಪರ ಆಕಾಂಕ್ಷೆಗಳನ್ನು ಗುರುತಿಸುವುದು ಸೇರಿದಂತೆ ಹಲವು ಒಪ್ಪಂದಗಳಿಗೆ ಬದ್ಧರಾಗಿರುವುದು ಈ 8 ಅಂಶದಲ್ಲಿ ಸೇರ್ಪಡೆಯಾಗಿದೆ.
ಭಾರತ-ಚೀನಾ ದ್ವಿಪಕ್ಷೀಯ ಸಂಬಂಧದ ಬಗ್ಗೆ ಆನ್ ಲೈನ್ ಕಾನ್ಫರೆನ್ಸ್ ನಲ್ಲಿ ಮಾತನಾಡಿರುವ ಜೈಶಂಕರ್, ಲಡಾಖ್ ಘರ್ಷಣೆಯ ಬಳಿಕ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳು ಹಾಳಾಗಿವೆ, ಏಕಪಕ್ಷೀಯವಾಗಿ ಎಲ್ಎಸಿಯಲ್ಲಿ ಯಾವುದೇ ಬದಲಾವಣೆಗಳು ಒಪ್ಪಲಾಗುವುದಿಲ್ಲ ಎಂದು ಜೈಶಂಕರ್ ಇದೇ ವೇಳೆ ತಿಳಿಸಿದ್ದಾರೆ.
ಗಡಿಯಲ್ಲಿ ಯಾವುದೇ ಸ್ಥಿತಿಯನ್ನೂ ನಿರ್ಲಕ್ಷ್ಯಿಸಿ ಜೀವವ ಅಸ್ತವ್ಯಸ್ತವಾಗದೇ ಮುಂದುವರೆಯುತ್ತದೆ ಎಂಬುದು ವಾಸ್ತವಿಕವಲ್ಲ ಎಂದು ಹೇಳಿದ್ದಾರೆ. ಭಾರತ-ಚೀನಾ ನಡುವಿನ ಸಂಬಂಧ ಇಂದು ನಿರ್ಣಾಯಕ ಘಟ್ಟದಲ್ಲಿದೆ, ಈಗ ಮಾಡುವ ಆಯ್ಕೆಗಳು ಎರಡು ರಾಷ್ಟ್ರಗಳಷ್ಟೇ ಅಲ್ಲದೇ ಇಡೀ ವಿಶ್ವದ ಮೇಲೆಯೇ ಪರಿಣಾಮ ಬೀರಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಈಶಾನ್ಯ ಲಡಾಖ್ ನಲ್ಲಿ ಚೀನಾದ ನಡೆಗಳು ಸೇನಾ ತುಕಡಿಗಳ ಮಟ್ಟವನ್ನು ಕಡಿಮೆ ಮಾಡುವುದಕ್ಕೆ ಇದ್ದ ಬದ್ಧತೆಯನ್ನು ನಿರ್ಲಕ್ಷಿಸಿರುವುದನ್ನು ತೋರುತ್ತದೆಯಷ್ಟೇ ಅಲ್ಲದೇ ಶಾಂತಿ ಸೌಹಾರ್ದತೆಯ ಉಲ್ಲಂಘನೆಯ ಇಚ್ಛೆಯನ್ನೂ ಬಯಲು ಮಾಡಿದೆ ಎಂದು ಹೇಳಿದ್ದಾರೆ.