ತೆಲಂಗಾಣ: ಹಾಡಹಗಲೇ ಟಿಡಿಪಿಯ ಮಾಜಿ ಪುರಸಭೆ ಸದಸ್ಯ ಬರ್ಬರ ಹತ್ಯೆ!

ತೆಲುಗು ದೇಶಂ ಪಕ್ಷದ ಮಾಜಿ ಪುರಸಭೆಯ ಸದಸ್ಯರೊಬ್ಬರನ್ನು ಇಂದು ಮುಂಜಾನೆ ಹಾಡಹಾಗಲೇ ಬರ್ಬರ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಹಿಂದೆ ಹಳೇ ದ್ವೇಷದ ಕಾರಣವಿದೆ ಎಂದು ಪೊಲೀಸರು ಹೇಳಿದ್ದಾರೆ.

Published: 28th January 2021 11:11 AM  |   Last Updated: 28th January 2021 11:11 AM   |  A+A-


Casual_Photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಜಂಗಾಂವ್:  ತೆಲುಗು ದೇಶಂ ಪಕ್ಷದ ಮಾಜಿ ಪುರಸಭೆಯ ಸದಸ್ಯರೊಬ್ಬರನ್ನು ಇಂದು ಮುಂಜಾನೆ ಹಾಡಹಾಗಲೇ ಬರ್ಬರ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಹಿಂದೆ ಹಳೇ ದ್ವೇಷದ ಕಾರಣವಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಂಗಾಂವ್ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಬಳಿಯ ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಮೃತದೇಹ ಬಿದ್ದಿರುವುದನ್ನು ನೋಡಿದ ವಾಯು ವಿಹಾರಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತರು ಮಾಜಿ ಪುರಸಭೆ ಸದಸ್ಯ ಪುಲ್ಲಿ ಸ್ವಾಮಿ ಎಂದು ಗುರುತಿಸಿದ್ದಾರೆ. ಅಪರಿಚಿತ ಇಬ್ಬರು ವ್ಯಕ್ತಿಗಳಿಂದ ಕೊಲೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಟೌನ್ ಬಸ್ಟ್ ಸ್ಯಾಂಡ್ ಬಳಿ ಇರುವ ಮನೆಯೊಂದರಲ್ಲಿ ವಾಸಿಸುತ್ತಿದ್ದ ಸ್ವಾಮಿ, ಇಂದು ಮುಂಜಾನೆ ವಾಯುವಿಹಾರ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದಾಗ, ಸಮಾಜ ಕಲ್ಯಾಣ ಇಲಾಖೆಯ ಶಾಲೆ ಬಳಿ ಇಬ್ಬರು ಅಪರಿಚಿತರು ಲಾಂಗ್ ಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಸ್ವಾಮಿ ತೀವ್ರ ಗಾಯಗೊಂಡು ಅಲ್ಲಿಯೇ ಬಿದ್ದು ಸಾವನ್ನಪ್ಪಿದ್ದಾರೆ.

ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. 


Stay up to date on all the latest ರಾಷ್ಟ್ರೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp