ಲಕ್ಷ್ಮಣ್ ಸವದಿ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು: ಮುಂಬೈ ಕುರಿತ ಹೇಳಿಕೆಗೆ ಸಂಜಯ್ ರಾವತ್ ಟೀಕೆ
ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನೀಡಿರುವ ಹೇಳಿಕೆಯನ್ನು ಶಿವಸೇನಾ ಮುಖಂಡ ಸಂಜಯ್ ರಾವತ್ ಖಂಡಿಸಿದ್ದಾರೆ.
Published: 28th January 2021 02:21 PM | Last Updated: 28th January 2021 02:31 PM | A+A A-

ಸಂಜಯ್ ರಾವತ್
ಮುಂಬೈ: ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನೀಡಿರುವ ಹೇಳಿಕೆಯನ್ನು ಶಿವಸೇನಾ ಮುಖಂಡ ಸಂಜಯ್ ರಾವತ್ ಖಂಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ವಾಸಿಸುತ್ತಿರುವ ಕನ್ನಡ ಭಾಷಿಕರು ಕರ್ನಾಟಕದಲ್ಲಿನ ಮರಾಠಿ ಪ್ರಾಬಲ್ಯದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಬಯಸಿದ್ದಾರೆ. ಲಕ್ಷ್ಮಣ್ ಸವದಿ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ರಾವತ್ ಹೇಳಿದ್ದಾರೆ. ಮುಂಬೈಯನ್ನು ಕರ್ನಾಟಕದ ಭಾಗವಾಗಿ ಮಾಡುವವರೆಗೂ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಕೇಂದ್ರ ಸರ್ಕಾರ ಘೋಷಿಸಬೇಕೆಂದು ಸವದಿ ಬುಧವಾರ ಹೇಳಿಕೆ ನೀಡಿದ್ದರು.
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಸವದಿ ಹೇಳಿಕೆಗೆ ಮಹತ್ವ ನೀಡಬೇಕಾದ ಅಗತ್ಯವಿಲ್ಲ. ಜನರು ಮಾತನಾಡಬುಹುದು, ಅದು ನಮ್ಮ ಮೇಲೆ ಪರಿಣಾಮ ಬೀರಲ್ಲ. ಸವದಿ ಚರಿತ್ರೆಯನ್ನು ಅರ್ಥಮಾಡಿಕೊಳ್ಳಬೇಕು. ಮರಾಠಿ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಣೆ ಕರ್ನಾಟಕದ ಜೊತೆಗಿನ ಗಡಿವಿವಾದದಲ್ಲಿದೆ ಎಂದರು.
ಸವದಿ ಮುಂಬೈ, ಮಹಾರಾಷ್ಟ್ರಕ್ಕೆ ಬಂದು ಕನ್ನಡ ಭಾಷಿಕರನ್ನು ಕೇಳಲಿ, ಬೆಳಗಾವಿ ಮತ್ತು ಇತರ ಮರಾಠಿ ಪ್ರಾಬಲ್ಯದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಯಾರು ಹೇಳುತ್ತಿದ್ದಾರೆ ಎಂಬುದನ್ನು ಕೇಳಲಿ ಎಂದು ಹೇಳಿದರು. ಮಹಾರಾಷ್ಟ್ರ ಸರ್ಕಾರ ಕನ್ನಡ ಶಾಲೆಗಳು, ಗ್ರಂಥಾಲಯಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳಿಗೆ ಅನುದಾನ ಒದಗಿಸಿದೆ. ಬೆಳಗಾವಿಯಲ್ಲಿ ಈ ರೀತಿ ಆಗಿದ್ದೇಯಾ? ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ರಾಜ್ಯ ಅಭಿವೃದ್ಧಿ ಅಜೆಂಡಾವನ್ನು ಅನುಷ್ಠಾನ ಮಾಡಲಿದ್ದಾರೆ ಎಂದು ಸಂಜಯ್ ರಾವತ್ ಹೇಳಿದರು.