1 ಲಕ್ಷ ತರಬೇತಿ ಪಡೆದ ಎನ್ಸಿಸಿ ಕೆಡೆಟ್ಗಳು ಕರಾವಳಿ, ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ: ಪ್ರಧಾನಿ ಮೋದಿ
ಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ ತರಬೇತಿ ಪಡೆಯುತ್ತಿರುವ ಒಂದು ಲಕ್ಷ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್(ಎನ್ಸಿಸಿ) ಕೆಡೆಟ್ಗಳು ಕರಾವಳಿ ಮತ್ತು ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ...
Published: 28th January 2021 04:37 PM | Last Updated: 28th January 2021 04:37 PM | A+A A-

ಪಿಎಂ ನರೇಂದ್ರ ಮೋದಿ
ನವದೆಹಲಿ: ಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ ತರಬೇತಿ ಪಡೆಯುತ್ತಿರುವ ಒಂದು ಲಕ್ಷ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್(ಎನ್ಸಿಸಿ) ಕೆಡೆಟ್ಗಳು ಕರಾವಳಿ ಮತ್ತು ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
ಇಂದು ದೆಹಲಿಯ ಕರಿಯಪ್ಪ ಮೈದಾನದಲ್ಲಿ ಎನ್ಸಿಸಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕಳೆದ ವರ್ಷ ಆಗಸ್ಟ್ 15 ರಂದು ಕರಾವಳಿ ಮತ್ತು ಗಡಿ ಪ್ರದೇಶಗಳ ಸುಮಾರು 175 ಜಿಲ್ಲೆಗಳಲ್ಲಿ ಎನ್ಸಿಸಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಅದರಂತೆ ಈಗ ಸುಮಾರು 1 ಲಕ್ಷ ಎನ್ಸಿಸಿ ಕೆಡೆಟ್ಗಳಿಗೆ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯಿಂದ ತರಬೇತಿ ನೀಡಲಾಗುತ್ತಿದೆ. ಈ ಪೈಕಿ ಮೂರನೇ ಒಂದು ಭಾಗ ಮಹಿಳಾ ಕೆಡೆಟ್ಗಳಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕದ ಮಧ್ಯೆ ಸರ್ಕಾರಕ್ಕೆ ಸಹಾಯ ಮಾಡಿದ್ದಕ್ಕಾಗಿ ಎನ್ಸಿಸಿ ಕೆಡೆಟ್ಗಳನ್ನು ಅಭಿನಂದಿಸಿದ ಪ್ರಧಾನಿ, ಎನ್ಸಿಸಿ ಕೆಡೆಟ್ಗಳು ಕಳೆದ ವರ್ಷ ಈ ದೇಶದ ಜನರಿಗೆ ಸಹಾಯ ಮಾಡಿದರು. ಅದರಂತೆ ಪ್ರವಾಹ ಅಥವಾ ಇನ್ನಾವುದೇ ವಿಪತ್ತಿನ ಸಂದರ್ಭದಲ್ಲೂ ನೆರವಿಗೆ ಸಿದ್ಧರಾಗಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಮೂರು ಸೇನಾ ಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.