ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ಸಂಪೂರ್ಣ ಅರ್ಥವಾದರೆ ದೇಶ ಹೊತ್ತಿ ಉರಿಯಲಿದೆ: ರಾಹುಲ್ ಗಾಂಧಿ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ಕುರಿತಂತೆ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ್ದು ಕಾಯ್ದೆಗಳ ಕುರಿತು ರೈತರಿಗೆ ಸಂಪೂರ್ಣವಾಗಿ ಅರ್ಥವಾದರೆ ದೇಶ ಹೊತ್ತಿ ಉರಿಯಲಿದೆ ಎಂದು ಹೇಳಿದ್ದಾರೆ.

Published: 28th January 2021 04:58 PM  |   Last Updated: 28th January 2021 04:58 PM   |  A+A-


Rahul Gandhi

ರಾಹುಲ್ ಗಾಂಧಿ

Posted By : Vishwanath S
Source : Online Desk

ಕಲ್ಪೆಟ್ಟಾ(ಕೇರಳ): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ಕುರಿತಂತೆ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ್ದು ಕಾಯ್ದೆಗಳ ಕುರಿತು ರೈತರಿಗೆ ಸಂಪೂರ್ಣವಾಗಿ ಅರ್ಥವಾದರೆ ದೇಶ ಹೊತ್ತಿ ಉರಿಯಲಿದೆ ಎಂದು ಹೇಳಿದ್ದಾರೆ.

ವಿವಾದಾತ್ಮಕ ಕೇಂದ್ರ ಕೃಷಿ ಕಾನೂನುಗಳನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್ ಗಾಂಧಿ ಇದು ರೈತರ ಮೇಲಿನ ಇತ್ತೀಚಿನ ಮಾರಕ ದಾಳಿ. ದೆಹಲಿಯಲ್ಲಿ ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ಹಿಂಸಾಚಾರದ ಒಂದು ದಿನದ ನಂತರ ಮಾತನಾಡಿದ ರಾಹುಲ್, ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಈ ಕೂಡಲೇ ರದ್ದುಪಡಿಸಬೇಕೆಂದು ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

"ಹೆಚ್ಚಿನ ರೈತರಿಗೆ ಕೃಷಿ ಮಸೂದೆಗಳ ಸಂಪೂರ್ಣ ವಿವರಗಳ ಬಗ್ಗೆ ತಿಳಿದಿಲ್ಲ. ಒಂದು ವೇಳೆ ತಿಳಿದರೆ ದೇಶಾದ್ಯಂತ ಆಂದೋಲನ ನಡೆಯುತ್ತಿತ್ತು ಎಂದು ರಾಹುಲ್ ತಮ್ಮ ಲೋಕಸಭಾ ಕ್ಷೇತ್ರದ ವಯನಾಡದ ಕಲ್ಪೆಟ್ಟದಲ್ಲಿ ಗುರುವಾರ ಯುಡಿಎಫ್ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು

ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ತನ್ನ ಕೇಂದ್ರ ಏಜೆನ್ಸಿಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇಡಿ)ವನ್ನು ವಿರೋಧ ಪಕ್ಷಗಳು ಆಳ್ವಿಕೆಯಲ್ಲಿರುವ ರಾಜ್ಯಗಳ ಮೇಲೆ ಆಕ್ರಮಣಕಾರಿಯಾಗಿ ಬಳಸುತ್ತಿದೆ. ಆದರೆ ಎಡಪಂಥೀಯ ಕೇರಳದ ಮೇಲೆ ಅಂತಹ ಯಾವುದೇ ಒತ್ತಡವಿಲ್ಲ ಎಂದು ಹೇಳಿದರು. 

ಗಣರಾಜ್ಯೋತ್ಸವದ ದಿನದಂದು ದೆಹಲಿಯ ಕೆಂಪುಕೋಟೆಯ ಮೇಲೆ ರೈತರು ನಡೆಸಿದ ಹಿಂಸಾಚಾರದ ಸಂಬಂಧ ಮಾತನಾಡಿದ ರಾಹುಲ್ ಪೊಲೀಸರು ಹಾಗೂ ರೈತರ ನಡುವಣ ಸಂಘರ್ಷ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಇನ್ನು ಹಿಂಸಾಚಾರದ ಮೂಲಕ ಯಾವುದೇ ಸಮಸ್ಯೆಗೂ ಪರಿಹಾರವಲ್ಲ ಎಂದು ಟ್ವೀಟ್ ಮಾಡಿದ್ದರು.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp