ಅಮಿತ್ ಶಾ ನಾಳೆಯಿಂದ ಎರಡು ದಿನ ಪಶ್ಚಿಮ ಬಂಗಾಳ ಭೇಟಿ!

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆಯಿಂದ ಎರಡು ದಿನ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಇಂದು ರಾತ್ರಿ ಕೊಲ್ಕತ್ತಾಕ್ಕೆ ಆಗಮಿಸಲಿದ್ದಾರೆ.

Published: 29th January 2021 05:57 PM  |   Last Updated: 29th January 2021 05:57 PM   |  A+A-


Amitsha1

ಕೇಂದ್ರ ಗೃಹ ಸಚಿವ ಅಮಿತ್ ಶಾ

Posted By : Nagaraja AB
Source : ANI

ಕೊಲ್ಕತ್ತಾ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆಯಿಂದ ಎರಡು ದಿನ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಇಂದು ರಾತ್ರಿ ಕೊಲ್ಕತ್ತಾಕ್ಕೆ ಆಗಮಿಸಲಿದ್ದಾರೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಲ್ಲಿನ ಅನೇಕ  ಮಂತ್ರಿಗಳು ಮತ್ತು ಶಾಸಕರು ಪಕ್ಷ ಮತ್ತು ರಾಜ್ಯ ಸರ್ಕಾರದ ಕಾರ್ಯಚಟುವಟಿಕೆಗಳ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿರುವಂತೆಯೇ ಅಮಿತ್ ಶಾ ಭೇಟಿ ನೀಡುತ್ತಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಇತ್ತೀಚಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಟಿಎಂಸಿ ಶಾಸಕ ರಾಜಿಬ್ ಬ್ಯಾನರ್ಜಿ, ಟಿಎಂಸಿ ಉಚ್ಚಾಟಿತ ಶಾಸಕ ಬೈಶಾಲಿ ದಾಲ್ಮಿಯಾ, ಮತ್ತು ಉತ್ತರ್ ಪರ ಶಾಸಕ ಪ್ರಬೀರ್ ಘೋಷಾಲ್ ಅಮಿತ್ ಶಾ ಭೇಟಿ ವೇಳೆ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಶನಿವಾರ ಬೆಳಗ್ಗೆ ಮಾಯಾಪುರದ ಇಸ್ಕಾನ್ ಗೆ ಭೇಟಿ ನೀಡಲಿರುವ ಅಮಿತ್ ಶಾ, ತದನಂತರ ಉತ್ತರ 24 ಪರಗಣದ ಠಾಕೂರ್ ನಗರಕ್ಕೆ ತೆರಳಿ, ಅಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂಜೆ ವೇಳೆಗೆ ಪಕ್ಷದ ಸಾಮಾಜಿಕ ಮಾಧ್ಯಮ ಘಟಕಗಳೊಂದಿಗೆ ಸಭೆ ನಡೆಸಲಿದ್ದಾರೆ. ಇತರ ಕೆಲ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿ್ದಾರೆ ಎಂದು ಕೊಲ್ಕತ್ತಾದ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. 

ಭಾನುವಾರ ಅರಬಿಂದೋ ಭವನಕ್ಕೆ ತೆರಳಿ ಗೌರವ ನಮನ ಸಲ್ಲಿಸಲಿದ್ದಾರೆ. ನಂತರ ಭಾರತ್ ಸೇವಾಶ್ರಮ ಸಂಘ, ಹೌರಾಕ್ಕೆ ತೆರಳಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp