ಪ್ರತಿಭಟನಾ ಸ್ಥಳ ಖಾಲಿ ಮಾಡಿ, ರೈತರಿಗೆ ಗಾಜಿಯಾಬಾದ್ ಜಿಲ್ಲಾಡಳಿತ ಎಚ್ಚರಿಕೆ!

ಉತ್ತರ ಪ್ರದೇಶ ಗಡಿ ಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆಗಳನ್ನು ಅಂತ್ಯಗೊಳಿಸುವಂತೆ ರೈತ ಸಂಘಟನೆಗಳಿಗೆ ಗಾಜಿಯಾಬಾದ್‌ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. 

Published: 29th January 2021 12:12 AM  |   Last Updated: 29th January 2021 12:18 AM   |  A+A-


ghazipur

ಪೊಲೀಸ್ ನಿಯೋಜನೆ

Posted By : Srinivasamurthy VN
Source : ANI

ನವದೆಹಲಿ: ಉತ್ತರ ಪ್ರದೇಶ ಗಡಿ ಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆಗಳನ್ನು ಅಂತ್ಯಗೊಳಿಸುವಂತೆ ರೈತ ಸಂಘಟನೆಗಳಿಗೆ ಗಾಜಿಯಾಬಾದ್‌ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. 

ಹೌದು... ರೈತರ ಪ್ರತಿಭಟನೆ ಅಂತ್ಯಗೊಳಿಸುವಂತೆ ಅಧಿಕಾರಿಗಳಿಗೆ ಸಿಎಂ ಯೋಗಿ ಆದಿತ್ಯಾನಾಥ್ ಸೂಚನೆ ನೀಡಿದ ಬೆನ್ನಲ್ಲೇ ಗಾಜಿಯಾಬಾದ್ ಜಿಲ್ಲಾಡಳಿತ ಪ್ರತಿಭಟನಾ ಸ್ಥಳದಿಂದ ತೆರವುಗೊಳ್ಳಲು ಗುರುವಾರ ರಾತ್ರಿಯವರೆಗೂ ಕಾಲಾವಕಾಶ ನೀಡಿದೆ. ಉತ್ತರ ಪ್ರದೇಶದ  ಪಾಗಪಾತ್‌ನಲ್ಲಿ ಇಂದು ರೈತರ ಪ್ರತಿಭಟನೆ ಅಂತ್ಯಗೊಂಡಿದೆ. ಕಳೆದ ವರ್ಷ ಡಿಸೆಂಬರ್‌ 19ರಿಂದ ಇಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. 'ಪೊಲೀಸ್ ಬಲವನ್ನು ಬಳಸುವ ಮೂಲಕ ಪ್ರತಿಭಟನೆ ಅಂತ್ಯಗೊಳಿಸಲಾಗಿದೆ' ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ.

ಗಾಜಿಪುರ ಗಡಿಭಾಗದಲ್ಲಿ ರೈತರಿಗೆ ಸಿಆರ್‌ಪಿಸಿ ಸೆಕ್ಷನ್‌ 133ರ ಅಡಿಯಲ್ಲಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಗಾಜಿಯಾಬಾದ್‌ನ ಎಡಿಎಂ ಶೈಲೇಂದ್ರ ಕುಮಾರ್‌ ಸಿಂಗ್‌ ಹೇಳಿದ್ದಾರೆ. ಈ ನಡುವೆ ಇಂದು ರಾತ್ರಿ ಗಾಜಿಪುರ ಗಡಿಯಲ್ಲಿ ಧರಣಿ ಕೊನೆಯಾಗಲಿದೆ ಎಂದು ಭಾರತೀಯ  ಕಿಸಾನ್‌ ಸಂಘಟನೆಯ (ಬಿಕೆಯು) ಮುಖಂಡ ನರೇಶ್‌ ಟಿಕೈಯ್ತ್‌ ಮುಜಾಫರ್‌ನಗರದಲ್ಲಿ ಘೋಷಿಸಿದ್ದಾರೆ. ಆದರೆ, ಪ್ರತಿಭಟನೆ ಮುಂದುವರಿಯಲಿದೆ ಎಂದು ನರೇಶ್‌ ಅವರ ಸೋದರ ರಾಕೇಶ್‌ ಹೇಳಿರುವುದು ಪ್ರತಿಭಟನಾಕಾರರಲ್ಲಿ ಗೊಂದಲ ಸೃಷ್ಟಿಸಿದೆ.

ಇನ್ನು ಮುಂಜಾಗ್ರತಾ ಕ್ರಮವಾಗಿ ಗಾಜಿಪುರ್ ನ ರಸ್ತೆ ಸಂಖ್ಯೆ 56, ಅಕ್ಷರಧಾಮ ಮತ್ತು ನಿಜಮ್ಮುದ್ದೀನ್ ಖಟ್ಟಾದಿಂದ ಸಂಚಾರವನ್ನು ಸ್ಥಗಿತಗೊಳಿಸಿ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಪೊಲೀಸರು ದಯವಿಟ್ಟು ಎನ್ಎಚ್ 9  ಮತ್ತು ಎನ್ಎಚ್ 24 ನಲ್ಲಿ ಪ್ರಯಾಣವನ್ನು ಸ್ಥಗಿತಗೊಳಿಸಿ ಚಿಲ್ಲಾ, ಡಿಎನ್ಡಿ, ಅಪ್ಸರಾ, ಭೋಪ್ರಾ ಮತ್ತು ಲೋನಿ ಗಡಿಗಳ ಮೂಲಕ ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳಿ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಪೆರೇಡ್‌, ಟ್ರ್ಯಾಕ್ಟರ್‌ ರ್‍ಯಾಲಿಯ ಸಂದರ್ಭದಲ್ಲಿ ಹಲವು ಮಂದಿ ಕೆಂಪು ಕೋಟೆಗೆ ನುಗ್ಗಿದ್ದು ಹಾಗೂ ಪೊಲೀಸರ ಜೊತೆಗೆ ಘರ್ಷಣೆಗೆ ಇಳಿದ ಪರಿಣಾಮ ರೈತರ ಪ್ರತಿಭಟನೆಯ ಸ್ವರೂಪವೇ ಬದಲಾಯಿತು. ಒಬ್ಬ ರೈತ ಸಾವಿಗೀಡಾದರೆ, ಸುಮಾರು  400 ಪೊಲೀಸರು ಗಾಯಗೊಂಡಿದ್ದರು. ಕೆಂಪು ಕೋಟೆಯ ಗೋಪುರಗಳಲ್ಲಿ ಅನ್ಯ ಧ್ವಜಗಳನ್ನು ಹಾರಿಸಿದ್ದು, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ಹಾನಿಯುಂಟು ಮಾಡಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪೊಲೀಸರು ರೈತ ಮುಖಂಡರ ವಿರುದ್ಧ ಲುಕ್‌ಔಟ್‌  ನೋಟಿಸ್‌ ಜಾರಿ ಮಾಡಿದ್ದಾರೆ. 'ಪೆರೇಡ್‌ಗೆ ನಿಗದಿ ಪಡಿಸಿದ್ದ ನಿಗಮಗಳನ್ನು ಪಾಲಿಸದಿರುವುದಕ್ಕಾಗಿ, ನಿಮ್ಮ ವಿರುದ್ಧ ಏಕೆ ಕಾನೂನು ರೀತಿಯ ಕ್ರಮಕೈಗೊಳ್ಳಬಾರದು' ಎಂದು ಮೂರು ದಿನಗಳ ಒಳಗಾಗಿ ಪ್ರತಿಕ್ರಿಯೆ ದಾಖಲಿಸುವಂತೆ ಬಿಕೆಯುನ ವಕ್ತಾರ ರಾಕೇಶ್‌ ಟಿಕೈಯ್ತ್ ಅವರಿಗೂ  ಪೊಲೀಸರು ಸೂಚಿಸಿದ್ದಾರೆ. 
 


Stay up to date on all the latest ರಾಷ್ಟ್ರೀಯ news
Poll
Omicron

ಮಾಲ್‌ಗಳು/ಥಿಯೇಟರ್‌ಗಳಿಗೆ ಭೇಟಿ ನೀಡಲು ಎರಡು ಡೋಸ್ ಲಸಿಕೆಯನ್ನು ಕಡ್ಡಾಯಗೊಳಿಸಿರುವುದು ಸರಿಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp