ಜನರಿಗೆ ನ್ಯಾಯ ಒದಗಿಸುವುದರಲ್ಲಿ ಮಹಾರಾಷ್ಟ್ರ ಅತ್ಯುತ್ತಮ; ಉತ್ತರ ಪ್ರದೇಶ ಕಳಪೆ: ಭಾರತೀಯ ನ್ಯಾಯಾಧಿಕಾರ ವರದಿ

ಭಾರತ ನ್ಯಾಯ ವರದಿ (ಐಜೆಆರ್ ) 2020 ಪ್ರಕಾರ, ಜನರಿಗೆ ನ್ಯಾಯ ಒದಗಿಸುವುದರಲ್ಲಿ ಮಹಾರಾಷ್ಟ್ರ ಅತ್ಯುತ್ತಮವಾಗಿದ್ದರೆ, ಉತ್ತರ ಪ್ರದೇಶ ತೀರಾ ಕಳಪೆ ಸ್ಥಾನದಲ್ಲಿದೆ.

Published: 29th January 2021 02:31 PM  |   Last Updated: 29th January 2021 02:55 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ನವದೆಹಲಿ: ಭಾರತ ನ್ಯಾಯಾಧಿಕಾರ ವರದಿ (ಐಜೆಆರ್) 2020 ಪ್ರಕಾರ, ಜನರಿಗೆ ನ್ಯಾಯ ಒದಗಿಸುವುದರಲ್ಲಿ ಮಹಾರಾಷ್ಟ್ರ ಅತ್ಯುತ್ತಮವಾಗಿದ್ದರೆ, ಉತ್ತರ ಪ್ರದೇಶ ತೀರಾ ಕಳಪೆ ಸ್ಥಾನದಲ್ಲಿದೆ.

ಅತ್ಯುತ್ತಮ 11 ರಾಜ್ಯಗಳಲ್ಲಿ ಮಹಾರಾಷ್ಟ್ರ 10 ಅಂಕಗಳ ಪೈಕಿ 5.77 ಅಂಕಗಳನ್ನು ಪಡೆದರೆ, ಉತ್ತರ ಪ್ರದೇಶ 3.15 ಅಂಕಗಳನ್ನು ಪಡೆದುಕೊಂಡಿದೆ. ಕಾರಾಗೃಹ ಸಿಬ್ಬಂದಿ, ಪೊಲೀಸ್ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನಿತರ 53 ಅಂಶಗಳ ಆಧಾರದ ಮೇಲೆ ಈ ಶ್ರೇಯಾಂಕವನ್ನು ನೀಡಲಾಗಿದೆ. 

ಒಟ್ಟಾರೆ ದಟ್ಟಣೆ ಹೆಚ್ಚಾಗಿದ್ದು, ಶೇ. 69 ರಷ್ಟು ಜೈಲಿನಲ್ಲಿರುವ ಜನರು ತನಿಖೆ ಹಾಗೂ ವಿಚಾರಣೆಗಾಗಿ ಈಗಲೂ ಕಾಯುತ್ತಿದ್ದಾರೆ. ಐಜೆಆರ್ ಸಾಮಾಜಿಕ ನ್ಯಾಯ ಕೇಂದ್ರ, ಕಾಮನ್ ವೆಲ್ತ್  ಮಾನವ ಹಕ್ಕುಗಳ ಕಾರ್ಯಕ್ರಮ, ದಕ್ಷ್, ಕಾನೂನು ನೀತಿಗಾಗಿ ವಿಧಿ ಸೆಂಚರ್ ಸಹಭಾಗಿತ್ವದಲ್ಲಿ ಟಾಟಾ ಟ್ರಸ್ಟ್ ಕೈಗೊಂಡಿರುವ ಒಂದು ಕಾರ್ಯಕ್ರಮವಾಗಿದೆ. 2019ರಲ್ಲಿ ಮೊದಲ ಐಜೆಆರ್ ಪ್ರಕಟವಾಗಿತ್ತು.

ಐದು ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳು ಶೇಕಡ 50ಕ್ಕಿಂತಲೂ ಕಡಿಮೆ ಸ್ಥಾನದಲ್ಲಿವೆ. ಕೇರಳ (42%) ರಾಜಸ್ತಾನ (38%) ಪಶ್ಚಿಮ ಬಂಗಾಳ (32%) ಕರ್ನಾಟಕ (31%) ಮತ್ತು ತಮಿಳುನಾಡು (9%)ರಷ್ಟು ಅಂಕಗಳನ್ನು ಹೊಂದಿವೆ. 

ಆದಾಗ್ಯೂ, ಕಠಿಣ ಮೇಲ್ವಿಚಾರಣೆ ಮತ್ತು ಅದರ ಕಾರ್ಯವೈಖರಿಯ ಮೌಲ್ಯಮಾಪನವಿಲ್ಲದೆ ಹೆಚ್ಚುತ್ತಿರುವ ತಂತ್ರಜ್ಞಾನ ಬಳಕೆಯು ಆರೋಪಿಗಳ ನ್ಯಾಯಯುತ ವಿಚಾರಣೆಯ ಮೇಲಿನ ಪರಿಣಾಮಗಳನ್ನು ಪ್ರಶ್ನಿಸಿದೆ. ಕಾರಾಗೃಹಗಳ ಮೇಲೆ ವೆಚ್ಚ ಹೆಚ್ಚಳವನ್ನು ರಾಜ್ಯಗಳು ತೋರಿಸಿವೆ ಎಂದು ವರದಿ ಹೇಳಿದೆ.

ಬಿಹಾರ, ತಮಿಳುನಾಡು, ಜಾರ್ಖಂಡ್ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಜನಸಂಖ್ಯೆ 10 ಮಿಲಿಯನ್ ನಷ್ಟಿದ್ದು, 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರಾಗೃಹ ವೆಚ್ಚದ ಹೆಚ್ಚಾಗಿದೆ. ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ನಡುವೆ ಇರುವ ನ್ಯಾಯ ಅಸಮಾನತೆಯನ್ನು ಸರಿಪಡಿಸಲು ನ್ಯಾಯ ಸೇವೆ ಲಭ್ಯತೆ ಹೆಚ್ಚಾಗುವಂತೆ ಮಾಡಬೇಕಾಗಿದೆ ಎಂದು ವರದಿ ಸಲಹೆ ನೀಡಿದೆ.

2019 ಮತ್ತು ಈಗ 2020 ರ ವರದಿಗಳು ನೀತಿ ನಿರೂಪಕರು ಮತ್ತು ನಾಗರಿಕ ಸಮಾಜಕ್ಕೆ ಪುರಾವೆ ಆಧಾರವನ್ನು ನೀಡುವಲ್ಲಿ ಮಹತ್ವದ ಕೊಡುಗೆ ನೀಡುತ್ತವೆ ಎಂದು ಟಾಟಾ ಟ್ರಸ್ಟ್‌ನ ಸಿಇಒ ಎನ್ ಶ್ರೀನಾಥ್ ಹೇಳಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp