ಸಿಂಘು ಗಡಿಭಾಗದ ಪ್ರತಿಭಟನಾ ಸ್ಥಳದಲ್ಲಿ ಘರ್ಷಣೆ: ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿ ಸೇರಿ 44 ಮಂದಿ ಬಂಧನ 

ದೆಹಲಿ ಮತ್ತು ಹರ್ಯಾಣ ಗಡಿಭಾಗದ ಸಿಂಘುವಿನಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಸೇರಿದಂತೆ 44 ಮಂದಿಯನ್ನು ಇದುವರೆಗೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.

Published: 30th January 2021 08:15 AM  |   Last Updated: 30th January 2021 08:27 AM   |  A+A-


Several people including a police officer were injured in the violence.

ಸಿಂಘು ಗಡಿಭಾಗದಲ್ಲಿ ನಡೆದ ಘರ್ಷಣೆ ದೃಶ್ಯ

Posted By : Sumana Upadhyaya
Source : PTI

ನವದೆಹಲಿ: ದೆಹಲಿ ಮತ್ತು ಹರ್ಯಾಣ ಗಡಿಭಾಗದ ಸಿಂಘುವಿನಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಸೇರಿದಂತೆ 44 ಮಂದಿಯನ್ನು ಇದುವರೆಗೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ಕಳೆದ 2 ತಿಂಗಳಿನಿಂದ ತೀವ್ರವಾಗಿದ್ದು ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇ ಬಳಿ ಗಾಜಿಪುರ್ ಭಾಗದಲ್ಲಿ ಸಾವಿರಾರು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಬೇಕೆಂದು ಗಾಜಿಪುರ ಜಿಲ್ಲಾಡಳಿತ ಹೇಳಿದ್ದರೂ ಕೂಡ ಪ್ರತಿಭಟನಾಕಾರರು ಕ್ಯಾರೇ ಮಾಡಿಲ್ಲ. ಈ ನಿಟ್ಟಿನಲ್ಲಿ ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆಯನ್ನು ಕರೆಸಿ ನಿಯೋಜಿಸಲಾಗಿದೆ.

ಭಾರಿ ಪೊಲೀಸ್ ಭದ್ರತೆಯ ಹೊರತಾಗಿಯೂ, ಸಿಂಘು ಗಡಿಭಾಗದ ಸ್ಥಳದಲ್ಲಿ ಓರ್ವ ಪೊಲೀಸ್ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಪ್ರತಿಭಟನಾಕಾರರ ಟೆಂಟ್ ಗಳನ್ನು ಧ್ವಂಸಗೊಳಿಸಿದ್ದಾನೆ, ಅಲ್ಲಿದ್ದ ವಾಷಿಂಗ್ ಮೆಶಿನ್ ನ್ನು ಸಹ ಹಾಳು ಮಾಡಿದ್ದಾನೆ. ರೈತರು ಮತ್ತು ಜನರ ಭಾರೀ ಗುಂಪಿನ ನಡುವೆ ಘರ್ಷಣೆ ನಿಲ್ಲಿಸಲು ಪೊಲೀಸರು ಅಶ್ರುವಾಯು, ಬ್ಯಾಟನ್ ಗಳನ್ನು ಪ್ರಯೋಗಿಸಬೇಕಾಯಿತು. ಘರ್ಷಣೆಯಲ್ಲಿ ತೊಡಗಿದ್ದವರು ಪರಸ್ಪರ ಕಲ್ಲು ತೂರಾಟ ನಡೆಸಿಕೊಂಡರು. ಗಲಭೆಯಲ್ಲಿ ದೆಹಲಿಯ ಪೊಲೀಸ್ ಅಧಿಕಾರಿ ಪ್ರದೀಪ್ ಪಲಿವಾಲ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ರೈತರಿಂದ ಇಂದು ಉಪವಾಸ ಸತ್ಯಾಗ್ರಹ: ನಿನ್ನೆ ಸಾವಿರಾರು ಮಂದಿ ಪ್ರತಿಭಟನಾಕಾರರು ಸ್ಥಳಕ್ಕೆ ಜಮಾಯಿಸಿದ್ದು, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವ ನಮ್ಮ ವಿರುದ್ಧ ಕೇಂದ್ರ ಸರ್ಕಾರ ಬೇಕೆಂದೇ ಗಲಭೆಕೋರರನ್ನು ಕಳುಹಿಸಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ರೈತ ಸಂಘಟನೆಗಳ ಮುಖಂಡರು ಆರೋಪಿಸಿದ್ದು ಈ ನಿಟ್ಟಿನಲ್ಲಿ ಇಂದು ಮಹಾತ್ಮಾಗಾಂಧಿ ಪುಣ್ಯ ತಿಥಿಯ ಅಂಗವಾಗಿ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp