ಪೊಕ್ಸೊ ಪ್ರಕರಣ: ಬಾಂಬೆ ಹೈಕೋರ್ಟ್ ತೀರ್ಪು ಖಾಯಂಗೆ ಮಾಡಿದ್ದ ಶಿಫಾರಸು ಹಿಂಪಡೆದ ಸುಪ್ರೀಂ ಕೋರ್ಟ್

ಪೋಕ್ಸೋ ಕಾಯ್ದೆಯಡಿ ಬರುವ ಪ್ರಕರಣಗಳಲ್ಲಿ ತೀರ್ಪು ನೀಡಿ ವಿವಾದಕ್ಕೆ ಗುರಿಯಾಗಿದ್ದ ಬಾಂಬೆ ಹೈಕೋರ್ಟ್ ನ್ಯಾಯಾಧೀಶೆ ಪುಷ್ಪಾ ಗಣದೇವಾಲಾ ಅವರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ.

Published: 30th January 2021 03:25 PM  |   Last Updated: 30th January 2021 06:00 PM   |  A+A-


ಪುಷ್ಪಾ ಗಣದೇವಾಲಾ, ಸುಪ್ರೀಂ ಕೋರ್ಟ್

Posted By : Raghavendra Adiga
Source : Online Desk

ನವದೆಹಲಿ: ಪೋಕ್ಸೋ ಕಾಯ್ದೆಯಡಿ ಬರುವ ಪ್ರಕರಣಗಳಲ್ಲಿ ತೀರ್ಪು ನೀಡಿ ವಿವಾದಕ್ಕೆ ಗುರಿಯಾಗಿದ್ದ ಬಾಂಬೆ ಹೈಕೋರ್ಟ್ ನ್ಯಾಯಾಧೀಶೆ ಪುಷ್ಪಾ ಗಣದೇವಾಲಾ ಅವರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಪುಷ್ಪಾ ಅವರನ್ನು ಬಾಂಬೆ ಹೈಕೋರ್ಟ್ ಶಾಶ್ವತ ನ್ಯಾಯಾಧೀಶೆಯನ್ನಾಗಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಹಿಂದೆ ಸೂಚಿಸಿದ್ದ ಒಪ್ಪಿಗೆಯನ್ನು ಹಿಂತೆಗೆದುಕೊಂಡಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಗೆ ಸಂಬಂಧಿಸಿದಂತೆ ಅವರು ನೀಡಿದ್ದ ತೀರ್ಪುಗಳು ವಿವಾದಕ್ಕೆ ಕಾರಣವಾಗಿ ಸಾರ್ವಜನಿಕರ ಆಕ್ರೋಶ ಹೆಚ್ಚಿದ ನಂತರ ಸರ್ವೋಚ್ಚ ನ್ಯಾಯಾಲಯ ಈ ತೀರ್ಮಾನ ತೆಗೆದುಕೊಂಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್. ಬೊಬ್ಡೆ ನೇತೃತ್ವದ ಮೂರು ಸದಸ್ಯರ ಕೊಲೆಜಿಯಂ ಪ್ರಸ್ತುತ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ  ಅವರನ್ನು ಶಾಶ್ವತ ನ್ಯಾಯಮೂರ್ತಿಗಳನ್ನಾಗಿಸಲು ಶಿಫಾರಸನ್ನು ಮಾಡಿತ್ತು. ಆದರೆ ಇದೀಗ ಆ ಶಿಫಾರಸನ್ನು ಹಿಂಪಡೆದಿದೆ.

ಮಕ್ಕಳ ಮೇಲಿನ ಅಪರಾಧಗಳಿಗಾಗಿ ಪೋಕ್ಸೊ ಪ್ರಕರಣದಡಿ ಆರೋಪಿಗಳನ್ನು ಖುಲಾಸೆಗೊಳಿಸುವ ತೀರ್ಪುಗಳನ್ನು ಒಂದರ ಹಿಂದೆ ಒಂದರಂತೆ ನೀಡಿದ ಪುಷ್ಪಾ ಅವರನ್ನು ಬಾಂಬೆ ಹೈಕೋರ್ಟ್ ಶಾಶ್ವತ ನ್ಯಾಯಾಧೀಶೆಯನ್ನಾಗಿಸಲು ಏಕೆ ಶಿಫಾರಸು ಮಾಡಲಾಗಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಈ ತಿಂಗಳ ಪ್ರಾರಂಭದಲ್ಲಿ ಆಕೆ ನೀಡಿದ ತೀರ್ಪಿನಲ್ಲಿ “ಚರ್ಮದಿಂದ ಚರ್ಮಕ್ಕೆ ಸಂಪರ್ಕ ” ಇಲ್ಲದೆ ಅಪ್ರಾಪ್ತ ವಯಸ್ಕಳ ಸ್ತನವನ್ನು ಮುಟ್ಟುವುದು ಲೈಂಗಿಕ ದೌರ್ಜನ್ಯವಲ್ಲ ಎಂದು ಹೇಳಿದೆ. 2016ದಲ್ಲಿ ಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಈ ವಿವರಣೆ ನೀಡಿದ್ದು 39 ವರ್ಷದ ವ್ಯಕ್ತಿಯೊಬ್ಬ 12 ವರ್ಷದ ಬಾಲಕಿಯ ಸ್ತನಗಳನ್ನು ಮುಟ್ಟಿದ್ದನೆಂದು ಆರೋಪಿಸಲಾಗಿತ್ತು. ಈ ತೀರ್ಪಿನ ಬಗೆಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾದ ನಂತರ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಕರಣದ ಆರೋಪಿಗಳ ಖುಲಾಸೆ ಆದೇಶವನ್ನು ತಡೆಹಿಡಿದಿದೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp