ಫೆಬ್ರವರಿ 6 ರಂದು ಉತ್ತರಾಖಂಡ್ ಸರ್ಕಾರದಿಂದ ರೈತರಿಗೆ ಬಡ್ಡಿರಹಿತ ಸಾಲ ವಿತರಣೆ
ಉತ್ತರಾಖಂಡ್ ಸರ್ಕಾರ ದೀನ್ ದಯಾಳ್ ಉಪಾಧ್ಯಾಯ ಸಹಕಾರಿ ರೈತರ ಕಲ್ಯಾಣ ಯೋಜನೆಯಡಿ ಫೆಬ್ರವರಿ 6 ರಂದು ರಾಜ್ಯದ 25000 ರೈತರಿಗೆ ತಲಾ 3 ಲಕ್ಷ ರೂ.ವರೆಗೆ ಮತ್ತು ರೈತ ಗುಂಪುಗಳಿಗೆ 5 ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ ನೀಡಲಿದೆ.
Published: 31st January 2021 12:26 AM | Last Updated: 31st January 2021 12:26 AM | A+A A-

ಉತ್ತರಾಖಂಡ್ ಸಿಎಂ ತ್ರಿವೇಂದ್ರ ರಾವತ್
ಡೆಹ್ರಾಡೂನ್: ಉತ್ತರಾಖಂಡ್ ಸರ್ಕಾರ ದೀನ್ ದಯಾಳ್ ಉಪಾಧ್ಯಾಯ ಸಹಕಾರಿ ರೈತರ ಕಲ್ಯಾಣ ಯೋಜನೆಯಡಿ ಫೆಬ್ರವರಿ 6 ರಂದು ರಾಜ್ಯದ 25000 ರೈತರಿಗೆ ತಲಾ 3 ಲಕ್ಷ ರೂ.ವರೆಗೆ ಮತ್ತು ರೈತ ಗುಂಪುಗಳಿಗೆ 5 ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ ನೀಡಲಿದೆ.
ಫೆಬ್ರವರಿ 6ರಂದು ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಕಿಸಾನ್ ಭವನ್ ಬಳಿಯ ಮೈದಾನದಲ್ಲಿ ಈ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ಯೋಜನೆಗೆ ಅಂತಿಮ ರೂಪ ನೀಡಲಾಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ರಾವತ್ ಅವರು, ರೈತರ ಹಿತಾಸಕ್ತಿ ನಮಗೆ ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆ ನಿಸ್ಸಂದೇಹವಾಗಿ ರೈತರಿಗೆ ಪ್ರಯೋಜನವಾಗಲಿದೆ ಎಂದರು. ಅಲ್ಲದೆ ರೈತರ ಗುಂಪುಗಳಿಗೆ 5 ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲವು ಕೃಷಿಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.