ಕೆಂಪು ಕೋಟೆ ಮೇಲೆ ಧಾರ್ಮಿಕ ಬಾವುಟ: ಆರೋಪಿಗೆ ಜುಲೈ 20 ರವರೆಗೂ ಬಂಧನದಿಂದ ಕೋರ್ಟ್ ವಿನಾಯಿತಿ

ಗಣರಾಜ್ಯೋತ್ಸವದ ದಿನದಂದು ರೈತರ ಪ್ರತಿಭಟನೆಯ ವೇಳೆ ಕೆಂಪು ಕೋಟೆ ಮೇಲೆ ಧಾರ್ಮಿಕ ಬಾವುಟ ಹಾರಿಸಿದ್ದ ಆರೋಪಿಗೆ ಜು.20 ವರೆಗೂ ಬಂಧನದಿಂದ ವಿನಾಯಿತಿ ನೀಡಲಾಗಿದೆ. 
ಕೆಂಪು ಕೋಟೆಯ ಮೇಲೆ ಧಾರ್ಮಿಕ ಧ್ವಜ
ಕೆಂಪು ಕೋಟೆಯ ಮೇಲೆ ಧಾರ್ಮಿಕ ಧ್ವಜ

ನವದೆಹಲಿ: ಗಣರಾಜ್ಯೋತ್ಸವದ ದಿನದಂದು ರೈತರ ಪ್ರತಿಭಟನೆಯ ವೇಳೆ ಕೆಂಪು ಕೋಟೆ ಮೇಲೆ ಧಾರ್ಮಿಕ ಬಾವುಟ ಹಾರಿಸಿದ್ದ ಆರೋಪಿಗೆ ಜು.20 ವರೆಗೂ ಬಂಧನದಿಂದ ವಿನಾಯಿತಿ ನೀಡಲಾಗಿದೆ. 

ದೆಹಲಿ ಕೋರ್ಟ್ ನ ಹೆಚ್ಚುವರಿ ಸೆಷನ್ಸ್ ನ ನ್ಯಾಯಾಧೀಶರಾದ ನಲೋಫಿರ್ ಅಬಿದಾ ಪಿರ್ವೀನ್ ಈ ಆದೇಶ ನೀಡಿದ್ದು, ಆರೋಪಿಗೆ ತನಿಖೆ ಎದುರಿಸುವಂತೆ ಸೂಚಿಸಿದ್ದಾರೆ. 

ಜುಲೈ 8, ಜುಲೈ 11, ಜುಲೈ 15 ರಂದು ಆರೋಪಿಯನ್ನು ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ದೆಹಲಿಯ ಜುಗರಾಜ್ ಸಿಂಗ್ ದೆಹಲಿಯ ತೀಸ್ ಹಜಾರಿ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. 

"ಕೆಂಪು ಕೋಟೆ ರಾಷ್ಟ್ರೀಯ ಹೆರಿಟೇಜ್ ಆಗಿದ್ದು, ನಿಶಾನ್ ಸಾಹಿಬ್ ನ್ನು ಆರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವದ ದಿನದಂದು ಕೆಂಪು ಕೋಟೆಯಲ್ಲಿ ದೇಶಕ್ಕೆ ಅವಮಾನ ಮಾಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com