ಗಣರಾಜ್ಯೋತ್ಸವ ದಿನದ ಹಿಂಸಾಚಾರ: ಬಂಧಿತನ ಪೊಲೀಸ್ ಕಸ್ಟಡಿ ಮುಂದುವರಿಕೆ, ಆರ್ಥಿಕ ನೆರವಿನ ಮೂಲದ ತನಿಖೆ

ಗಣರಾಜ್ಯೋತ್ಸವ ದಿನದ ಹಿಂಸಾಚಾರದ ಪ್ರಕರಣದಲ್ಲಿ ಬಂಧಿತನ ಪೊಲೀಸ್ ಕಸ್ಟಡಿ ಮುಂದುವರಿಕೆಗೆ ದೆಹಲಿ ಕೋರ್ಟ್ ಆದೇಶ ನೀಡಿದೆ. 
ಗಣರಾಜ್ಯೋತ್ಸವ ದಿನಾಚರಣೆ ದಿನದಂದು ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಗಣರಾಜ್ಯೋತ್ಸವ ದಿನಾಚರಣೆ ದಿನದಂದು ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ

ನವದೆಹಲಿ: ಗಣರಾಜ್ಯೋತ್ಸವ ದಿನದ ಹಿಂಸಾಚಾರದ ಪ್ರಕರಣದಲ್ಲಿ ಬಂಧಿತನ ಪೊಲೀಸ್ ಕಸ್ಟಡಿ ಮುಂದುವರಿಕೆಗೆ ದೆಹಲಿ ಕೋರ್ಟ್ ಆದೇಶ ನೀಡಿದೆ. ಕೆಂಪು ಕೋಟೆಯಲ್ಲಿ ಪ್ರತಿಭಟನೆಯನ್ನು ಭಾಗಿಯಾಗಿದ್ದ 26 ವರ್ಷದ ಬೂಟಾ ಸಿಂಗ್ ಪೊಲೀಸ್ ಕಸ್ಟಡಿ ಮುಂದುವರೆಯಲ್ಪಿದ್ದು, ಹಿಂಸಾಚಾರ, ಪ್ರತಿಭಟನೆಗೆ ಆರ್ಥಿಕ ನೆರವಿನ ಮೂಲದ ತನಿಖೆ ನಡೆಸಲಿದ್ದಾರೆ. 

ಆರೋಪಿ ಬೂಟಾ ಸಿಂಗ್ ರೈತರ ಪ್ರತಿಭಟನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ. ಆತನನ್ನು ಪಂಜಾಬ್ ನ ಟಾರ್ನ್ ತರನ್ ಪ್ರದೇಶದಿಂದ ಬಂಧಿಸಲಾಗಿತ್ತು. ಸತತ 5 ತಿಂಗಳ ಕಾಲ ಆತ ತಲೆಮರೆಸಿಕೊಂಡಿದ್ದ ಬೂಟಾ ಸಿಂಗ್ ತಲೆಗೆ 50,000 ರೂಪಾಯಿ ಬಹುಮಾನವಿತ್ತು.

ಮ್ಯಾಜಿಸ್ಟ್ರೇಟ್ ಶಿವ್ಲಿ ತಲ್ವಾರ್ ಗೆ ಪೊಲೀಸರು ಆರೋಪಿಯ ಕುರಿತು ಮಾಹಿತಿ ನೀಡಿದ್ದು, ಆರೋಪಿಯನ್ನು ವಿಚಾರಣೆಗಾಗಿ ಟಾರ್ನ್ ತರನ್ ಗೆ ಕರೆದೊಯ್ಯುವುದಾಗಿ ಮಾಹಿತಿ ನೀಡಿದ್ದಾರೆ. 

ಆತನ ಊರಿನಲ್ಲಿ ಆತನ ವಿಚಾರಣೆಯಿಂದ ಪಿತೂರಿಗೆ ಆರ್ಥಿಕ ನೆರವಿನ ಮೂಲ, ಬ್ಯಾಂಕ್ ಖಾತೆಗಳ ವಿವರ, ಸಾಮಾಜಿಕ ಜಾಲತಾಣ ಖಾತೆಯ ಮಾಹಿತಿಗಳನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com