ಟ್ವಿಟರ್ ನಲ್ಲಿ ತಾಂತ್ರಿಕ ದೋಷ: ಲಾಗಿನ್ ಸಮಸ್ಯೆ, ಶೀಘ್ರವೇ ಸರಿಪಡಿಸುವುದಾಗಿ ಸಂಸ್ಥೆ ಹೇಳಿಕೆ

ದೇಶಾದ್ಯಂತ ಟ್ವಿಟರ್ ನಲ್ಲಿ ತಾಂತ್ರಿಕ ದೋಷ ಎದುರಾಗಿದ್ದು, ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ.
ಟ್ವಿಟರ್
ಟ್ವಿಟರ್

ನವದೆಹಲಿ: ದೇಶಾದ್ಯಂತ ಟ್ವಿಟರ್ ನಲ್ಲಿ ತಾಂತ್ರಿಕ ದೋಷ ಎದುರಾಗಿದ್ದು, ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ.

ಹೌದು..ಗುರುವಾರ ಬೆಳಿಗ್ಗೆ ಹಲವು ಬಳಕೆದಾರರು ಟ್ವಿಟರ್ ವೆಬ್ ಸೈಟ್ ಪ್ರವೇಶಿಸುವ ಸಮಸ್ಯೆಗಳನ್ನು ವರದಿ ಮಾಡಿದ್ದು, ಮೊಬೈಲ್ ಅಪ್ಲಿಕೇಶನ್ ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ, ಬಳಕೆದಾರರು ವೆಬ್ ಸೈಟ್ ಪ್ರವೇಶಿಸುವಾಗ ಸಮಸ್ಯೆಗಳನ್ನು ಎದುರಿಸಿದರು. ಬಳಕೆದಾರರು ಪ್ರತಿ ಬಾರಿ ಟ್ವಿಟರ್ ವೆಬ್ ಸೈಟ್  ಅನ್ನು ಪ್ರವೇಶಿಸಲು ಪ್ರಯತ್ನಿಸಿದಾಗ, ಪರದೆಯ ಮೇಲೆ 'ಸಮ್ ಥಿಂಗ್ ಎರರ್ ' ಸಂದೇಶ ಬರುತ್ತಿತ್ತು ಎಂದು ವರದಿ ಮಾಡಿದ್ದಾರೆ.

ಈ ಕುರಿತಂತೆ ತಾಂತ್ರಿಕ ದೋಷ ಒಪ್ಪಿಕೊಂಡಿರುವ ಟ್ವಿಟರ್, ಸಮಸ್ಯೆಯನ್ನು ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ದೋಷ ಸರಿಪಡಿಸಲಾಗುತ್ತದೆ ಎಂದು ಟ್ವೀಟ್ ಮಾಡಿದೆ. ಟ್ವಿಟರ್ ತನ್ನ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಿದ್ದು, 'ಪ್ರೊಫೈಲ್ ಗಳ ಟ್ವೀಟ್ ಗಳು ವೆಬ್ ನಲ್ಲಿ ನಿಮ್ಮಲ್ಲಿ ಕೆಲವರಿಗೆ ಲೋಡ್ ಆಗಿರಲಿಕ್ಕಿಲ್ಲ ಮತ್ತು  ನಾವು ಪ್ರಸ್ತುತ ಫಿಕ್ಸ್ ಮಾಡುತ್ತಿದ್ದೇವೆ. ನಮ್ಮೊಂದಿಗೆ ಇರುವುದಕ್ಕೆ ಧನ್ಯವಾದಗಳು!.' ಎಂದು ಬರೆದಿದ್ದಾರೆ.

ಡೌನ್ ಡಿಟೆಕ್ಟರ್ ವರದಿಯು 80 ಪ್ರತಿಶತ ಬಳಕೆದಾರರು ವಿಶೇಷವಾಗಿ ಬೆಳಿಗ್ಗೆ 8 ಗಂಟೆಯ ಸಮಯದಲ್ಲಿ ವೆಬ್ ಸೈಟ್ ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದೆ, ಆದರೆ 16 ಪ್ರತಿಶತ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಕೆದಾರರು ಅಪ್ಲಿಕೇಶನ್ ಅನ್ನು ಲೋಡ್ ಮಾಡಲು ಸಾಧ್ಯವಾಗಲಿಲ್ಲ ಮತ್ತು 8 ಪ್ರತಿಶತ ಐಒಎಸ್  ಬಳಕೆದಾರರು ಅಪ್ಲಿಕೇಶನ್ ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com