ಬಿಹಾರ: ಅಧಿಕಾರಿಗಳ 'ನಿರಂಕುಶ ಆಡಳಿತ'ದಿಂದ ಬೇಸತ್ತು ರಾಜಿನಾಮೆ ನೀಡಲು ಮುಂದಾದ ಸಚಿವ!

ಅಧಿಕಾರಿಗಳ ಕಾರ್ಯದಿಂದ ಬೇಸತ್ತ ಬಿಹಾರದ ಸಮಾಜ ಕಲ್ಯಾಣ ಸಚಿವ ಮದನ್ ಸಾಹ್ನಿ ತಮ್ಮ ಖಾತೆಗೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ಮದನ್ ಸಾಹ್ನಿ
ಮದನ್ ಸಾಹ್ನಿ

ಪಾಟ್ನಾ: ಅಧಿಕಾರಿಗಳ ಕಾರ್ಯದಿಂದ ಬೇಸತ್ತ ಬಿಹಾರದ ಸಮಾಜ ಕಲ್ಯಾಣ ಸಚಿವ ಮದನ್ ಸಾಹ್ನಿ ತಮ್ಮ ಖಾತೆಗೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.

ಅಧಿಕಾರಿಗಳ ಕಾರ್ಯದಿಂದ ಬೇಸತ್ತಿದ್ದೇನೆ, ತಮ್ಮ ಖಾತೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತುಲ್ ಪ್ರಸಾದ್,  ಜನರ ಕಲ್ಯಾಣಕ್ಕಾಗಿ ನಾನು ಏನನ್ನೂ ಮಾಡಲು ಸಾಧ್ಯವಾಗದಿದ್ದಾಗ ವ್ಯವಸ್ಥೆಯಲ್ಲಿ ಮಂತ್ರಿಯಾಗಿರುವುದರ ಪ್ರಯೋಜನವೇನು? ನನ್ನಿಂದ ಸಹಿಸಲು ಸಾಧ್ಯವಿಲ್ಲ, ಹೀಗಾಗಿ ಶೀಘ್ರವೇ ರಾಜಿನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಅತುಲ್ ಪ್ರಸಾದ್ ಅವರನ್ನು ಅಸಂಬದ್ಧ ಅಧಿಕಾರಿ ಎಂದು ಪರಿಗಣಿಸಲಾಗಿದೆ. ಆದರೆ, ಇಲಾಖೆಯಲ್ಲಿ ಯಾರೂ ತಮ್ಮಮಾತನ್ನು ಕೇಳುತ್ತಿಲ್ಲ ಎಂದು ಸಚಿವರು ಹೇಳಿದರು. ಎಲ್ಲಾ ನಿಯಮಗಳನ್ನು ಮತ್ತು ಕಾನೂನುಗಳನ್ನು ಗಾಳಿಗೆ ತೂರಲಾಗುತ್ತಿದೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವು ಅಧಿಕಾರಿಗಳು ಬಹಳ ವರ್ಷಗಳಿಂದಿದ್ದು ಇವರು ನಿರಂಕುಶ ಅಧಿಕಾರಿಗಳ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅವರನ್ನು ವರ್ಗಾವಣೆ ಮಾಡುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನು ನಾನು ಕೇಳಿದಾಗ, ಅವರು ನನ್ನ ಮಾತು ಕೇಳಲು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಮಸ್ಯೆ ಕೇವಲ ನನ್ನ ಇಲಾಖೆಯಲ್ಲಿ ಮಾತ್ರ ಇಲ್ಲ, ಬೇರೆ ಬೇರೆ ಇಲಾಖೆಯ ಸಚಿವರುಗಳು ಕೂಡ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ವಿಸ್ತಾರವಾದ ಬಂಗಲೆಯಲ್ಲಿ ವಾಸಿಸಲು ಮತ್ತು  ಕಾರವಾನ್‌ನಲ್ಲಿ  ಪ್ರಯಾಣಿಸಲು ಮಂತ್ರಿಯಾಗಲಿಲ್ಲ. ಜನರ ಸೇವೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ನಾನು ಜನರಿಗೆ ಏನನ್ನೂ ಮಾಡಲು ಸಾಧ್ಯವಾಗದಿದ್ದರೆ, ಮಂತ್ರಿಯಾಗಿ ಉಳಿಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ನಾನು ಹಿಂದುಳಿದ ವರ್ಗಕ್ಕೆ ಸೇರಿದವನಾಗಿದ್ದರಿಂದ ನನಗೆ ಕಿರುಕುಳ ನೀಡಲಾಗುತ್ತಿದೆ, ನನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಯಾರು ಕೇಳುತ್ತಿಲ್ಲ, ಹೀಗಾಗಿ ರಾಜಿನಾಮೆ ನೀಡಲು ಬಯಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com