ಅಸ್ಸಾಂನಲ್ಲಿ ಬಿಜೆಪಿ 2.0: 54 ದಿನದಲ್ಲಿ ಎನ್‌ಕೌಂಟರ್‌ನಲ್ಲಿ 11 ಮಂದಿ ಸಾವು, 'ಪಲಾಯನ' ಯತ್ನ 6 ಮಂದಿಗೆ ಗುಂಡು

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಸ್ಸಾಂನಲ್ಲಿ ಆರಂಭವಾಗಿ 54 ದಿನಗಳು ಕಳೆದಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದ ಕನಿಷ್ಠ ಆರು ಜನರು 'ಪಲಾಯನ'ಕ್ಕೆ ಯತ್ನಿಸಿದ್ದು ಈ ವೇಳೆ ಗುಂಡು ಹಾರಿಸಲಾಗಿದೆ.
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ

ಗುವಾಹಟಿ: ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಸ್ಸಾಂನಲ್ಲಿ ಆರಂಭವಾಗಿ 54 ದಿನಗಳು ಕಳೆದಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದ ಕನಿಷ್ಠ ಆರು ಜನರು 'ಪಲಾಯನ'ಕ್ಕೆ ಯತ್ನಿಸಿದ್ದು ಈ ವೇಳೆ ಗುಂಡು ಹಾರಿಸಲಾಗಿದೆ.

ಗಾಯಗೊಂಡವರು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಕೆಲವರು ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಜಾನುವಾರು ಕಳ್ಳಸಾಗಾಣಿಕೆದಾರರು, ಕಳ್ಳತನ ಮತ್ತು ಡ್ರಗ್ ಪೆಡ್ಲರ್ಗಳಿದ್ದಾರೆ. 

ಇನ್ನು ಈ ಅವಧಿಯಲ್ಲಿ ಪೊಲೀಸರು ಒಂಬತ್ತು ಉಗ್ರರು ಸೇರಿದಂತೆ 11 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ಕೊಕ್ರಜಾರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಪೊಲೀಸರು ಗೋ ಕಳ್ಳಸಾಗಣಿಕೆದಾರನ ಮೇಲೆ ಗುಂಡು ಹಾರಿಸಿದ್ದಾರೆ. ಆತ ಪೊಲೀಸ್ ಅಧಿಕಾರಿಯ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದಾಗ ಗುಂಡು ಹಾರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಥೂಬ್ ಪ್ರತೀಕ್ ವಿಜಯಕುಮಾರ್ ತಿಳಿಸಿದ್ದಾರೆ.

ಅಸ್ಸಾಂನ ವಿಶೇಷ ಪೊಲೀಸ್ ಮಹಾನಿರ್ದೇಶಕ ಜಿ.ಪಿ ಸಿಂಗ್ ಆರೋಪಿಗಳು ಪರಾರಿಯಾಗುವ ವಿಫಲ ಪ್ರಯತ್ನಗಳನ್ನು ಟ್ವಿಟ್ಟರ್ ನಲ್ಲಿ ವಿವರಿಸಿದ್ದರು.

ಜುಲೈ 2ರಂದು ಮೊರಿಗಾಂವ್ ಜಿಲ್ಲೆಯ ಭುರಗಾಂವ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಒಬ್ಬ ಸೈಯದ್ ಅಲಿ(62) ಶೌಚ ಮಾಡುವುದಾಗಿ ಹೇಳಿ ಓಡಿ ಹೋಗುವಾಗ ಪೊಲೀಸರ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com