ಯೋಗಿಯನ್ನು ಅಭಿನಂದಿಸಿದ ಸೈನಾ ನೆಹ್ವಾಲ್; 'ಸರ್ಕಾರಿ ಶಟ್ಲರ್' ಎಂದ ಆರ್ ಜೆಡಿ ಮುಖ್ಯಸ್ಥ ಟೀಕೆ
ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಸರ್ಕಾರಿ ಶಟ್ಲರ್ ಎಂದು ಆರ್ ಜೆಡಿ ಅಧ್ಯಕ್ಷ ಜಯಂತ್ ಚೌದರಿ ಕರೆದಿದ್ದಾರೆ.
Published: 04th July 2021 02:56 PM | Last Updated: 05th July 2021 01:50 PM | A+A A-

ಸೈನಾ ನೆಹ್ವಾಲ್
ಲಖನೌ: ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಸರ್ಕಾರಿ ಶಟ್ಲರ್ ಎಂದು ಆರ್ ಜೆಡಿ ಅಧ್ಯಕ್ಷ ಜಯಂತ್ ಚೌದರಿ ಕರೆದಿದ್ದಾರೆ.
ಶನಿವಾರ ರಾತ್ರಿ ಟ್ವಿಟ್ ಮಾಡಿದ್ದ ಸೈನಾ ನೆಹ್ವಾಲ್, ಉತ್ತರ ಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ಯೋಗಿ ಆದಿತ್ಯನಾಥ್ ಸರ್ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುವುದಾಗಿ ಬರೆದುಕೊಂಡಿದ್ದರು.
Hearty congratulations for thumping victory in Zila Panchayat Chairperson election in UP @myogiadityanath sir #ZilaPanchayatElectionUP2021
— Saina Nehwal (@NSaina) July 3, 2021
ಸೈನಾ ನೆಹ್ವಾಲ್ ಮಾಡಿದ ಒಂದೂವರೆ ಗಂಟೆಗಳ ನಂತರ ಟ್ವಿಟ್ ಮಾಡಿದ್ದ ರಾಷ್ಟ್ರೀಯ ಲೋಕ ದಳ ಅಧ್ಯಕ್ಷ ಚೌದರಿ, ಜನರ ತೀರ್ಪನ್ನು ವಿಭಜಿಸುವ ಬಿಜೆಪಿ ಕೌಶಲ್ಯವನ್ನು ಸರ್ಕಾರಿ ಶಟ್ಲರ್ ಗುರುತಿಸಿದ್ದಾರೆ ಎಂದಿದ್ದರು.
ಆಡಳಿತಾರೂಢ ಪಕ್ಷ ಮತಗಳನ್ನು ಕದಿದ್ದು, ಪೊಲೀಸರನ್ನು ಬಳಸಿ ಮತದಾನವನ್ನು ನಿಲ್ಲಿಸಿದೆ ಎಂದು ಎಸ್ ಪಿ ಆರೋಪದ ನಡುವೆಯೂ ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಾಗಿ ಬಿಜೆಪಿ ಶನಿವಾರ ಹೇಳಿಕೆ ನೀಡಿತ್ತು.