ಕೋವಿಡ್-19: ಕರ್ನಾಟಕ, ಕೇರಳ ಪ್ರವಾಸಿಗರು ತಮಿಳುನಾಡಿನ ನೀಲಗಿರಿ ಜಿಲ್ಲೆ ಪ್ರವೇಶಿಸಲು ಇ-ಪಾಸ್ ಕಡ್ಡಾಯ!
ಕೇರಳ ಮತ್ತು ಕರ್ನಾಟಕದಿಂದ ಬರುವ ಪ್ರವಾಸಿಗರು ಮತ್ತು ಸಾರ್ವಜನಿಕರು ತಮಿಳುನಾಡಿನ ನೀಲಗಿರಿ ಜಿಲ್ಲೆಗೆ ಪ್ರವೇಶಿಸಲು ಇ-ಪಾಸ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಜೆ ಇನ್ನೊಸೆಂಟ್ ದಿವ್ಯಾ ಸೋಮವಾರ ಹೇಳಿದರು.
Published: 05th July 2021 05:26 PM | Last Updated: 05th July 2021 05:45 PM | A+A A-

ನೀಲಗಿರಿ ಜಿಲ್ಲೆ
ಉದಕಮಂಡಲಂ: ಕೇರಳ ಮತ್ತು ಕರ್ನಾಟಕದಿಂದ ಬರುವ ಪ್ರವಾಸಿಗರು ಮತ್ತು ಸಾರ್ವಜನಿಕರು ತಮಿಳುನಾಡಿನ ನೀಲಗಿರಿ ಜಿಲ್ಲೆಗೆ ಪ್ರವೇಶಿಸಲು ಇ-ಪಾಸ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಜೆ ಇನ್ನೊಸೆಂಟ್ ದಿವ್ಯಾ ಸೋಮವಾರ ಹೇಳಿದರು.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಕೋವಿಡ್-19 ಸಾಂಕ್ರಾಮಿಕದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದ ನಂತರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಸ್ಥಳಗಳನ್ನು ತೆರೆಯುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜೆ ಇನ್ನೊಸೆಂಟ್ ದಿವ್ಯಾ ಮಾಹಿತಿ ನೀಡಿದರು.
65 ಲಕ್ಷ ರೂ.ಗಳ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಸ್ಮಾರಕ ಹೆರಿಗೆ ಆಸ್ಪತ್ರೆಯ ಉದ್ಘಾಟನೆ ವೇಳೆ ಅವರು ಮಾತನಾಡಿದ್ದು, ಕೋವಿಡ್-19 ನಿರ್ಬಂಧಗಳಲ್ಲಿ ವಿನಾಯಿತಿ ಘೋಷಿಸುವುದರಿಂದ 11 ನಿರ್ದಿಷ್ಟ ಜಿಲ್ಲೆಗಳಲ್ಲಿ ಪ್ರಯಾಣದಂತಹ ಉದ್ದೇಶಗಳಿಗಾಗಿ ಇ-ಪಾಸ್ ಕಡ್ಡಾಯ ನಿರ್ಣಯವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಹೇಳಿದರು.