ಲಸಿಕೆಗೂ ಜಗ್ಗಲ್ಲ ಈ ಡೆಲ್ಟಾ ಕೊರೋನಾ ರೂಪಾಂತರಿ!: ಈ ಬಗ್ಗೆ ನಡೆದಿರುವ ಅಧ್ಯಯನದ ವಿವರ ಹೀಗಿದೆ...

ಕೊರೋನಾ ವೈರಸ್ ನ ಡೆಲ್ಟಾ ರೂಪಾಂತರಿಯ ಬಗ್ಗೆ ಆತಂಕಕಾರಿ ಅಧ್ಯಯನ ವರದಿಯೊಂದು ಪ್ರಕಟಗೊಂಡಿದೆ.
ಮಹಿಳೆಯೊಬ್ಬರಿಗೆ ಲಸಿಕೆ ನೀಡುತ್ತಿರುವುದು
ಮಹಿಳೆಯೊಬ್ಬರಿಗೆ ಲಸಿಕೆ ನೀಡುತ್ತಿರುವುದು

ನವದೆಹಲಿ: ಕೊರೋನಾ ವೈರಸ್ ನ ಡೆಲ್ಟಾ ರೂಪಾಂತರಿಯ ಬಗ್ಗೆ ಆತಂಕಕಾರಿ ಅಧ್ಯಯನ ವರದಿಯೊಂದು ಪ್ರಕಟಗೊಂಡಿದೆ.

ಕೊರೋನಾದ ಬೇರೆ ರೂಪಾಂತರಿಗಳಿಗೆ ಹೋಲಿಕೆ ಮಾಡಿದಲ್ಲಿ ಡೆಲ್ಟಾ ರೂಪಾಂತರಿ ಲಸಿಕೆಗಳಿಗೂ ಜಗ್ಗುವುದಿಲ್ಲ, ಪ್ರತಿಕಾಯಗಳಿಗೆ 8 ಪಟ್ಟು ಕಡಿಮೆ ಸೂಕ್ಷ್ಮವಾಗಿವೆ ಎಂದು ಭಾರತದಲ್ಲಿ ಗಂಗಾ ರಾಮ್ ಆಸ್ಪತ್ರೆಯೂ ಸೇರಿ 3 ಕೇಂದ್ರಗಳಲ್ಲಿ 100 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ ಅಧ್ಯಯನದಿಂದ ಈ ಮಾಹಿತಿ ಬಹಿರಂಗಗೊಂಡಿದೆ. 

B.1.617.2 ಡೆಲ್ಟಾ ರೂಪಾಂತರಿ ಲಸಿಕೆ ನಂತರದ ಸೋಂಕುಗಳನ್ನು ಮಾತ್ರವೇ ಪ್ರಾಬಲ್ಯ ಸಾಧಿಸುತ್ತದೆಯಷ್ಟೇ ಅಲ್ಲದೇ ಪೂರ್ಣವಾಗಿ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರಲ್ಲಿ ವೇಗವಾಗಿಯೂ ಹರಡುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ. 

"Sars-Cov-2 B.1.617.2 Delta Variant Emergence and Vaccine Breakthrough: Collaborative Study ಯನ್ನು ಭಾರತ ಹಾಗೂ ಕೇಂಬ್ರಿಡ್ಜ್ ನ ಚಿಕಿತ್ಸಕ ರೋಗನಿರೋಧಕ ಶಕ್ತಿ ಮತ್ತು ಸಾಂಕ್ರಾಮಿಕ ರೋಗದ ಸಂಸ್ಥೆ ನಡೆಸಿದೆ. 

ಡೆಲ್ಟಾ ಹಾಗೂ ವಿಟ್ರೊ ರೂಪಾಂತರಿಗಳು ವುಹಾನ್-1 ಗೆ ಹೋಲಿಕೆ ಮಾಡಿದರೆ ಪ್ರತಿಕಾಯಗಳಿಗೆ 8 ಪಟ್ಟು ಕಡಿಮೆ ಸೂಕ್ಷ್ಮವಾಗಿವೆ ಮೆಂದು ಎಸ್ ಜಿಆರ್ ಹೆಚ್ ನ ಕ್ಲಿನಿಕಲ್ ಮೈಕ್ರೋಬಯಾಲಜಿ ಹಾಗೂ ಇಮ್ಯುನಾಲಜಿ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ ವಟ್ಟಲ್ ತಿಳಿಸಿದ್ದಾರೆ

"ನಾವು ಸುರಕ್ಷತಾ ಕ್ರಮಗಳನ್ನು ಕಡಿಮೆ ಮಾಡುತ್ತಾ, ವೈರಾಣುವಿಗೆ ಹೆಚ್ಚು ತುತ್ತಾಗುತ್ತಾ ಹೋದಲ್ಲಿ ಅದಕ್ಕೆ ಹೆಚ್ಚಾಗುತ್ತಾ ಹೋಗುವುದಕ್ಕೆ ಅವಕಾಶ ನೀಡಿದರೆ ರೂಪಾಂತರಗಳು ಆಗುತ್ತಲೇ ಇರುತ್ತವೆ ಎಂದು  ಡಾ. ಚಂದ್ ವಟ್ಟಲ್ ಎಚ್ಚರಿಸಿದ್ದಾರೆ.

ಲಸಿಕೆ ಪಡೆದವರು ಸುರಕ್ಷತಾ ಕ್ರಮಗಳಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ ಎಂಬುದಕ್ಕೆ ಇದೇ ಅತ್ಯುತ್ತಮ ಉದಾಹರಣೆ ಎಂದು ಡಾ. ಚಂದ್ ವಟ್ಟಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com