ಮೇಕೆದಾಟು ಅಣೆಕಟ್ಟು ಯೋಜನೆ ಕೈಬಿಡಿ: ಯಡಿಯೂರಪ್ಪಗೆ ಸ್ಟಾಲಿನ್ ಪತ್ರ

ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಆರಂಭಿಸಲಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್  ಮನವಿ ಮಾಡಿದ್ದಾರೆ. 
ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಸ್ಟಾಲಿನ್
ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಸ್ಟಾಲಿನ್

ಚೆನ್ನೈ: ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಆರಂಭಿಸಲಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್  ಮನವಿ ಮಾಡಿದ್ದಾರೆ. 

ಈ ಸಂಬಂಧ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, ಈ ಯೋಜನೆಯಿಂದ ಉಭಯ ರಾಜ್ಯಗಳ ಸಂಬಂಧ ಹಾಗೂ ಸೌಹಾರ್ದತೆ ಹಾಳಾಗಲಿದೆ ಎಂದಿದ್ದಾರೆ. ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಈಗಾಗಲೇ ಕುಡಿಯಲು ಸಾಕಷ್ಟು ಮೂಲಸೌಕರ್ಯಗಳನ್ನು ಹೊಂದಿದೆ.  ಕೇವಲ  4.75 ಟಿಎಂಸಿಯನ್ನು ಕುಡಿಯುವ ನೀರಿಗಾಗಿ 67.16 ಟಿಎಂಸಿ ನೀರಿನ ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ಜಲಾಯಶ ನಿರ್ಮಿಸಲು ಮುಂದಾಗಿರುವುದು ಸ್ವೀಕಾರರ್ಹವಲ್ಲ ಎಂದಿದ್ದಾರೆ.

ಇದರಿಂದ ತಮಿಳುನಾಡಿಗೆ ನೀರು ಪೂರೈಕೆಯ ಕೊರತೆ ಎದುರಾಗಲಿದೆ. ಈಗ ತಮಿಳುನಾಡಿನ ನೀರಿನ ಪಾಲನ್ನು ನ್ಯಾಯಾಲಯ ನಿಗದಿಪಡಿಸಿದೆ. ಆದರೆ, ಈ ನೀರಿನ ಸಮರ್ಥ ಬಳಕೆಯಾದಲ್ಲಿ ಮಾತ್ರ ಅದು ಉಪಯೋಗಕಾರಿಯಾಗಲಿದೆ.  ಆದರೆ ದುರದೃಷ್ಟವಶಾತ್, ಕಾವೇರಿ ನದಿ ನೀರಿನ ವಿವಾದ ಬಹುಕಾಲ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಅದರ ತಟದಲ್ಲಿನ ನೀರಾವರಿ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ನೀರಿನ ಬಳಕೆಯ ದಕ್ಷತೆ ಹೆಚ್ಚಿಸಲು ಆಧುನೀಕರಣ ಮತ್ತು ಸುಧಾರಣೆಗಳು ಬೇಕಾಗುತ್ತವೆ. ನ್ಯಾಯಾಲಯದ ಆದೇಶದ ಪ್ರಕಾರ ಪೂರೈಕೆಯಾಗುವ ನೀರಿನಲ್ಲಿ, ನೀರಿನ ಬೇಡಿಕೆಯನ್ನು ಪೂರೈಸಲು ಎಂದು ಸ್ಟಾಲಿನ್ ವಿವರಿಸಿದ್ದಾರೆ. ಈ ಸಂಗತಿಗಳನ್ನು ಮತ್ತು ಸೂಕ್ಷ್ಮತೆಯನ್ನು ಪರಿಗಣಿಸಿ. ಮೇಕೆದಾಟು ಯೋಜನೆಯನ್ನು ಕೈಬಿಡುವಂತೆ ಅವರು ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com