ಚುನಾವಣೆಗೂ ಮುನ್ನ ಜಮ್ಮು-ಕಾಶ್ಮೀರ ರಾಜ್ಯ ಸ್ಥಾನಮಾನ ಪುನಃ ಸ್ಥಾಪಿಸಿ: ಗುಪ್ಕಾರ್ ನಾಯಕರ ಆಗ್ರಹ

ಚುನಾವಣೆಗೂ ಮುನ್ನ ಜಮ್ಮು-ಕಾಶ್ಮೀರ ರಾಜ್ಯ ಸ್ಥಾನಮಾನ ಪುನಃ ಸ್ಥಾಪನೆ ಮಾಡುವಂತೆ ಗುಪ್ಕಾರ್ ನಾಯಕರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. 
ಗುಪ್ಕಾರ್ ಮೈತ್ರಿಕೂಟದ ನಾಯಕರು (ಸಂಗ್ರಹ ಚಿತ್ರ)
ಗುಪ್ಕಾರ್ ಮೈತ್ರಿಕೂಟದ ನಾಯಕರು (ಸಂಗ್ರಹ ಚಿತ್ರ)

ಶ್ರೀನಗರ: ಚುನಾವಣೆಗೂ ಮುನ್ನ ಜಮ್ಮು-ಕಾಶ್ಮೀರ ರಾಜ್ಯ ಸ್ಥಾನಮಾನ ಪುನಃ ಸ್ಥಾಪನೆ ಮಾಡುವಂತೆ ಗುಪ್ಕಾರ್ ನಾಯಕರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ ನಲ್ಲಿ ಭರವಸೆ ನೀಡಿದ್ದಂತೆಯೇ ರಾಜ್ಯ ಸ್ಥಾನಮಾನವನ್ನು ಪುನಃ ಸ್ಥಾಪನೆ ಮಾಡಬೇಕೆಂದು ಗುಪ್ಕಾರ್ ನಾಯಕರು ಒತ್ತಾಯಿಸಿದ್ದಾರೆ.

ಇತ್ತೀಚೆಗಷ್ಟೇ ನಡೆದ ಜಮ್ಮು-ಕಾಶ್ಮೀರ ರಾಜಕೀಯ ನಾಯಕರೊಂದಿಗಿನ ಪ್ರಧಾನಿ ಮೋದಿ ನೇತೃತ್ವದ ಸಭೆಯ ಬಗ್ಗೆಯೂ ಗುಪ್ಕಾರ್ ನಾಯಕರು ಪ್ರತಿಕ್ರಿಯೆ ನೀಡಿದ್ದು, ಸಭೆಯ ಫಲಿತಾಂಶದ ಬಗ್ಗೆಯೂ ಅಸಮಾಧಾನ ಉಂಟಾಗಿದೆ.

"ರಾಜ್ಯ ಸ್ಥಾನಮಾನ ಪುನಃ ಸ್ಥಾಪನೆ ಮಾಡುವುದುಬಿಜೆಪಿ ಸಂಸತ್ ನಲ್ಲಿ ನೀಡಿರುವ ಭರವಸೆಯಾಗಿದೆ. ಇದನ್ನು ಕೇಂದ್ರ ಸರ್ಕಾರ ಪೂರ್ಣಗೊಳಿಸಬೇಕು" ಎಂದು ಜಮ್ಮು-ಕಾಶ್ಮೀರದ ಕಮ್ಯುನಿಸ್ಟ್ ಪಕ್ಷದ ವಕ್ತಾರ ಹಾಗೂ ನಾಯಕ ಎಂವೈ ತಾರಿಗಮಿ ಹೇಳಿದ್ದಾರೆ.

"ರಾಜ್ಯ ಸ್ಥಾನಮಾನ ನೀಡಿದ ಬಳಿಕವಷ್ಟೇ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸಬೇಕು" ಎಂದು ತಾರಿಗಮಿ ಒತ್ತಾಯಿಸಿದ್ದಾರೆ. "ಈ ನಿಲುವಿಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡಿಸುವುದಕ್ಕೆ ಪಿಎಜಿಡಿ ನಿರ್ಧರಿಸಿದೆ" ಎಂದು ತಾರಿಗಮಿ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com