ಅಮೀರ್-ಕಿರಣ್ ಜೋಡಿಯಂತೆ ಶಿವಸೇನೆ-ಬಿಜೆಪಿ ಮೈತ್ರಿ ಅಖಂಡವಾದುದು: ಸಂಜಯ್ ರಾವುತ್

"ನಾವು ಶತ್ರುಗಳಲ್ಲ, ನಾವು ಭಾರತ-ಪಾಕಿಸ್ತಾನದಂತಲ್ಲ ಬದಲಿಗೆ ನಾವು ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರಂತೆ ಮಾರ್ಗಗಳು ವಿಭಿನ್ನವಾಗಿದ್ದರೂ ಸ್ನೇಹ ಸದಾಕಾಲಕ್ಕೆ ಉಳಿಯುತ್ತದೆ" ಬಿಜೆಪಿ-ಶಿವಸೇನೆ ಮೈತ್ರಿ ಕುರಿತಂತೆ ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಅಮೀರ್-ಕಿರಣ್ ಮತ್ತು ಸಂಜಯ್ ರಾವುತ್
ಅಮೀರ್-ಕಿರಣ್ ಮತ್ತು ಸಂಜಯ್ ರಾವುತ್

ಮುಂಬೈ: "ನಾವು ಶತ್ರುಗಳಲ್ಲ, ನಾವು ಭಾರತ-ಪಾಕಿಸ್ತಾನದಂತಲ್ಲ ಬದಲಿಗೆ ನಾವು ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರಂತೆ ಮಾರ್ಗಗಳು ವಿಭಿನ್ನವಾಗಿದ್ದರೂ ಸ್ನೇಹ ಸದಾಕಾಲಕ್ಕೆ ಉಳಿಯುತ್ತದೆ" ಬಿಜೆಪಿ-ಶಿವಸೇನೆ ಮೈತ್ರಿ ಕುರಿತಂತೆ ಶಿವಸೇನೆ ನಾಯಕ ಸಂಜಯ್ ರಾವುತ್  ಹೇಳಿದ್ದಾರೆ. ಇನ್ನೊಂದೆಡೆ ಬಿಜೆಪಿಯ ದೇವೇಂದ್ರ ಫಡ್ನವೀಸ್ "ನಾವು ಶತ್ರುಗಳಲ್ಲ" ಎಂಬ ಹೇಳಿಕೆ ನೀಡೀದ್ದಾರೆ.

ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರು ಮದುವೆಯಾದ 15 ವರ್ಷಗಳ ನಂತರ ಶನಿವಾರ ತಾವು ಬೇರೆ ಆಗುತ್ತಿರುವುದಾಗಿ ಘೋಷಿಸಿದ್ದರು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭಾನುವಾರ, "ನಾವು (ಸೇನಾ ಮತ್ತು ಬಿಜೆಪಿ) ಎಂದಿಗೂ ಶತ್ರುಗಳಲ್ಲ. ಅವರು ನಮ್ಮ ಸ್ನೇಹಿತರು ಮತ್ತು ಅವರು ವಿರುದ್ಧ ಇದ್ದ ಜನರೇ ಅವರೊಂದಿಗೆ ಸೇರಿ ಸರ್ಕಾರ ರಚಿಸಿದ್ದಾರೆ. ಅವರು ನಮ್ಮನ್ನು ತೊರೆದರು" ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಭೇಟಿಯ ಬಗ್ಗೆ ಮತ್ತು ಸೇನೆಯೊಂದಿಗೆ ಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆ ಫಡ್ನವೀಸ್ ಅವರನ್ನು ಪ್ರಶ್ನಿಸಿದಾಗ ಅವರು ಮೇಲಿನ ಉತ್ತರ ನೀಡಿದ್ದಾರೆ. "ರಾಜಕೀಯದಲ್ಲಿ ಯಾವುದೇ ಶಾಶ್ವತ ಮಿತ್ರತ್ವ, ಶತ್ರುತ್ವವಿಲ್ಲ. ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ" ಎಂದು ಫಡ್ನವಿಸ್ ಹೇಳಿದರು.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಕೇಂದ್ರ ಸಂಸ್ಥೆಗಳು ಕೈಗೊಂಡ ಕ್ರಮಗಳ ಮಧ್ಯೆ ಈ ಹೇಳಿಕೆ ಬಂದಿದೆ. ಕೇಂದ್ರವು ತಮ್ಮ ವಿರುದ್ಧ ಏಜೆನ್ಸಿಗಳನ್ನು ಬಳಸುತ್ತದೆ ಎಂದು ಹೆಚ್ಚಿನ ವಿರೋಧ ಪಕ್ಷಗಳು ಆರೋಪಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com