ಉತ್ತರಾಖಂಡ: ಹೊಸ ಸಿಎಂ ಪುಷ್ಕರ್ ಸಿಂಗ್ ಧಾಮಿ ಅಪೂರ್ಣ ಅಧಿಕಾರವಧಿಯ ಶಾಪವನ್ನು ಮುರಿಯುತ್ತಾರೆಯೇ?

ಉತ್ತರಾಖಂಡದಲ್ಲಿ ತಿರಥ್ ​​ಸಿಂಗ್ ರಾವತ್ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ತಮ್ಮ 115 ದಿನಗಳ ಅಧಿಕಾರಾವಧಿಯನ್ನು ಕೊನೆಗೊಳಿಸಿದ್ದು ಇದೀಗ ನೂತನ ಸಿಎಂ ಆಗಿ ಬಿಜೆಪಿಯ ಪುಷ್ಕರ್ ಸಿಂಗ್ ಧಾಮಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 
ಪುಷ್ಕರ್ ಸಿಂಗ್ ಧಾಮಿ
ಪುಷ್ಕರ್ ಸಿಂಗ್ ಧಾಮಿ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ತಿರಥ್ ​​ಸಿಂಗ್ ರಾವತ್ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ತಮ್ಮ 115 ದಿನಗಳ ಅಧಿಕಾರಾವಧಿಯನ್ನು ಕೊನೆಗೊಳಿಸಿದ್ದು ಇದೀಗ ನೂತನ ಸಿಎಂ ಆಗಿ ಬಿಜೆಪಿಯ ಪುಷ್ಕರ್ ಸಿಂಗ್ ಧಾಮಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 

ಉತ್ತರಾಖಂಡದಲ್ಲಿ ಓರ್ವ ಮುಖ್ಯಮಂತ್ರಿ ಕಾಂಗ್ರೆಸ್ ನ ಎನ್ ಡಿ ತಿವಾರಿ ಬಿಟ್ಟರೆ ಸಿಎಂ ಆದರ ಇತರ ನಾಯಕರು ಪರಿಪೂರ್ಣ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಉತ್ತರಾಖಂಡ್ ಗೆ ಇದೊಂದು ದೊಡ್ಡ ಶಾಪವಾಗಿದ್ದು ಇದನ್ನು ಕಿರಿಯ ಸಿಎಂ ಪುಷ್ಕರ್ ಸಿಂಗ್ ಧಾಮಿ ಮುರಿತಾರಾ ನೋಡಬೇಕಿದೆ. 

ಉತ್ತರಖಂಡದಲ್ಲಿ ಅರ್ಧದಲ್ಲೇ ಮುಖ್ಯಮಂತ್ರಿಯನ್ನು ಬದಲಾಯಿಸಿದ ಪಕ್ಷ ಮುಂದೆ ಅಧಿಕಾರಕ್ಕೆ ಬರುವುದಕ್ಕೆ ವಿಫಲವಾಗಿದೆ. ಈ ಶಾಪವನ್ನ ಪುಷ್ಕರ್ ಸಿಂಗ್ ಹೇಗೆ ಮುರಿಯುತ್ತಾರೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ ಎಂದು ಡೆಹ್ರಾಡೂನ್ ಮೂಲದ ರಾಜಕೀಯ ವಿಶ್ಲೇಷಕ ಯೋಗೇಶ್ ಕುಮಾರ್ ಹೇಳಿದ್ದಾರೆ. 

ರಾಜ್ಯದ ಮೊದಲ ಸಿಎಂ ನಿತ್ಯಾನಂದ ಸ್ವಾಮಿ ಅವರು 354 ದಿನಗಳ ಕಾರ್ಯನಿರ್ವಹಣೆ ನಂತರ 2001ರಲ್ಲಿ ನಿಧನರಾಗಿದ್ದರು. ಬಳಿಕ ಬಿಜೆಪಿಯ ಭಗತ್ ಸಿಂಗ್ ಕೊಶ್ಯರಿ ಅವರನ್ನು 2002ರವರೆಗೆ 122 ದಿನಗಳ ಕಾಲ ಸಿಎಂ ಆಗಿ ನೇಮಿಸಲಾಯಿತು. 2002ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಸೋತಿತ್ತು. 

ಮಾರ್ಚ್ 2002ರಲ್ಲಿ ಕಾಂಗ್ರೆಸ್ ನ ನಾರಾಯಣ್ ದತ್ ತಿವಾರಿ ಅವರು ರಾಜ್ಯದ ಸಿಎಂ ಆದರ. ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಏಕೈಕ ಸಿಎಂ ಆಗಿದ್ದು 2007ರ ಮಾರ್ಚ್ 7ರವರೆಗೆ ಸಿಎಂ ಆಗಿದ್ದರು. 

ವಿಶೇಷವೆಂದರೆ, ಬೆಟ್ಟದ ರಾಜ್ಯದ ಒಟ್ಟು 10 ಮುಖ್ಯಮಂತ್ರಿಗಳಲ್ಲಿ ಒಬ್ಬರು ಮಾತ್ರ 5 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ದಿವಂಗತ ಎನ್‌ಡಿ ತಿವಾರಿ(2002-07) ಹೊರತುಪಡಿಸಿ, ಒಬ್ಬ ಸಿಎಂ ಕೂಡ ತಮ್ಮ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ. ಧಾಮಿ ಉತ್ತರಾಖಂಡದ 11ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 

ಮಾರ್ಚ್ 2007ರಲ್ಲಿ ಬಿಜೆಪಿಯ ಭುವನ್ ಚಂದ್ರ ಖಂಡೂರಿ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡರು, ಅವರನ್ನು 2 ವರ್ಷಗಳ 111 ದಿನಗಳ ನಂತರ ಪಕ್ಷದಿಂದ ತೆಗೆದುಹಾಕಲಾಯಿತು. ನಂತರ 2 ವರ್ಷ 111 ದಿನಗಳ ನಂತರ 2011ರಲ್ಲಿ ರಮೇಶ್ ಪೋಖ್ರಿಯಲ್ ರನ್ನು ಕೆಳಗಿಳಿಸಲಾಯಿತು. 

2014ರಲ್ಲಿ ಕಾಂಗ್ರೆಸ್ ಕೇಂದ್ರ ನಾಯಕತ್ವವು ಹರೀಶ್ ರಾವತ್ ಅವರನ್ನು ಕರೆತರಲು ವಿಜಯ್ ಬಹುಗುಣವನ್ನು ತೆಗೆದುಹಾಕಲು ನಿರ್ಧರಿಸಿತು. ನಂತರ 2017ರಲ್ಲಿ ಕಾಂಗ್ರೆಸ್ ಬಿಜೆಪಿಯ ಕೈಯಿಂದ ಅವಮಾನಕರ ಸೋಲನ್ನು ಅನುಭವಿಸಿತು. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಗೆ 57 ಸ್ಥಾನಗಳು ದೊರೆತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com