ಅಂಟಿಲಿಯಾ ಬಾಂಬ್ ಬೆದರಿಕೆ: ಆರೋಪಿ ಸೋನಿ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಗೆ ಹೇಳಿಕೆ, ಕೋರ್ಟ್ ಗೆ ಎನ್ಐಎ ಮಾಹಿತಿ

ಅಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ ಹಾಗೂ ಉದ್ಯಮಿ ಮನ್ ಸುಖ್ ರಿಹಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮನೀಶ್ ಸೋನಿ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಗೆಯ ಹೇಳಿಕೆ ನೀಡಿರುವುದಾಗಿ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ತಿಳಿಸಿದೆ.
ಎನ್ಐಎ
ಎನ್ಐಎ

ಮುಂಬೈ: ಅಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ ಹಾಗೂ ಉದ್ಯಮಿ ಮನ್ ಸುಖ್ ರಿಹಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮನೀಶ್ ಸೋನಿ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಗೆಯ ಹೇಳಿಕೆ ನೀಡಿರುವುದಾಗಿ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ತಿಳಿಸಿದೆ. 

ಮ್ಯಾಜಿಸ್ಟ್ರೇಟ್ "ಅಜಾಗರೂಕತೆಯಿಂದ" ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಗೆ ರಿಮಾಂಡ್ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಸೋನಿರನ್ನು ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು.

ಆದಾಗ್ಯೂ, ಸಂಜೆ 5.30ರವರೆಗೆ ಸೋನಿ ಅವರನ್ನು ಹಾಜರುಪಡಿಸಲು ಸಾಧ್ಯವಾಗದ ಕಾರಣ, ಸಿಆರ್ಪಿಸಿಯ ಸೆಕ್ಷನ್ 164 (ತಪ್ಪೊಪ್ಪಿಗೆ ಹೇಳಿಕೆಗಳು) ಅಡಿಯಲ್ಲಿ ಹೇಳಿಕೆ ಪಡೆಯಲು ಆರೋಪಿಯನ್ನು ಎನ್ಐಎ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಹೇಳಿಕೆ ಪಡೆಯಲಾಗಿದೆ. ಅಲ್ಲದೆ ಅವರನ್ನು ತಪ್ಪಾಗಿ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ ಎಂದು ಎಂದು ಸೋನಿಯ ವಕೀಲ ರಾಹುಲ್ ಅರೋಟ್ ಹೇಳಿದ್ದಾರೆ.

'ಇದು ಕಾನೂನುಬಾಹಿರವಾಗಿದೆ, ಎನ್ಐಎ ಆತನನ್ನು ಹಾಜರುಪಡಿಸಿಲ್ಲ. ಆದ್ದರಿಂದ ಅವರ (ನ್ಯಾಯಾಂಗ) ರಿಮಾಂಡ್ ಪಡೆಯಲು ಸಾಧ್ಯವಿಲ್ಲ ಎಂದು ನಾವು ನ್ಯಾಯಾಲಯಕ್ಕೆ ತಿಳಿಸಿದ್ದೇವೆ ಎಂದು ಅವರು ಹೇಳಿದರು.

ಹಿಂದಿನ ದಿನ, ಎನ್ಐಎ ಸೋನಿ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಿಲ್ಲ. ಬದಲಿಗೆ ಹೇಳಿಕೆ ದಾಖಲಿಸುವುದಕ್ಕಾಗಿ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.

ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರೊಂದಿಗೆ ಜೂನ್ 17ರಂದು ಸೋನಿ ಮತ್ತು ಸತೀಶ್ ಮೊಥ್ಕುರಿ ಅವರನ್ನು ಬಂಧಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com