ಜಮ್ಮು-ಕಾಶ್ಮೀರದ ಡೀಲಿಮಿಟೇಷನ್ ಪ್ರಕ್ರಿಯೆಯಿಂದ ಹೊರಗುಳಿಯಲಿದ್ದೇವೆ: ಪಿಡಿಪಿ

ಗಡಿ ಮರು ವಿಂಗಡನೆ (ಡೀಲಿಮಿಟೇಷನ್‌) ಪ್ರಕ್ರಿಯೆಯಿಂದ ದೂರ ಉಳಿಯುವುದಕ್ಕೆ ಪಿಡಿಪಿ ನಿರ್ಧರಿಸಿದೆ. 
ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ
ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ

ಶ್ರೀನಗರ: ಗಡಿ ಮರು ವಿಂಗಡನೆ (ಡೀಲಿಮಿಟೇಷನ್‌) ಪ್ರಕ್ರಿಯೆಯಿಂದ ದೂರ ಉಳಿಯುವುದಕ್ಕೆ ಪಿಡಿಪಿ ನಿರ್ಧರಿಸಿದೆ. 

ಕೇಂದ್ರ ಸರ್ಕಾರ ಜನರ ಜೀವನವನ್ನು ಸುಗಮಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಡೀಲಿಮಿಟೇಷನ್ ನ ಫಲಿತಾಂಶ ಪೂರ್ವ ಯೋಜಿತವಾಗಿರಲಿದೆ ಆದ್ದರಿಂದ  ಜಮ್ಮು-ಕಾಶ್ಮೀರದ ಡೀಲಿಮಿಟೇಷನ್ ಆಯೋಗವನ್ನು ಪಿಡಿಪಿ ಭೇಟಿ ಮಾಡುವುದಿಲ್ಲ ಎಂದು ಪಿಡಿಪಿ ಹೇಳಿದೆ. 

"ಈ ಪ್ರಕ್ರಿಯೆಯಿಂದ ದೂರ ಉಳಿಯಲು ನಮ್ಮ ಪಕ್ಷ ನಿರ್ಧರಿಸಿದ್ದು, ಡೀಲಿಮಿಟೇಷನ್ ನ ಭಾಗವಾಗಿರುವುದಿಲ್ಲ, ಈ ಪ್ರಕ್ರಿಯೆಯ ಫಲಿತಾಂಶ ಪೂರ್ವ ಯೋಜಿತವಾಗಿದ್ದು, ಇದರಿಂದಾಗಿ ನಮ್ಮ ಜನರಿಗೆ ನೋವುಂಟಾಗಲಿದೆ ಎಂದು ಪಿಡಿಪಿ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಲೋನ್ ಹಂಜುರ ತಿಳಿಸಿದ್ದಾರೆ. 

ಡೀಲಿಮಿಟೇಷನ್ ನ ಆಯೋಗದ ನೇತೃತ್ವ ವಹಿಸಿರುವ ನಿವೃತ್ತ ನ್ಯಾಯಮೂರ್ತಿ ರಂಜನ ಪ್ರಕಾಶ್ ದೇಸಾಯಿ ಅವರಿಗೆ ಹಂಜುರ ಪತ್ರ ಬರೆದಿದ್ದು, 2019 ರ ಆಗಸ್ಟ್ ತಿಂಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಾಂವಿಧಾನಿಕ ಬದಲಾವಣೆಗಳು ಅಕ್ರಮ ಹಾಗೂ ಅಸಾಂವಿಧಾನಿಕವಾಗಿವೆ ಎಂದು ಹೇಳಿದ್ದಾರೆ. 

ಡೀಲಿಮಿಟೇಷನ್ ಆಯೋಗಕ್ಕೆ ಸಾಂವಿಧಾನಿಕ ಹಾಗೂ ಕಾನೂನಾತ್ಮಕವಾಗಿ ಜನಾದೇಶದ ಕೊರತೆ ಇದೆ, ಈ ಪ್ರಕ್ರಿಯೆಯ ಅಸ್ತಿತ್ವವೇ ಜಮ್ಮು-ಕಾಶ್ಮೀರದ ಜನತೆಯಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸುತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com