ನಾಚಿಕೆ ಇಲ್ಲದ ಪ್ರಧಾನಿ; ಲಸಿಕೆ ಬೇಡಿಕೆ ಪೂರೈಸಲು, ಕೋವಿಡ್ ಬಿಕ್ಕಟ್ಟು ನಿರ್ವಹಿಸುವುದರಲ್ಲಿ ವಿಫಲ: ಮಮತಾ ಬ್ಯಾನರ್ಜಿ

ಕೋವಿಡ್-19 ನಿರ್ವಹಣೆ, ಲಸಿಕೆ ಪೂರೈಕೆ ವಿಷಯವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತ್ತ: ಕೋವಿಡ್-19 ನಿರ್ವಹಣೆ, ಲಸಿಕೆ ಪೂರೈಕೆ ವಿಷಯವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನುದ್ದೇಶಿಸಿ ಮಾತನಾಡಿದ ವೇಳೆ ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ಕಠಿಣ ಶಬ್ದಗಳಿಂದ ಟೀಕಾ ಪ್ರಹಾರ ನಡೆಸಿರುವ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಅವರನ್ನು ನಾಚಿಕೆ ಇಲ್ಲದ ಪ್ರಧಾನಿ ಎಂದು ಹೇಳಿದ್ದು, ಕೇಂದ್ರ ಸರ್ಕಾರ ಲಸಿಕೆ ಪೂರೈಕೆಯಲ್ಲಿ ಹಾಗೂ ಕೋವಿಡ್-19 ನಿಯಂತ್ರಣದಲ್ಲಿ ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. 

ಕೋವಿಡ್-19 ನಿಯಂತ್ರಿಸುವಲ್ಲಿ ವಿಫಲರಾಗಿದ್ದರೂ ಹೋರ್ಡಿಂಗ್ ಗಳಲ್ಲಿ ಹಾಗೂ ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿ ಅವರ ಫೋಟೊ ಕಾಣುತ್ತಿದೆ, ನಾನೂ ಅನೇಕ ಪ್ರಧಾನಿಗಳನ್ನು ನೋಡಿದ್ದೇನೆ ಆದರೆ ಈ ಮಟ್ಟದಲ್ಲಿ ನಾಚಿಕೆ ಇಲ್ಲದವರನ್ನು ಈ ವರೆಗೂ ನೋಡಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ಕೇಂದ್ರದ ನೀತಿಗಳಿಂದ ರಾಜ್ಯಕ್ಕೆ ಲಸಿಕೆ ಅಭಾವ ಎದುರಾಗಿದೆ ಈ ವರೆಗೂ 2.26 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಕೇಂದ್ರವೇ ಅಗತ್ಯವಿರುವ ಡೋಸ್ ಗಳಷ್ಟು ಲಸಿಕೆಯನ್ನು ಪೂರೈಕೆ ಮಾಡಲಿದೆ ಎಂಬ ಭರವಸೆಯ ನಡುವೆಯೂ ಈ ಪೈಕಿ 26 ಲಕ್ಷ ಡೋಸ್ ಗಳನ್ನು ರಾಜ್ಯ ಸರ್ಕಾರವೇ ಖರೀದಿಸಿದೆ. ಲಸಿಕೆ ಅಭಿಯಾನಕ್ಕಾಗಿ ಪ್ರಧಾನಿ ಮೋದಿ ಸರ್ಕಾರ ಪಿಎಂ ಕೇರ್ಸ್ ಫಂಡ್ ನಿಂದ ಹಣ ಏಕೆ ಖರ್ಚು ಮಾಡಿಲ್ಲ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com