ನೈನಿತಾಲ್ ಗಿರಿಧಾಮದಲ್ಲಿ ಕೊರೋನಾ ಸೋಂಕು ಹರಡುವ ಭೀತಿ: 5 ಸಾವಿರ ಪ್ರವಾಸಿಗರನ್ನು ವಾಪಸ್ ಕಳುಹಿಸಿದ ಅಧಿಕಾರಿಗಳು

ಸರ್ಕಾರ ನೀಡಿರುವ ಸುರಕ್ಷತಾ ಮಾರ್ಗಸೂಚಿಗಳ ಅನುಸರಿಸಲು ಸೂಕ್ತ ಸೌಲಭ್ಯ ಹಾಗೂ ವ್ಯವಸ್ಥೆಗಳು ಇಲ್ಲದ ಕಾರಣ ನೈನಿತಾಲ್ ಗಿರಿಧಾಮಕ್ಕೆ ಆಗಮಿಸಿದ್ದ ಸುಮಾರು 5000ಕ್ಕೂ ಹೆಚ್ಚು ಪ್ರವಾಸಿಗರನ್ನು ಅಲ್ಲಿನ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆಂದು ತಿಳಿದುಬಂದಿದೆ. 
ನೈನಿತಾಲ್ ಗಿರಿಧಾಮಕ್ಕೆ ಆಗಮಿಸಿರುವ ಪ್ರವಾಸಿಗರು
ನೈನಿತಾಲ್ ಗಿರಿಧಾಮಕ್ಕೆ ಆಗಮಿಸಿರುವ ಪ್ರವಾಸಿಗರು

ಡೆಹ್ರಾಡೂನ್: ಸರ್ಕಾರ ನೀಡಿರುವ ಸುರಕ್ಷತಾ ಮಾರ್ಗಸೂಚಿಗಳ ಅನುಸರಿಸಲು ಸೂಕ್ತ ಸೌಲಭ್ಯ ಹಾಗೂ ವ್ಯವಸ್ಥೆಗಳು ಇಲ್ಲದ ಕಾರಣ ನೈನಿತಾಲ್ ಗಿರಿಧಾಮಕ್ಕೆ ಆಗಮಿಸಿದ್ದ ಸುಮಾರು 5000ಕ್ಕೂ ಹೆಚ್ಚು ಪ್ರವಾಸಿಗರನ್ನು ಅಲ್ಲಿನ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆಂದು ತಿಳಿದುಬಂದಿದೆ. 

ಪಾರ್ಕಿಂಗ್ ಸ್ಥಳದ ಅಲಭ್ಯತೆ, ಸುರಕ್ಷತಾ ಮಾರ್ಗಸೂಚಿಗಳ ಪ್ರಕಾರ ಅಗತ್ಯವಿರುವ ಕೋವಿಡ್ ಆರ್'ಟಿ-ಪಿಸಿಆರ್ ಪರೀಕ್ಷೆ ನಡೆಸಿ ವರದಿ ನೀಡಲು ಸೌಲಭ್ಯಗಳು ಲಭ್ಯವಿಲ್ಲದ ಕಾರಣ ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ನೈನಿತಾಲ್'ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರೀತಿ ಪ್ರದರ್ಶಿನಿ ಅವರು ಮಾತನಾಡಿ, ಉತ್ತರ ಭಾರತದಲ್ಲಿ ಬಿಸಿಲ ಬೇಗೆ ಹೆಚ್ಚಾಗಿದ್ದು, ಹೀಗಾಗಿ ಗಿರಿಧಾಮಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ, ಕೋವಿಡ್ ನೆಗೆಟಿವ್ ವರದಿ ಇಲ್ಲದಿರವವರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿಲ್ಲ ಎಂದು ಹೇಳಿದ್ದಾರೆ. 

ಕಳೆದ ವಾರ 10000ಕ್ಕೂ ಹೆಚ್ಚು ಪ್ರವಾಸಿಗರು ನೈನಿತಾಲ್ ಹಾಗೂ ಮುಸ್ಸೂರಿಗೆ ಭೇಟಿ ನೀಡಿದ್ದಾರೆಂದು ತಿಳಿದುಬಂದಿದೆ. 

ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಅಲ್ಲಿನ ವ್ಯಾಪಾರಸ್ಥರು ಸಂತಸ ವ್ಯಕ್ತಪಡಿಸುತ್ತಿದ್ದು, ಅಧಿಕಾರಿಗಳಲ್ಲಿ ಮಾತ್ರ ಕೊರೋನಾ ಸೋಂಕು ಹೆಚ್ಚುವ ಆತಂಕ ಶುರುವಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಹರಿದ್ವಾರದಲ್ಲಿ ನಡೆದ ಕುಂಭ ಮೇಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದರ ಪರಿಣಾವೇ ಕೊರೋನಾ ಎರಡನೇ ಅಲೆ ಎದುರಾಗಿತ್ತು ಎಂದು ಹೇಳಲಾಗಿತ್ತು. ಹೀಗಾಗಿ ಪ್ರತೀಯೊಬ್ಬರೂ ಸಾಕಷ್ಟು ಜಾಗರೂಕರಾಗಿರಬೇಕಿದೆ. ಕಳೆದ ವಾರ ಗಿರಿಧಾಮದಲ್ಲಿದ್ದ ಹೋಟೆಲ್ ಗಳ ರೂಮ್ ಗಳು ಶೇ.100ರಷ್ಟು ಬುಕ್ ಆಗಿದ್ದವು ಎಂದು ನೈನಿತಾಲ್ ಹೋಟೆಲ್ ಹಾಗೂ ರೆಸ್ಟೋರೆಂಟ್ ಸಂಘದ ವಕ್ತಾರ ವೇದ್ ಶಾ ಅವರು ಹೇಳಿದ್ದಾರೆ. 

ಸರ್ಕಾರದ ಎಲ್ಲಾ ರೀತಿಯ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ. ಕೋವಿಡ್ ನೆಗೆಟಿವ್ ವರದಿ ಇಲ್ಲದವರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿಲ್ಲ. ಹಲವು ತಿಂಗಳ ಬಳಿಕ ಗಿರಿಧಾಮದಲ್ಲಿ ವ್ಯವಹಾರ ಚಟವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ ಎಂದು ಉತ್ತರಾಖಂಡ ಹೋಟೆಲ್ ಸಂಘದ ಅಧ್ಯಕ್ಷ ಸಂದೀಪ್ ಸಹ್ನಿಯವರು ಹೇಳಿದ್ದಾರೆ. 

ಅನಿಯಂತ್ರಿತ ಸಂಖ್ಯೆಯಲ್ಲಿ ಜನರು ಗಿರಿಧಾಮಕ್ಕೆ ಬರುವುದರಿಂದ ಸೋಂಕು ಹೆಚ್ಚಾಗಿರುವ ಸಾಧ್ಯತೆಗಳಿವೆ. ಹೀಗಾಗಿ ಅಧಿಕಾರಿಗಳು ನಿಯಂತ್ರಿತ ಸಂಖ್ಯೆಯ ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರೊಬ್ಬರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com